Friday, 1 March 2013

ಆಲಾಪಿನಿ

ಈಗ ನಾವು ಬರೆ ಪ್ರವಾಸಿಗರು ಮಾತ್ರ ....

ವರ್ಷಕ್ಕೊಮ್ಮೆ ಒಂದು ತಿಂಗಳು

ಕ್ಯಾಮರ ಹೆಗಲಿಗೇರಿಸಿ Q ನಲ್ಲಿ ನಿಂತು ಪಾಸ್ ಪಡೆದು ಅಂಡಲೆಯುವ ನಾವು

ನಿಮ್ಮೆಲ್ಲರಂತೆ ನಾವು ಬರೆ ಪ್ರವಾಸಿಗರು ,

ಇವತ್ತಿಗೂ ಅಜ್ಜಿ ಹೇಳಿದ್ದು ನೆನಪಿದೆ ...

ಹಾಳು ಇತಿಹಾಸ ಬೇಕೆನಿಸುತ್ತಿಲ್ಲ ...

ಇಲ್ಲಿಗೆ ಕಾಲಿಡ ಬಾರದು ಎಂದುಕೊಂಡಿದ್ದ ನಾನು ..

ಬಂದಿದ್ದೇನೆ ... ಇತಿಹಾಸದಲ್ಲಿ ನಮ್ಮವರ ಕುರುಹು ಎಲ್ಲಾದರೂ 

ಸಿಗಬಹುದೆಂದು..

ಕಾಲದ ಮರೆಯ ಕಸರತ್ತಿಗೆ ಕಯ್ ತಪ್ಪಿದ ಅರಮನೆ ...


ಕಾಲನ ತೆಕ್ಕೆಗೆ ಸೇರಿ ಹೋದ ನಾವು ....

ಒಂದೊಂದೇ ಹೆಜ್ಜೆ ಎತ್ತಿಡುತ್ತಾ ಭಾರವಾದ ಮನಸಿಗೆ ಸಮಾಧಾನ ಹೇಳುತ್ತಾ ....

ನಮ್ಮ ಮುತ್ತಾತ ಮೆರೆದ, ಮುತ್ತಜ್ಜಿ ನೊಂದ ಮನೆ ಇದು


ಒಂದು ಕಾಲದಲ್ಲಿ ನಮ್ಮದೇ ಮನೆ ...


ಇಂದು ಇಲ್ಲಿ ಕೇವಲ ಪ್ರವಾಸಿ ನಾವು .....

ಮುತ್ತಜ್ಜಿ ನೋಡಿದ ನೆನಪಿಲ್ಲ ಅಜ್ಜಿ ಯಾವತ್ತು ಹೇಳಿದಂತೆ ..


ಸುಂದರ ವಾಗಿದ್ದರು ... ಜಾಣ್ಮೆಯಾ ಹೆಂಗಸು ....


ಅಂದಿನ ಯುವರಾಜ ಮೆಚ್ಚಿ ಮದುವೆ ! ಯಾದಹುಡುಗಿ ...


( ಮದುವೆ ಆಗದವ ರೆಷ್ಟೋ )

ಅವರ ಜಾಣ್ಮೆ ಮದುವೆ ಆಗುವಂತೆ ಮಾಡಿದ್ದು .....


ಪಟ್ಟದ ರಾಣಿ ಅಲ್ಲ ಬಿಡಿ .....

ಒಳ ಅಡಿ ಇಟ್ಟಂತೆ .. ಮನ ಸ್ಮಶಾನ ಮೌನ ..


ಗೋಡೆಯ ಮೇಲಿನ ಸುಂದರ ಚಿತ್ರ ಅಲ್ಲಿಯ ಸಿಂಹಾಸನ ನೆಲದ ಹಾಸು ಕಲ್ಲು ..
ಚಿನ್ನ -ಬೆಳ್ಳಿಯ ವ್ವೆಭವ ... ನನ್ನ ಅತ್ತ ಸೆಳೆಯಲೇ ಇಲ್ಲ ....

ಮೂಲೆಯ ಕಂಭಕ್ಕೆಒರಗಿ ಒಂದು ಕ್ಷಣ ನನ್ನ ಮರೆಯುವಾಸೆ ...


ನನ್ನವನಿಗೆ ಹೇಳಿದೆ ...." ಕುಳಿತುಬಿಡು "


ಆತ ಮುಂದೆ ಸಾಗಿದ .....ವಿಚಾರಕ್ಕೆ ಬಿದ್ದೆ ...

ಇದೇ ಬಾಗಿಲಿಂದ ....

ಎದುರಾಡಿದ ಮನೆಯ ಹೆಣ್ಣು ಮಕ್ಕಳನ್ನ ಎಳೆ ತಂದಿರ ಬಹುದ ?

ಜೋರಾಗಿ ಕಿರುಚಿರ ಬೇಕು ....

ಅದಕ್ಕೆ.. ಇ ಗೋಡೆ,ಕಂಭ .... ಎಲ್ಲ ಇವತ್ತು ಸಾಕ್ಷಿ ಹೇಳ ಬಹುದಾ

ಎಷ್ಟು ಜನ ಅಮಾಯಕ ಹುಡುಗಿಯರ ಶಾಪ ಇರಬಹುದು ...

ಕಣ್ಣಿರು ... ಹೆತ್ತವರ ಬದುಕಿದ್ದು ಸತ್ತಂತ ಭಾವ...

