Wednesday 2 May 2012

ನಾಟ್ ರಿಚೆಬಲ್


ಮೊನ್ನೆ ನಾನು ಹೊರಡುವಾಗ ಅಮ್ಮ ಚೀಟಿ ಕೊಟ್ಟು ಪುರೋಸತ್ತದಾಗ ನೋಡು ಅಂದಿದ್ದಳು ,
ಎಂದು ಏಕೋ ನೆನಪಾಗಿ ಬ್ಯಾಗ್ ಎಲ್ಲ  ಹುಡುಕಿದೆಅದರಲ್ಲೊಂದು ಫೋನ್  ನಂಬರ್ ,........?
ತಲೆ ತುಂಬಾ  ಬರೆ ಪ್ರಶ್ನೆ ಯಾರದ್ದಿರಬಹುದು ....
ಅಮ್ಮ ಕೊಟ್ಟಿದ್ದೇಕೆ ......?
ವಿಷಯ ನೇರ ಹೇಳುವ ಅಮ್ಮ ಯಾಕೆ ಹೀಗೆ ಮಾಡಿದಳು .....
ಗೊಂದಲದ ಗೂಡಾಗಿ ಅಮ್ಮನಿಗೆ ಫೋನ್ ನಾಯಿಸಿದೆ..
"ಯಾರದ್ದೇ ಅದು ನಂಬರ್ ... ಎಂತದು ಹೇಳದ್ದೆ ಕೊಟ್ಟರೆ  ..  ನಾನೆಂದುಕೊಳ್ಳಲಿ ..
ಹೆಸರಿಲ್ಲ ವಿಷಯ ಏನು ಗೊತ್ತಿಲ್ಲ  ... 
ಅಮ್ಮ ನಿಮ್ಮ ನಂಬರ್ ಕೊಟ್ಟರು ಅಂತ  ಕಾಲ್ ಮಾಡಿದರೆ  ಏನಂದು ಕೊಂಡಾರು.. "
ನನ್ನ ಗೊಂದಲವನ್ನೆಲ್ಲ  ಸೇರಿಸಿ ಅಮ್ಮನಿಗೆ ವರ್ಗಾಯಿಸಿದೆ ..
ಸಿಟ್ಟು ನೆತ್ತಿಗೆರಿರ ಬೇಕು "ಬರುವ ಹೊತ್ತಿಗೆ  ಸುರಬಾಣಕ್ಕೆ
 ಬೆಂಕಿ ಇಟ್ಟುಕಂಡು ಬಂದರೆನಾನು ಎಂತ ಹೇಳಲಾಗ್ತು ..  
ನಿಂಗಕ್ಕೆಲ್ಲ ಎಲ್ಲಿ ಪುರಶತ್ತು ......." ದಬಾಯಿಸಿದರು .... ಕೇಳಿಸಿ ಕೊಂಡೆ..
ಸುಮ್ಮನೆ........  ಮಾತು ಬರಲೇ ಇಲ್ಲ.... ಅಮ್ಮ ಹೇಳಿದ್ದರಲ್ಲಿ ಸುಳ್ಳಿರಲಿಲ್ಲ...
ಓಡುವ ಕಾಲನ ವೇಗಕ್ಕೆ ಹೊಂದಿಕೊಳ್ಳುವ...
ಪ್ರಯತ್ನದಲ್ಲಿ  ಎಲ್ಲೋ ಕಳೆದು ಹೋಗುತ್ತಿದ್ದಿನ..?
ಯಾಕೆ ನನ್ನವರಿಗೆ  ಸಮಯ ಕೊಡಲು ಆಗುತ್ತಿಲ್ಲ ...?
ಬರೇ ವಾರದ ಕೊನೆಯ ದಿನಗಳು  ಕುಟುಂಬಕ್ಕೆ ... 
ಅಂದು ಕೊಂಡರು  ಸಾದ್ಯ ವಾಗುತ್ತಿಲ್ಲ ..
ಯಾವುದೊ ಕೆಲಸ ಉಳಿದಿರುವದು ...
ನಿನ್ನೆ ಮಾಡಲಾರ ದ್ದಕ್ಕೆ ಇಂದು.. 
ಮುಗಿಯದ ಕೆಲಸ ಹಚ್ಚಿಕೊಂಡು....
ದ್ವೀಪವಾಗುತ್ತಿದ್ದಿವ..?  ನನ್ನವರು  ಹೋಗಿ ನಾನು ... ಆದದ್ದಕ್ಕೆ.... 
ಎಲ್ಲೋ ನನ್ನೊಳಗೆ ನಾನೆ ಕಳೆದು ಹೋಗಿದ್ದಕ್ಕೆ ..
ಕ್ಷಣ ಬೇಸರ ಕಾಡಿ... ಮತ್ತೆ ಕೆಲಸದಲ್ಲಿ  ಕಳೆದು ಹೋಗುವ ನನ್ನನ್ತಹ ಎಡಬಿಡಂಗಿ ಗಳಿಗೆ ಸರಿಯಾಗೆ ಹೇಳಿದ್ದರು ಅಮ್ಮ ....
ನಂಬರ್ ಅದೇ ನಿನ್ನ  ಜೊತೆಗೆ ಶಾಲೆಗೆ  ಬರುತ್ತಿದ್ದ 'ಅನುದು ...
ಅವತ್ತು ಪೇಟೆಗೆ ಹೋದಾಗ ಬಟ್ಟೆ ಅಂಗಡಿಯಲ್ಲಿ  ಸಿಕ್ಕಿದ್ದ"
ನಿನ್ನ ಹತ್ತಿರ ಮಾತಾಡ ಬೇಕು ಅಂತೆಲ್ಲ ಹೇಳಿದ್ದ ....
ನಿನ್ನ ನಂಬರ್ ನೆನಪಾಗದ್ದೆ.... 
ಅವಳದ್ದೇ ತಗಂಡು ಬಂದಿ  ಮಾಡಲ್ಲೆ  ಹೇಳ್ತಿ ಹೇಳಿದ್ದಿ.... ಮರ್ತಿಕಡಾ...... ಅಲ್ಲಿ ..
ಸುಬ್ಬ ಬಂದು ನಿಂತಿದ್ದ ಮಜ್ಜಿಗೆ  ತೋಟಕ್ಕೆ ತಗಂಡು ಹೋಗವಡಾ... 
ಮಾತಾಡ್ತಿದ್ರೆ  ಹೊತ್ತು ಹೋಗಿದ್ದೆ ಗೊತ್ತಾಗ್ತಿಲ್ಲೆ " 
ಟಾಟಾ ....
ಅಮ್ಮ ಕೊಟ್ಟ ನಂಬರ್ ತಿರುವಿದೆ .... 
ಅತ್ತ ಲಿಂದ  ಅದೇ ದ್ವನಿ  ಕೆಳ್ದ್ದೆ ಸುಮಾರು ವರ್ಷ ಕಳೆದಿತ್ತು ... ಬದಲಾಗಿರಲಿಲ್ಲ ...
ಅನು ನಾನೆ .... ಮಾತಿನಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ ... ಮಕ್ಕಳು ಅವರ ಶಾಲೆ .... ಸಂಕಷ್ಟಿ ..... ಅಡಿಕೆ ಕೊಳೆ ....ಬಿ-ಪಿಶುಗರು  .... 
ಎಲ್ಲ ಮಾತಾದ ಮೇಲೆಮೊಬೈಲ್ ಹೊಸದು ಕೊಡಿಸಿದರು ... ನನಗೀಗ  ಚೂಡಿದಾರ್  ಹಾಕಲ್ಲೆ ಅಡ್ಡಿಲ್ಲೆ ಹೇಳಿದ್ದ ...
ನಂಗಂತೂ ಆಕಾಶಕ್ಕೆ ಮೂರೇ ಗೇಣು ...... ಅಂತೆಲ್ಲ ಅವಳು ಮಾತಾಡುತ್ತಿದ್ದರೆ .....ನಾನೆಲ್ಲೋ  ಕಳೆದು ಹೋದ ಭಾವ ....
ವಿಶ್ ಮಾಡಿದೆ ಅವಳ ಖುಷಿಯಲ್ಲಿ ನಾನು ಬಾಗಿಯಾದೆ .....!

