Thursday, 4 July 2013

ಎಡ ಬಿಡಂಗಿ

ಅವತ್ತು ಕಾಡಿದ ಭಾವ ಇವತ್ತು ನನ್ನಲ್ಲಿ ಭದ್ರ ವಾಗಿದೆ .....


ದಶಕ ಗಳ ಹಿಂದೆ ಮದುವೆಯಾಗಿ ಹೊರಟಾಗ ಅಮ್ಮನಲ್ಲಿ ಸಂತ್ರಪ್ತಿ ...


"ಅಂತು ಮಗಳಿಗೆ ಒಳ್ಳೆಯ ಹುಡುಗನ್ನ ಹುಡುಕಿದೆ " ಯಾರೋ ಆಡಿದ ಮಾತು ... ..


ಅಮ್ಮನಿಗೂ ಇದೆ ಬೇಕಿತ್ತಾ ...?


ಪ್ರಶ್ನೆ ಉತ್ತರ ಸಿಗದೇ ನನ್ನೊಳಗೇ ... ಉಳಿದ ಪ್ರಶ್ನೆ ಗಳೊಂದಿಗೆ ಕಣ್ಣಮುಚ್ಚೆ ಆಡುತ್ತಾ ....


ಅಲ್ಲಲ್ಲೇ ಸುತ್ತಿ ಮತ್ತೆ ಗೋಜಲಾಗುತ್ತಿದೆ ..........


ಒಂಟಿತನಕ್ಕೆ ಉತ್ತರ .......


" ನಾನಲ್ಲಿಂದ ವದರಿದ್ದೆ ಬದ್ದ ".... .... ಸತ್ಯ ಸುಳ್ಳುಗಳ ತಾಕಲಾಟಕ್ಕೆ .....


ಅಲ್ಲೆಲ್ಲೋ ಕುಳಿತ ಅಮ್ಮನಿಗೆ ನನ್ನ ಒಂಟಿತನದ ಬಿಸಿ ತಾಗ ಬಾರದೆಂದು .....


ಮಾತಿನಲ್ಲಿ ನಸುನಗುವಿನ ಮುಸುಕೆಳೆಯುತ್ತೇನೆ ................


ಮುಖ ಕಾಣದ್ದಕ್ಕೆ ..... ಅಂದಿನ ಮಾತು ಮುಗಿದರೆ ...


ನನಗೆ ಯುದ್ದ ಗೆದ್ದ ಭಾವ ........


ನನ್ನದೇ ಸ್ನೇಹಿತರು .... ಓಡಾಡಿದ ತೋಟ, ಕಾಡು ತಿಂದ ಕಾಡು ಹಣ್ಣು ,


ಓದಿದ ಪುಸ್ತಕ ..... ನನ್ನದೇ ಮಾತ್ರ ಭಾಷೆಯ ಜನ.....


ಇದೆಲ್ಲ ಒಂದು ಹಂತದ ವರೆಗೆ ..... ....


ಅಪ್ಪನ ವತ್ತಾಯಕ್ಕೆ ..... ತಿರುಗಿ ಮಾತಾಡಲಾರದೆ .... ಒಪ್ಪಿಕೊಂಡ ಓದು ...


ಇಲ್ಲ ..... ಬೇಕಿರಲಿಲ್ಲ ನನಗೆ .... ಲಕ್ಷ ಲಕ್ಷ ಸಂಪಾದನೆ ......


.... ನನ್ನಂತಹ ಎಲ್ಲಾ ಎಲ್ಲಾ ಹುಡುಗಿಯರಂತೆ .... ನಾನು ನನ್ನಷ್ಟಕ್ಕೆ ಹಾಡಿಕೊಂಡು ....


"ಟವೆಲ್ ಇಟ್ಟು ಕೊಂಡು ಓದುವ ಕಾದಂಬರಿ ಓದಿಕೊಂಡು".....