"ಪುಣ್ಯ ನಮ್ಮ ಮಕ್ಕಳಿಗೆ ದುಡಿದು ತಿನ್ನುವ ದಾರಿ ತೋರಿಸಿದ್ದಕ್ಕೆ "

ಅಂತ ಅಜ್ಜಿ ಊರ ದೇವರ ಮುಂದೆ ಹೇಳಿ ನಮಸ್ಕರಿಸಿದ್ದು ನೋಡಿದ್ದೇನೆ ..

ಕಾರಣ ವಿಲ್ಲದೆ ,ಯಾರದೋ ತಪ್ಪಿಗೆ ನೇಣು ಗಂಭ ಏರಿದವರ..

ಅರಮನೆಯ ಸೇವೆಗೆ ಮುಡಿಪಿಟ್ಟ ನಂಬಿಗಸ್ಥರ ತಲೆ ದಂಡ

ಕಾಲನ ಹೊಡೆತಕ್ಕೆ ಕಳೆದು ಹೋಗಲು ....

ಇಸ್ಟೇ ಸಾಕಿರ ಬಹುದು....

"ಇದೇನು ದೇವಸ್ತಾನ ಅಂದುಕೊಂಡಿದ್ದಾರ ಇಲ್ಲಿ ಕುಳಿತು ಕೊಳ್ಳಲು"

ನನಗೆ ಅರೆಬರೆ ತಿಳಿಯುವ ಅವರದೇ ಭಾಷೆಯಲ್ಲಿ ಹೇಳುತ್ತಾ ಬಂದ

ಪೋಲಿಸ್ ನನಗೆ ಅಂದಿದ್ದು ಗೊತ್ತಾಗಿ ಅಲ್ಲಿಂದ ಎದ್ದೆ ....

ಸರ್ಕಾರ ಪೂರ್ತಿಯಾಗಿ ಹಣ ಗಳಿಸಲು ಮಾತ್ರವೇ

ಉಪಯೋಗಿಸಿದನ್ತಿತ್ತು ಅರಮನೆ ...

ಮಳೆಗೆ ನೀರು ಸೋರಿದ ಗುರುತು .....

"ಉತ್ತರದ ಮೂಲೆಯ ಎರಡನೇ ಕೋಣೆ"

ನಿನ್ನ ಮುತ್ತಜ್ಜಿಯದು ನೋಡದೆ ಬರಬೇಡ ..

ಅಮ್ಮ ಹೇಳಿದ್ದು ನೆನಪಾಗಿ ಅತ್ತ ಮುಖ ಮಾಡಿದೆ ...

ಬಾಗಿಲು ಹಾಕಿತ್ತು ... ಕೊಲೂರುವ ಮುತ್ತಜ್ಜಿ ಬಾಗಿಲು ತೆರೆಯ ಬಾರದ ...

ಮುಖ ನೋಡಿದವನಲ್ಲ ಮುತ್ತಜ್ಜಿಯದು ... ಇದ್ದರೆ ಬೆನ್ನು ಬಾಗಿ .. ಕೊಲುರುವ

ಹಾಗಿರ ಬಹುದು .... ಅಂದು ಕೊಂಡೆ ....

ರೇಷ್ಮೆ ಸೀರೆ ... ಅಕ್ಕ ಪಕ್ಕ ಸೇವಕಿಯರು ...

ಇಂತಹ ಬದುಕು ಬದುಕಿದವಳ ?

ಅಥವ ಹತ್ತೆಂಟು ರಾಣಿಯರ ನಡುವೆ ಕಳೆದು ಹೋದವಳ ?

ಕಿಟಕಿಯ ಸಂದಿಯಿಂದ ಕಾಣ ಬಹುದು...

ಇಣುಕಿದೆ ಮರದ ಮಂಚ .ಪಕ್ಕದ ಕುರ್ಚಿ...

ಸಣ್ಣ ಟಿಪಾಯಿ ....ಇದೆಲ್ಲ ಮುತ್ತಜ್ಜಿ ಉಪಯೋಗಿಸಿದ್ದ ?

ಅರಮನೆಯ ಮೂಲೆ ಮೂಲೆ ಓಡಾಡಿರ ಬಹುದು ...

ಸೊಸೆ ಯಾಗಿ ಬಂದಾಗ ಖುಷಿಯಿತ್ತ ... ಕೇಳಬೇಕಿತ್ತು ...

ನನ್ನ ಸಾವಿರಾರು ಪ್ರಶ್ನೆ ಗಳಿಗೆ ಉತ್ತರ ಬೇಕಿತ್ತು ...

ಸಂಜೆಯಾಗುತ್ತ ಬಂದಂತೆ ಅರಮನೆಯ ಕಿಟಕಿಯಿಂದ ಬೆಳಕು ಒಳ ಬರುತ್ತಿತ್ತು ..
ಸುಂದರ ವಾಸ್ತು ಕಲ್ಪನೆ ....

ಇದೆಲ್ಲವನ್ನು ಮರೆಸಿ ಮತ್ತೆ ಮತ್ತೆ ... ದುರಂತ ನೆನಪಾಗಿ


ನಿಧಾನ ಹೊರ ಬಂದೆ ....

ಇನ್ನೆಂದು ಯಾರಿಗೂ ಇಂತಹ ಭಾವ ಬರದಿರಲಿ ...

ಇನ್ನೆಂದು ಬರಲಾರೆ ... ಇಲ್ಲಿಗೆ ....

ಎಲ್ಲರಂತೆ ... ಅರಮನೆಯ ಎದುರು ನಿಂತು ... ಫೋಟೋ ಕ್ಕೆ ಹಲ್ಕಿರಿದು ....

ಹೊರಟೆ .....