ಸಾಕು ಇನ್ನೊಂದು  ದಿನ ಮಾತಾಡಕ್ಕೆ  ವಿಷಯ ಇರ್ಲಿ...ಇವತ್ತಿಗೆ ಸಾಕು ಅಂತ ಅವಳೇ ಕಟ್ ಮಾಡಿದಳು ....
ನಾನು ಸುಮಾರು ವರ್ಷ ಹಿಂದಕ್ಕೆಓಡಿದೆ...........
ಗುಬ್ಬಿ ಎಂಜಲು ಮಾಡಿ ತಿನ್ನುತ್ತಿದ್ದ ಭಟ್ರ ಮನೆಯ ಪೇರಳೆ ಹಣ್ಣು ....ರಜದಲ್ಲಿ ಇಜಾಡುತ್ತಿದ್ದ ಹೊಳೆ ಕಟ್ಟು ...
ಹೊಳೆ ಸಂಕದ ಮೇಲೆ ಕುಳಿತು ...ತಿಂದ ಪಕ್ಕದ ಮನೆಯ ಸವತೆ ಕಾಯಿ .... ಗಜಲಿಂಬೆ ಹಣ್ಣು ...
 ಮೆತ್ತಿಗೆ ಕುಳಿತು ಓದುತ್ತಿದ್ದ ಚಂದಮಾಮ,ಕಾಣುತ್ತಿದ್ದ ಕನಸುಗಳು...
ಶಾರುಕ್ಅಮೀರ್ ಖಾನ್ ಗಳಂತೆ  ಇರುವ ಹುಡುಗ ನನ್ನ ಮದುವೆ ಮಾಡಿ ಕೊಳ್ಳುತ್ತಿನಿ...
ಚೂಡಿದಾರ್ ಹಾಕುತ್ತೀನಿ ... 
ದಿನಾಲೂ ಸೀರೆ  ಬೇಜಾರಪ್ಪ..
(ನಮ್ಮ ಅಪ್ಪಂದಿರು ಅವತ್ತಿನ ಕಾಲಕ್ಕೆ ಚೂಡಿದಾರ್ ಹಾಕಕ್ಕೆ ಬಿಡುತ್ತಿರಲಿಲ್ಲ )
ಅಂತೆಲ್ಲ ಮಾತಾಡಿ ... ನಮ್ಮಲ್ಲಿ ಇಲ್ಲದ ಚೂಡಿದಾರ್ ಕನಸನ್ನ ನನಸಾಗಿಸಲು ....
 ಅಕ್ಕನ ಚೂಡಿದಾರ್ ಕಡ ತಗೊಂಡು ಹಾಕಿಕೊಂಡು .... ಹೋಗಿದ್ದು ಇನ್ನು ನೆನಪಿದೆ ( ಇಂದೂ ನನ್ನ ವಾರ್ಡ್ರೋಬ್ ತೆಗದಾಗಲೆಲ್ಲ ಅಣಕಿಸುವ ಮತ್ತೆಂದು ಅಕ್ಕ ಹಾಕದ "ನನಗೆ ಬೇಡ ಅದು" ಅಂದ ನೆನಪು ಮಾಸಲೇ ಇಲ್ಲ ...  ಹೀಗೆ ಅಂತ ಗೊತ್ತಿದ್ದರೆ ಅದೇ ಪಿಂಕ್ ತರುತ್ತಿದ್ದೆ ಅಂತ ಮಾತಾಡಿ  ಕೊಂಡರೂ  ಇವತ್ತಿಗೂ   ನೋವು ಎದೆಯಾಳದಲ್ಲಿಎಲ್ಲೋ ಕುಳಿತಿದೆ ) 
ಪಿ ಯು ಸಿ  ವರೆಗೆ ಜೊತೆಯಾದ ಅನು... ನಾನು ಡಿಗ್ರೀ  ಸೇರುವ ಹೊತ್ತಿಗೆ  ಹಸೆಮಣೆ  ಏರಿದ್ದಳು
ಅಮ್ಮ ನ  ಸೀರೆಯನ್ನ ಮೊದಲ ಬಾರಿಗೆ ಉಟ್ಟು ಹೋಗಿದ್ದೆ ....
ನಾನು.. 
  ಇಬ್ಬರು  ಮಕ್ಕಳು, ಆಮೇಲೆ ನಾವು ಸಿಕ್ಕಿದ್ದೇ ಅಪರೂಪ ... ಸಿಕ್ಕಾಗೆಲ್ಲೋ...
ತರಾತುರಿಯಿಂದ "ಬಾರೇ ನಮ್ಮನಿಗೆ"  ಸೆರಗು ಸೊಂಟಕ್ಕೆ ಸಿಕ್ಕಿಸಿ ಒಬ್ಬ ಮಗಳನ್ನ ಪೆಟ್ರೋಲ್  ಟ್ಯಾಂಕ್  ಮೇಲೆ ಕೂರಿಸಿ,
 ಇನ್ನೊಬ್ಬಳನ್ನ  ಮಡಿಲಲ್ಲಿ ಕೂರಿಸಿ ಕೊಂಡು ಹೊರಟು ಬಿಡುತ್ತಿದ್ದಾಗ ಮಾತು ತುಂಬಾನೇ ಇತ್ತು...... 
ಮತ್ತೆ ಅದೇ ದಿನಗಳು ಬರ ಬಾರದೇ.......  
ಓದು ಮುಗಿದು  ಎರಡು ವರ್ಷ ಕೆಲಸ ಮಾಡಿ ನಾನು ಮದುವೆ ಯಾಗುವ ಹೊತ್ತಿಗೆ ....
ಮಣ-ಬಾರದ ಸೀರೆ ಉಟ್ಟು ... ಗಂಡ -ಮಕ್ಕಳೊಂದಿಗೆ  ಬಂದದ್ದು.... 
ಆಮೇಲೆ ಅವಳ ಬೇಟಿಯಿಲ್ಲ.. ಹೋದಾಗೆಲ್ಲ ಅಮ್ಮನನ್ನ  ಕೆಳುತ್ತಿನಿ ... ಅಮ್ಮ ಅನು ಹೇಗಿದ್ದಾಳೆ ಸಿಕ್ಕಿದ್ದಳ ?
ಇದು  ಬರೇ ಪ್ರಶ್ನೆ ಯಾಗಿಯೇ  ಉಳಿಯ ತೊಡಗಿದಾಗ .... ಸುಮ್ಮನಾಗಿದ್ದೆ ..... 
ದೂರದೂರಲ್ಲಿ ನಮ್ಮ  ಕೆಲಸ ಗಳಲ್ಲಿ  ಕಳೆದು ಹೋಗುತ್ತಿದ್ದಾಗ ... ಮಿಂಚಿ ಮರೆಯಾಗುವ  ನೆನಪುಗಳು....
  ಪುಟ್ಟ ಪುಟ್ಟ ಸಂತೋಷಗಳಿಗೆ  ತೆರೆದು ಕೊಳ್ಳುತ್ತಿರುವ 'ಅನು' ನನ್ನೆದುರು  ಎತ್ತರಕ್ಕೆ ಬೆಳೆಯುತ್ತಿದ್ದಾಳೆ ....

