Thursday, 12 April 2012

ಮಹಲುನಮ್ಮ ಪ್ರೀತಿ  ಕೇವಲ 
ನಮ್ಮೊಳಗಿದ್ದ  ಭಾವನೆ 
ತೋರಿಸ ಬೇಕಿರಲಿಲ್ಲ  ಜಗತ್ತಿಗೆ 
ಅದಕ್ಕೆ 
ಕಟ್ಟಿಸಲಿಲ್ಲ ದರ್ಪ ಸಂಪತ್ತಿನ  ಮಹಾಮನೆ....

ನಿನ್ನೋಳಗಿದ್ದ ಪ್ರೀತಿ ನನ್ನೆಡೆಗಿತ್ತು...
ಅದರಂತೆ  ನಿನ್ನೆಡೆಗೆ ನನ್ನದು 
ಆಗ ಬೇಕಿರಲಿಲ್ಲ ರೋಮಿಯೋ -ಜ್ಯೂಲಿಯೆಟ್
ಪಾರೂ-ದೇವದಾಸ್ ,ಷಹಜಹಾನ್ -ಮಮ್ತಾಜ್....

ಬೇಕಿರಲಿಲ್ಲ ದುರಂತ ನಾಯಕನಾಗುವದು
ಅಮರ ಪ್ರೇಮಿಯಾಗುವದು.....
ಸಾಮಾನ್ಯನಾಗಿದ್ದರೆ ಸಾಕು 
ನಮ್ಮದೇ ಲೋಕದಲ್ಲಿ  ನೆಮ್ಮದಿಯಾಗಿರಲು.

ಸಾರಬೇಕಿರಲಿಲ್ಲ ಜಗತ್ತಿಗೆ 
ಪ್ರೀತಿಯೊಂದೇ ಸಾಕಿತ್ತು ಬದುಕಿಗೆ 
ಉಳಿಯ ಬೇಕಿರಲಿಲ್ಲ ಇತಿಹಾಸವಾಗಿ 
ಚರಿತ್ರೆ ತಿರುಚಿದ  ಅಪಹಾಸ್ಯವಾಗಿ......

ಹೇಳು,  ನಾ ಮಾಡಿದ್ದರಲ್ಲೇನಾದರೂ ತಪ್ಪು ?
ಮಣ್ಣಿನಲ್ಲಿ ಮಣ್ಣಾಗುವ ದೇಹಕ್ಕೆ  ಕ್ಷಣ....
ಕ್ಷಣಕ್ಕೆಲ್ಲ  ಬರುವ ನೆನಪಿನ ನೋವಿಗೆ 
ಕಟ್ಟಿಸ ಬೇಕಿ ತ್ತೇ ಮಹಲು ............ 

6 comments:

 1. This comment has been removed by the author.

  ReplyDelete
 2. ಎಲ್ಲಾ ಸಾಲುಗಳೂ ಸಿಂಪಲ್ ಭಾವನಾತ್ಮಕ...ವಂದನಾ...
  ಈ ಸಾಲುಗಳು ವಿಶೇಷವಾಗಿ ಹಿಡಿಸಿದ್ದು
  ಸಾರಬೇಕಿರಲಿಲ್ಲ ಜಗತ್ತಿಗೆ
  ಪ್ರೀತಿಯೊಂದೇ ಸಾಕಿತ್ತು ಬದುಕಿಗೆ
  ಉಳಿಯ ಬೇಕಿರಲಿಲ್ಲ ಇತಿಹಾಸವಾಗಿ
  ಚರಿತ್ರೆ ತಿರುಚಿದ ಅಪಹಾಸ್ಯವಾಗಿ......

  ReplyDelete
 3. ಪ್ರೀತಿಯೆ ಹಾಗೆ ಮರಳು ಮಾಡುವ ಮಾಟಗಾರನ ರೀತಿ

  ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗಿ ಕೈ ಬಿಟ್ಟಾಗ

  ಇಂತ ಮಾತುಗಳು ಬರುವುದೇ ಜಾಸ್ತಿ

  ತುಂಬಾ ಚೆನ್ನಾಗಿದೆ ವಂದನಾ

  ReplyDelete
 4. ಸಂಸಾರ ಸಂಸ್ಕಾರದ ಮಜಲನ್ನು ದಾಟಿದಾಗಲೆಲ್ಲ ಇಂತಹ ಪ್ರಶ್ನೆಗಳ ಸರಮಾಲೆ ಬುಗಿಲೇಳುತ್ತದೆ.

  ಉತ್ತಮ ಕವನ ಓದಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete
 5. ಚೆನ್ನಾಗಿದೆ ಕವನ. ಪ್ರೀತಿ ಪ್ರೇಮ ಇರುವುದು ಮನದಲ್ಲಲ್ಲವೇ ? ಅದಕ್ಕೊಂದು ಮಹಲು ಬೇಕೆ ? .. . ವಾಹ್.. ಇಷ್ಟವಾಯಿತು :-)

  ReplyDelete