ನಾನು ಕಾಲನ  ಬೆನ್ನಟ್ಟಿ ಕಳೆದು ಕೊಂಡ... 
ಪುಟ್ಟ ಪುಟ್ಟ ಸಂತೋಷ ಗಳನ್ನ ಮತ್ತೆ ಹೆಕ್ಕಲು ತಯಾರಾಗುತ್ತೇನೆ...
ಯಾಕೆ ಬೇಕಿತ್ತು ಹೆಸರು ... ಕೆಲಸ... ದಿನವಿಡೀ ಮನೆಯಲ್ಲಿದ್ದು ಅಪರಿಚಿತರಂತೆ ... ಲ್ಯಾಪ್ಟಾಪ್ ನಲ್ಲಿ ಕಳೆದು ಹೋಗುವ ನಾವು .... ಕಳೆದು ಕೊಂಡದ್ದೆಲ್ಲಿ.... ನಮ್ಮ ಖುಷಿಯನ್ನ ... 
ಮಾರಿಕೊಂಡ  ಸ್ವಾಭಿಮಾನವನ್ನ ದಿನವಿಡೀ  ಹುಡುಕುವಲ್ಲಿ..........
ಫೋನ್ ನಾಯಿಸುತ್ತೇನೆ..... ನಾಟ್ ರಿಚೆಬಲ್ ........ 

45 comments:

  1. ಹೌದು ವಂದನಾ...
    ನನಗೂ ಎಷ್ಟೋ ಸಾರಿ ಅನ್ನಿಸಿದ್ದುಂಟು....

    ಅಪರಿಚತರಾಗಿಯೇ ಇದ್ದುಬಿಡಬೇಕಿತ್ತು...
    ಹೆಸರಿನ ಅಹಂ ಇಲ್ಲದ ನಿರಾಳ ಭಾವ...

    ಚಂದದ ಬರವಣಿಗೆ... ಅಭಿನಂದನೆಗಳು....

    ReplyDelete
    Replies
    1. ಪ್ರಕಾಶಣ್ಣ
      thank u
      ನಿಜ ಅಕ್ಕನ ಡ್ರೆಸ್ ಎಂದು ಕೂಡ ನನ್ನಲ್ಲೇ ಇದೆ...
      ಬೇರೆಯವರ ಬಟ್ಟೆ ಉಪಯೋಗಿಸುವ ಮುನ್ನ ಯೋಚನೆ ....
      ನಾಳೆ ಹಿಗಾಗ ಬಾರದು..... ಅಂತ ಎದುರು ಇಟ್ಟು ಕೊಂಡಿದ್ದೇನೆ...
      ನೆನೆಪು ಮಾತ್ರ ... ಅತ್ತ ಸಿಹಿಯು ಅಲ್ಲ ಕಹಿಯು ಅಲ್ಲ ,
      ಮೊದಲ ಬಾರಿ ಚೂಡಿದಾರ್.... ಹಾಕಿದ್ದು ಖುಷಿಯಾದರೆ ,
      ಅಕ್ಕ ತಿರುಗಿ ಪಡೆಯದ್ದು.... ಬೇಸರ ......
      ಕ್ರೀಮ್ ಬಣ್ಣದ ಚೂಡಿದಾರ್ ಮತ್ತೆ ಖಡು ನೀಲಿ ಬಣ್ಣದ ದುಪ್ಪಟ್ಟ .....
      ನೆನಪಿಗೆ .......

      Delete
  2. ನಮ್ಮ ಹಮ್ಮಿನ ಕೋಟೆ ಕೆಲವೊಮ್ಮೆ, ನಾಟ್ ರೀಚೇಬಲ್ ಮಾಡಿಬಿಡುತ್ತವೆ.. ಚಂದದ ಬರಹ .

    ReplyDelete
  3. ಇಷ್ಟವಾಯ್ತು. ಚಂದದ ಬರಹ.

    ReplyDelete
  4. ವಂದನಾ...ಚನ್ನಾಗಿದೆ... ನಾಟ್ ರೀಚಬಲ್... ಕಾನ್ಸೆಪ್ಟ್ ಇಂದಿನ ಕಾಲಮಾನಕ್ಕೆ ತಕ್ಕದಾಗಿದೆ...
    ಲೇಖನ ಇನ್ನೂ ಸೂಪರ್....

    ReplyDelete
  5. ತುಂಬಾ ಚೆನ್ನಾಗಿದೆ. ನಿಮ್ಮ ಲೇಖನ ಓದುತ್ತ ನನಗೂ ನನ್ನ ಹಳೆಯ ನೆನಪುಗಳು ಮರುಕಳಿಸಿದವು.
    ಹೈ ಸ್ಕೂಲ್, ಕಾಲೇಜ್ ತನಕ ಜೊತೆಗಿದ್ದು ಮುಂದೆ ನೀನೆಲ್ಲೋ ನಾನೆಲ್ಲೋ ಅಂತ ಎಲ್ಲೋ ಇದ್ದು ಬರೀ ಹಳೆಯ ನೆನಪುಗಳಲ್ಲೇ ಜೀವನ ಸಾಗಿಸುತ್ತಿದ್ದೇವೆ ನಾವುಗಳು. ಆದರೆ ಇಂದಿನ ಹೈ ಟೆಕ್ ಜಗದಲ್ಲಿ ನೆನಪುಗಳು ಕೂಡ ನೆನಪಿಗೆ ಬಾರದಂತಾಗಿದೆ. ದಿನವಿಡೀ ಕೆಲಸ, ಟ್ರಾಫಿಕ್ ಜಾಮ್, ಮನೆಗೆ ಬಂದೊಡನೆ ಮನೆಯ ಕೆಲಸ ಇವೆಲ್ಲದರ ನಡುವೆ ಸಂಬಂಧ ಸ್ನೇಹ ಎಲ್ಲ ಮರೆತು ಬಿಟ್ಟಿದ್ದೇವೆ.
    ನಾವಾಯಿತು ನಮ್ಮ ಕೆಲಸವಾಯಿತು ಅಂದುಕೊಳ್ಳುತ್ತ ಎಲ್ಲಾ ವಿಷಯಗಳಿಂದಲೂ ನಾವೇ ನಾಟ್ ರೀಚೆಬಲ್ ಆಗಿಬಿಟ್ಟಿದ್ದೆವೇನೋ ಅನಿಸುತ್ತದೆ ಅಲ್ಲವೇ?

    ReplyDelete
    Replies
    1. ನನ್ನ ಬರಹ ಧನ್ಯ ವಾಯಿತು .... thank u

      Delete
  6. Vandana,
    tumbaa chennaagide!
    nenapugaLu badukina pustakada bennudiyaagi
    kanasugaLu badukina pustakada munnudiyaagi
    vaastavada jothe saaguva naavu yaavudannu mareyalu saadhyavilla....
    liked it vandana....
    Roopa

    ReplyDelete
  7. ತುಂಬಾ ಚೆನ್ನಾಗಿದೆ............

    ಹಳೇಯ ನೆನೆಪುಗಳೊಂದಿಗೆ ನಾನೂ ಕಳೆದುಹೊಗಿದ್ದೆ................

    ReplyDelete
  8. ವಂದನಾ, ನಮ್ಮ ಕನ್ನಡ ಅದೆಷ್ಟು ಶ್ರೀಮಂತ ಅಲ್ಲವೆ?! ನಿಮ್ಮ ಭಾಷೆಯನ್ನು ಬಳಿಸಿದ್ದು ಖುಷಿ ಕೊಟ್ಟಿತು (ಕೆಲವು ವಾಕ್ಯಗಳು ತಕ್ಷಣ ಗ್ರಹಿಕೆಗೆ ಬರಲಿಲ್ಲ ನಿಜ ಆದರೆ ಭಾವ ಸ್ಪಷ್ಟವಿರುವುದರಿಂದ ಅಷ್ಟು ಕಷ್ಟವಾಗಲಿಲ್ಲ).

    ReplyDelete
    Replies
    1. ಧನ್ಯ ವಾದಗಳು ಜಯಲಕ್ಷ್ಮಿ ಅವರೆ..

      Delete
  9. ತಂಗೀ..ಚೊಲೋ ಬರದ್ಯೇ..
    ಹಳೆಯ ನೆನಪುಗಳು ಎಷ್ಟು ಖುಷಿ ಕೊಡ್ತು ಅಲ್ದಾ..
    ಅವೆಲ್ಲ ಹೀಗೆ ಕಥೆಯಾಗಬೇಕು..
    ಜೊತೆಗೆ ವರ್ತಮಾನವೂ ಮುಂದಿನ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಅಷ್ಟೇ ಸುಂದರ ಕಥೆ ಕಟ್ಟಿ ಕೊಡುವ ಹಾಗಿರಬೇಕು..

    ...ಹಿಂಗೆ ಬರೀತಾ ಇರು..


    ---ದತ್ತು..

    ReplyDelete
  10. ನಿಮ್ಮ ಪ್ರೋತ್ಸಾಹ ಹಿಂಗೆ ಇರವು ಯಾವತ್ತಿಗುವ.....
    ನಮ್ಮ ವರ್ತಮಾನ ಮುಂದಿನವರಿಗೆ ಬರೆ ಕತೆ ಕಟ್ಟಿ ಕೊಡುವಂತಿದ್ದರೆ ಸಾಕಾ...?
    ಅಕ್ಕ-ಪಕ್ಕ ಏನಾಗುತ್ತಿದೆ ಅನ್ನುವ ಚಿಕ್ಕ ಅರಿವು ಅವರಿಗಿರುವನ್ತಿರ ಬೇಕು ....
    ಬರೇ ಇಂಟರ್ನೆಟ್ - ಸ್ಕೂಲ್ ಫ್ರೆಂಡ್ಸ್ ಅಂತಿರದೆ... ತಕ್ಷಣಕ್ಕೆ ಎಲ್ಲರೊಟ್ಟಿಗೆ ಬೇರೆಯುವನ್ತಿರ ಬೇಕು.
    ನಮ್ಮ ಮಕ್ಕಳಿಗೆ ಸಾಮಾನ್ಯ ಜೀವನದ ಪರಿಚಯ ಇರುವಂತಿರ ಬೇಕು..
    ಏನಂತಿರ ? ದತ್ತಣ್ಣ .........

    ReplyDelete
  11. ಸುಂದರ ಬರಹ.. ವಿಶೇಷ ನೆನಪುಗಳ ಹೂಗುಚ್ಛ.. ಒಂದು ಸ್ವಲ್ಪ ಕನ್ನಡ ಭಾಷೆಯ ಬಳಕೆಯಲ್ಲಿ ವಿಭಿನ್ನತೆ .. ಆದರೂ ಸಹ ಕಥೆಯ ಸಂಪೂರ್ಣ ಚಿತ್ರಣ ಅರ್ಥವಾಯಿತು.. ಈ ನೆನಪುಗಳು ಕೆಲವೊಮ್ಮೆ ನಮ್ಮಲ್ಲಿ ಬಂದಾಗ ಏನೋ ಹೊಸತನವನ್ನು ಪಡೆಯುವ ಆಸೆ ಹಾಗು ಆ ವಿಷಯದ ಆಕರ್ಷಣೆ ಹೆಚ್ಚುತ್ತದೆ .. ಆದರೆ ಅದೇ ನೆನಪುಗಳು ನಾವು ಎಷ್ಟು ನೆನಪಿಸಿಕೊಳ್ಳಲು ಪ್ರಯತ್ನಿಸಿದರೂ ಬರದೇ ಇದ್ದಾಗ ಅದು ನಾಟ್ ರೀಚೆಬಲ್ ನೆನಪುಗಳಾಗಿ ಹೋಗುತ್ತವೆ.. :)
    ಆದರೆ ಒಬ್ಬ ಅಪರಿಚಿತ ವ್ಯಕ್ತಿಯ ಅಂತರ್ಜಾಲದ ಗೆಳೆತನವೂ (ಕೇವಲ ಹೆಸರು ಮಾತ್ರದ ನೆನಪುಗಳು) ಹೆಚ್ಚು ದಿನ ಗಟ್ಟಿಯಾಗಿ ಉಳಿಯಲು ಈ ರೀತಿಯ ಕಥೆಗಳೇ ಕಾರಣ .. ಒಬ್ಬ ಲೇಖಕರಾಗಿ ಪರಿಚಿತವಾದ ದಿನಗಳು ಮುಂದೊಮ್ಮೆ ಎಲ್ಲಾದರೂ ಅಪರೂಪದ ಸಮಾರಂಭಗಳಲ್ಲಿ ಭೇಟಿಯಾದಾಗ , ಪರಿಚಯ ಬೆಳೆಸಲು ಕಾರಣ ಕೊಡುವುದೇ ಈ ಭಾವನೆಗಳ ಅಂತರಾಳವನ್ನು ಗ್ರಹಿಸುವ ಸನ್ನಿವೇಶಗಳು .. ಹಾಗು ಆ ಸನ್ನಿವೇಶಗಳನ್ನು ಬೇರೆ ಬೇರೆ ಕಲ್ಪನೆಗಳಲ್ಲಿ ಬೇರೆ ಬೇರೆ ಸ್ನೇಹಿತರ ನೆನಪಿನಲ್ಲಿ ಮೂಡುವಂತೆ ಮಾಡುವುದು .. & ಈಗ ಕಥೆಯಿಂದ ನಿಮ್ಮ ನೆನಪು ಹೆಚ್ಚಾಗಿ , ನಿಮ್ಮ ಬರವಣಿಗೆಯ ಭಾವನೆಗಳ ಆಳವಾದ ಅರ್ಥಗಳ ಪರಿಚಯ ಅತೀ ಸೊಗಸಾಗಿ ಚಿತ್ರಿತವಾಗಿ , ಮತ್ತಷ್ಟು ಹೆಚ್ಚು ಹೆಚ್ಚು ನಿಮ್ಮ ಬ್ಲಾಗಿನ ಬರಹಗಳನ್ನು ಓದುವಂತೆ ಮಾಡಿದೆ.. & ಸಮಯದ ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿನ ಕಥೆಗಳು , ಕವನಗಳನ್ನು ಓದಿ , ಉತ್ತರಿಸುತ್ತೇವೆ.. ನಿಮ್ಮ ಬರವಣಿಗೆಯನ್ನು ಮುಂದುವರೆಸಿರಿ .. ಒಬ್ಬ ಅಪರಿಚಿತ ನಿಮ್ಮ ಕಥೆಗಳಿಗಾಗಿ ಕಾಯುತ್ತಿರುತ್ತಾನೆ ಎಂಬುದನ್ನು ಮರೆಯದಿರಿ .. ಉತ್ತಮ ಮೆಚ್ಚುಗೆಯ ಲೇಖನಗಳ ಓದಿ ಪ್ರೋತ್ಸಾಹ ಕೊಡಲು ನಾವು ತಯಾರಿದ್ದೇವೆ.. ಆದರೆ ಈ ಅಪರಿಚಿತ ಸ್ನೇಹದಲ್ಲಿ ಸ್ವಲ್ಪ ಆದರೂ ನಂಬಿಕೆ ಇರಲಿ .. ಆದೇನೆಂದರೆ ಪ್ರತಿಸ್ಪಂದನೆ ತಡವಾದರೂ ಸಹ ತಪ್ಪದೇ ಹತ್ತಾರು ಸಾಲುಗಳ ಅನಿಸಿಕೆ ಮತ್ತು ಅಭಿಪ್ರಾಯಗಳು ನಮ್ಮ ನೆನಪನ್ನು ನಿಮ್ಮಲ್ಲಿ ಉಳಿಯುವಂತೆ ಮಾಡುತ್ತವೆ.. ನಿಮ್ಮ ಈ ಒಂದು ಕಥೆ ನಿಮ್ಮ ನೆನಪುಗಳು ನಮ್ಮಲ್ಲಿ ಉಳಿಯುವಂತೆ ಮಾಡಿದೆ.. :) ವಂದನಾ ಅಮ್ಮ ಅನು .. ಒಂದು ಫೋನು .. ಅದು ಕೊನೆಯಲ್ಲಿ ನಾಟ್ ರೀಚೆಬಲ್ .. :) :)

    ReplyDelete
    Replies
    1. ಧನ್ಯ ವಾದಗಳು ಪ್ರಶಾಂತ್ ,
      ಹವ್ಯಕ ಕನ್ನಡದ ಕೆಲವು ಸಾಲು ಗಳಿವೆ ...
      ಆಗೀಗ ತುಂಬಾನೇ ಕೆಲವು ಗಟನೆ ಗಳು ಕಾಡಿದಾಗ ...
      ಅಕ್ಷರ ರೂಪ ಕೊಟ್ಟು ಸಂತೋಷ ಪಡುತ್ತಿನಿ ...
      ಕೆಲವು ಭಾಷಾ ದೋಷ ವಿರ ಬಹುದು ....
      ಸುಧಾರಿಸಿ ಕೊಳ್ಳಲು ಪ್ರಯತ್ನಿಸುವೆ ....
      ತಪ್ಪು ಗಳಿದ್ದರೆ ತಿಳಿಸಲು ಮುಜುಗರ ಬೇಡ ...
      ನಿಮ್ಮೆಲ್ಲರ ಸಹಕಾರ ಬೇಕು ...

      ವಂದನಾ ಶೀಗೆಹಳ್ಳಿ

      Delete
  12. ಮನಸ್ಸು ಕೆಲವು ಬಾರಿ ಅಪರಿಚರಾರೇ ಇದ್ದು ಬಿಡುವ ಹಾಗೇ ನಿರ್ಧಾರಕ್ಕೆ ಬಂದು ಬಿಡುತ್ತದೆ.

    ಒಳ್ಳೆಯ ಬರವಣಿಗೆ.

    ReplyDelete
  13. ನೈಸ್ ವಂದನ ...ನಿಜ ನಮ್ಮ ಬಾಲ್ಯದ ಜೀವನವೆಲ್ಲ ಈಗ ನಾಟ್ ರೀಚೆಬಲ್ ... ತುಂಬಾ ಚೆನ್ನಾಗಿದ್ದು ,... ಆದ್ರೂ ವಂದನ ಅಂತ ನೆನಪಿಗೆ ತಂದುಕೊಳ್ಳದಿದ್ದರೆ ನೀನು ಚೆಂದಾಗಿ ಹೈಸ್ಕೂಲ್ ಲ್ಲಿ ಲಂಗ ದಾವಣಿ ಹಾಕಿಕೊಂಡು ಬರ್ತಿದ್ಯಲಿ ಅದೇ ನೆನಪಾಗ್ತು ... ಆದರೆ ಈಗಿನ ವಂದನ ಸುಮಾರ್ ಚೇಂಜ್ ಆಜು ಅಲ್ದಾ?

    ReplyDelete
  14. ha ha ವೆಂಕಟೇಶ್ ....
    ಮಜಾ ಇತ್ತು ಅವತ್ತು ಅಲ್ದಾ .... ನೀಲಿ ಲಂಗ -ಬಿಳಿ ಬ್ಲೌಸ್, ಖಾಕಿ ಚಡ್ಡಿ - ಬಿಳಿ ಅಂಗಿ, PUC ವರೆಗೂ ಅದೇ
    ಆದ್ರೆ ಬದಲಾವಣೆಯ ಗಾಳಿ ಬೇಗ ಬಿಸ್ತ ? ಅಥವಾ ನಾವೇ ಬೇಗ ಹೊಂದಿಕ್ಯಂಡು ಬಿಡ್ತವ ಗೊತ್ತಿಲ್ಲೆ ....
    ಅಂತು ಬದಲಾಗಿದ್ದಂತು ನಿಜ .....
    ಭಾವನೆ ಗಳನ್ನ ಹೊರಗೆ ಹಾಕಲು ನಾವು ಕಂಡು ಕೊಂಡ ದಾರಿಗಳು ಬೇರೆ ..
    ಇವತ್ತಿಗೂ ಅದೇ ವಂದನಾ... ವೇಷ ಮಾತ್ರ ಬೇರೆ ....ಮನಸ್ಸು ಮಾತ್ರ .... ಅದೇ,

    ReplyDelete
  15. really very nice article madam :))

    ReplyDelete
  16. ಸವಿನೆನಪುಗಳು..ಬರಹ ಇಷ್ಟವಾಯ್ತು...ನನ್ನ ಮೊಣಕಾಲು ದಪ್ಪ ಇದೆಯೆಂದು ನನ್ನ ಅಮ್ಮ ಸ್ಕರ್ಟ್ ಹಾಕಲು ಬಿಡದಿದ್ದದ್ದು ನೆನಪಾಯ್ತು.

    ReplyDelete
  17. ಹಳೆ ಗೆಳೆಯರು ನಿಜಕ್ಕೂ ಅನರ್ಘ್ಯ ಮುತ್ತು ರತ್ನಗಳು...ನಾವಂತೂ ಹಳೆ ಗೆಳೆಯ-ಗೆಳತಿಯರ ಕೂಟ ಸೇರಿಸೋ ಪ್ರಯತ್ನದಲ್ಲಿದ್ದೀವಿ ಒಂದಷ್ಟು ಮಂದಿ...ಅದೇ ಹೊತ್ತಿಗೆ ನಿಮ್ಮ ಬರಹ ನೋಡಿದೆ...ಖುಷಿಯಾಯ್ತು...
    -ವೇಣು

    ReplyDelete
  18. ನಾಟ್ ರೀಚೆಬಲ್... ಅಣ್ಣನ ಅ೦ಗಿ, ಕೊಡೆ, ಚೀಲ, ಚಪ್ಪಲಿ, ನಾನು ಹಾಕಿ ಶಾಲೆಗೆ ಹೋದ ನೆನಪು ..ಅದನ್ನೇ ನನ್ನ ತಮ್ಮನಿಗೆ ವರ್ಗಾಯಿಸಿದ್ದ ನೆನಪು ಗಾಢವಾಗಿ ಕಾಡುತ್ತಿದೆ. ಹಳೇ ನೋಟ್ಸ್ ಬುಕ್ ನಲ್ಲಿ ಬರೆಯದೇ ಉಳಿದ ಖಾಳಿ ಹಾಳೆಗಳನ್ನು ಜೋಡಿಸಿ ರಫ್ ಬುಕ್ ಮಾಡಿದ ನೆನಪುಗಳು ..ಎಲ್ಲವೂ ನಿಮ್ಮ ಲೇಖನ ಫ್ಲಾಶ್ ಬ್ಯಾಕ್ ಗೆ ಹೋದ ಹಾಗೆ ಆಯಿತು ನೋಡಿ. ಅನನ್ಯ ಬರಹ

    ReplyDelete
  19. ನಮಸ್ತೆ ... ನನ್ನ ಬರಹದ ಓದುಗರಿಗೆ ಒಂದು ವಿಜ್ಞಾಪನೆ .ಏನು ಅಂದರೆ
    ನನ್ನ ಬ್ಲಾಗ್ ನಲ್ಲಿಯ ಬರಹ ಎಲ್ಲೇ ಶೇರ್ ಮಾಡಿದ್ದೂ ಕಂಡರೆ ನನಗೆ ದಯವಿಟ್ಟು ತಿಳಿಸಿ
    ಅವಧಿಯಲ್ಲಿ ನನ್ನ ಬರಹ ಬಂದಿದೆ ...ಓದುಗರು ಜಾಸ್ತಿ ಯಾಗುತ್ತಾರೆ .....
    ಆದರೆ ಪ್ರಕಟಿಸಿದ ನಂತರ ಒಂದು ಮಾತು ತಿಳಿಸುವ ಸಂಪ್ರದಾಯ ವಿದ್ದರೆ ಒಳ್ಳೆಯದು....

    ReplyDelete
  20. nice writeup...u hv conveyed many things in a context...

    ReplyDelete
    Replies
    1. thank u ವಿಕ್ರಮ ಹತ್ವಾರ...

      Delete
  21. Nice one,felt very happy because after long time i have read one beautiful blog.

    ReplyDelete
    Replies
    1. ಅಹರ್ನಿಶಿ ಧನ್ಯವಾದಗಳು .... ನಿಮಗೂ ನಿಮ್ಮ ಸ್ನೇಹಿತರ ನೆನಪಿಸಿದ್ದರೆ ನನ್ನ ಬರಹ ಸಾರ್ಥಕ ...
      ನಾನು ಯಾವಾಗಲೋ ಬರಿಯಲೇ ಬೇಕು ಅನ್ನಿಸಿದಾಗ ಬರೆದು ಕೊಳ್ಳುವವನು....
      ಎಲ್ಲೋ ತುಂಬಾನೆ ಕಾಡಿದ ಪಾತ್ರಗಳು ...

      Delete
  22. tumba chennagiddu vandanakka ....hale dinagalanna nenapu madkyandange khushi agtu alda.....

    ReplyDelete
  23. ಹೇಯ್ ಶ್ರೀದೇವಿ thanku ...

    ReplyDelete
  24. ಚೆಂದಿದ್ದು ಲೇಖನ. ನಮಗೇ ಸಮಯ ಇಲ್ದಿದ್ದಷ್ಟು ಬ್ಯುಸಿ ಆಯ್ದ ಅಂದ್ಕತ್ತಿರ್ತ್ಯ ಇವತ್ತು. ಆದ್ರೆ ವಾಸ್ತವದಲ್ಲಿ ನಾವು ಕೊಡ್ತಿರೊ ಅಂತ ಪ್ರಾಮುಖ್ಯತೆ ಬೇರೆ ಆಗಿರ್ತು ಕೆಲ ಸಲ.Nobody in the world is busy, it all depends on priority.. ಹೇಳ ಮಾತು ನೆನ್ಪಾಗ್ತಾ ಇದ್ದು. ಸಣ್ಣ ಸಣ್ಣ ಸಂತೋಷಗಳನ್ನೇ ಮಿಸ್ ಮಾಡ್ಕತ್ತಾ ಇರ್ತ್ಯ.. ಇರ ಇಪ್ಪತ್ನಾಲ್ಕು ಘಂಟೇಲೇ ಎಲ್ಲಾ ಮಾಡಕ್ಕೆ ಆಗ್ದಿದ್ರೂ ನಮ್ಮ ಬಗ್ಗೇನೆ ಯೋಚಸ್ತಿರೋ ಜೀವಗಳಿಗೆ ಸ್ವಲ್ಪನೂ ಸಮಯ ತೆಗದಿಡ್ದೇ ಇದ್ರೆ ಕ್ರಮೇಣ ಅವ್ರೂ ನಾವಿಲ್ಲದ ಜೀವನ ರೂಡಿ ಮಾಡ್ಕಂಬುಡ್ತ..

    ನಾವೇ ಹಾಕ್ಕಂಡಿರೋ ಬೇಲಿಗಳಿಂದ ಬೇರೆ ಅವ್ರೂ ನಮ್ಗೆ not reachable, ನಾವೂ ಅವ್ಕೆ not reachable :-(
    ನಿಮ್ಮ ಲೇಖನ ನಂಗೂ ಬಾಲ್ಯದ ಕೆಲ ನೆನ್ಪುಗಳ್ನ ಹಸಿ ಮಾಡ್ತು :-)

    ReplyDelete
  25. ವಂದನಾ...ತುಂಬಾ ಚೆನ್ನಾಗಿ "ನಾಟ್ ರಿಚೇಬಲ್" ಲೇಖನ ಖುಷಿ ಕೋಡ್ತು....ನಾವು ಸಾದನೇ..ಅಥವಾ ಇನ್ನೇನೋ ಕಾರಣದಿಂದ, ಇನ್ನೇನೋ ಸಾದಿಸುತ್ತೇನೆ ಎನ್ನುವ ಬರದಲ್ಲಿ ,ಜೀವನದ ಎಸ್ಟೋ ಅಮೂಲ್ಯ, ಆದರೆ ವ್ಯಾವಹಾರಿಕವಾಗಿ ಸಣ್ಣ,ಸಣ್ಣ ಸಂಗತಿಗಳೆಂದುಕೋಂಡು ಅದನ್ನ ಕಳೆದುಕೋಂಡು ನಂತರ ಹಿಂತಿರುಗಿ ನೋಡಿದಾಗ ಆಗುವ ದುಖಃಕ್ಕೆ ಜೀವನ ಜಂಜಾಟ ಎಂಬ ಪಿಳ್ಳೆನೇವ ಹೇಳಿ ಸಮಾದಾನ ಪಡುವ ದಿನಗಳಲ್ಲಿ..ನಾಟ್ ರಿಚೆಬಲ್ ನಿಜಕ್ಕೂ ಖುಷಿ ಕೋಡ್ತು... ಮತ್ತು "ಬರುವ ಹೊತ್ತಿಗೆ ಸುರಬಾಣಕ್ಕೆ ಬೆಂಕಿ ಇಟ್ಟುಕಂಡು ಬಂದರೆ, ನಾನು ಎಂತ ಹೇಳಲಾಗ್ತು .. ನಿಂಗಕ್ಕೆಲ್ಲ ಎಲ್ಲಿ ಪುರಶತ್ತು ......." ಇಂಥ ಕಟು ಸತ್ಯದ ವಾಸ್ತವವನ್ನು ಸುಂದರವಾಗಿ ಬರೆದಿದ್ದಕ್ಕೆ ಹೋಗಳಲು ನಾನು ಶಬ್ದಗಳನ್ನು ಹುಡುಕಿದರೆ.... ಶಬ್ದಗಳೇ ನನ್ನ ಪಾಲಿಗೆ "ನಾಟ್ ರಿಚೇಬಲ್"

    ReplyDelete
    Replies
    1. ಕಟು ವಾಸ್ತವ ನಮ್ಮನ್ನ ಕಾಡಿದಾಗಲೆ ನಾವು ಕಳೆದು ಕೊಂಡದ್ದು ನೆನಪಾಗುವದು ....
      ಟೈಮ್ ಇಲ್ಲ ಎನ್ನುವ ನೆಪ ಹೂಡುವದು .... ... ಪರಿಸ್ತಿತಿಯ ಅರಿವು ಮೊದಲೇ ಆದರೆ ಎಚ್ಚೆತ್ತು ಕೊಂದು ಬದಲಾವಣೆಗೆ ತೆರೆದು ಕೊಳ್ಳೋಣ ಏನಂತೀರಾ ?

      Delete
  26. ವ೦ದನಕ್ಕ, ನಾಟ್ ರೀಚಬಲ್ ಲೇಖನ ಬಹಳ ಇಷ್ಟ ಆತು...

    ReplyDelete
  27. nijja nimagannisiddu, manasige tumba ishta aaitu..

    ReplyDelete