ನನ್ನದೇ ಪುಟ್ಟ ಪ್ರಪಂಚದಲ್ಲಿ ಬದುಕಿ ಬಿಡುತ್ತಿದ್ದೆ.... ...


ಪರಿಚಿತರಿಲ್ಲದ ಊರು .... ಆಸಕ್ತಿ ಇಲ್ಲದ ಕೂಡಿ ಕಳೆಯುವ ಓದು ....


ನನ್ನಂತಹ ಭಾವ ಜೀವಿಗಲ್ಲ .....


ಅಮ್ಮ ನೆದುರು ಬಿಕ್ಕಿ ಬಿಕ್ಕಿ ಅತ್ತಿದ್ದೆ...


ಕೊನೆಗೂ ಎಲ್ಲರೆದುರು ಹೇಳಲಾಗದೆ .....


ಒಂಟಿಯಾಗಿ ನನ್ನೊಳಗೆ ಬದುಕಿ ಬಿಡುವ ....


ನನ್ನ ಆಸೆಗಳನ್ನ .... ನನ್ನವೇ ಮಾಡಿ ಕೊಂಡು.....


ಕನಸು ಗಳನ್ನ ಕಟ್ಟಿಟ್ಟು ....


ಭಾವನೆ ಗಳಿಲ್ಲದ ಭವಿತವ್ಯಕ್ಕೆ ನಾಂದಿಯಿಟ್ಟೆ ,


ನನಗಿಂತ ದೊಡ್ಡ....! ಬ್ಯಾಗ್ ಗಳೊಂದಿಗೆ ....


ಹೊರಟಾಗ .... ಆಗಿನ್ನೂ ಕನಸು ಕಾಣುವ ಹರಯ ......


ಅಪ್ಪನಿಸ್ಟದ ಓದು.... ಅಪ್ಪನಿಗಾಗಿ ಓದಿದೆ .....


ಕೇಲಸ ..... ಬೇಡ ವೆಂದರೂ ಕರೆದು ಕೊಟ್ಟರು .....


ಮೂರ್ನಾಲ್ಕು ವರ್ಷಕ್ಕೆಲ್ಲ .... ಕೂದಲೆಲ್ಲ ಹಣ್ಣಾಗಿ , ಕಣ್ಣು ಮಂದವಾಗಿ,


ಕನ್ನಡಕ ಮತ್ತೆ ಕೂದಲಿನ ಬಣ್ಣ ಒಟ್ಟೊಟ್ಟಿಗೆ .... ನನ್ನ ಸ್ನೇಹಿತರಾದವು .....


ರಾಜಣ್ಣ ನ ಲೈಬ್ರರಿ ಯನ್ನ .... ಯಾರಿಗೋ ಮಾರಾಟ ಮಾಡಿ ಹೋದ ...


ಅನ್ನುವ ಸುದ್ದಿಯನ್ನೂ ಅಮ್ಮ, ನಗುವಿ ನೋಟ್ಟಿಗೆ ಹೇಳಿದಾಗ .....


ನೀವು ಎಲ್ಲಾ ಊರು ಬಿಟ್ಟ ಮೇಲೆ .... ಯಾರು ಓದುವರಿಲ್ಲದಂತಾಗಿ...


ಪುರೋಹಿತ್ಯ ಮಾಡುವದೇ .... ಆದಾಯದ ಮೂಲ ಮಾಡಿಕೊಂಡ ರಾಜಣ್ಣ .....


(ವಾರಕ್ಕೆ ೪ ರೂಪಾಯಿ ಯಂತೆ ಒಂದು ಪುಸ್ತಕ ಕೊಡುತ್ತಿದ್ದ ರಾಜಣ್ಣ ....)


ಇವೆಲ್ಲ ಫೋನ್ ನಲ್ಲಿ ಅಮ್ಮ ಹೇಳಿದ್ದು ..... ಖುಷಿಯಿಂದಲ ?


ಗೊತ್ತಿಲ್ಲಾ !


ಒಮ್ಮೊಮ್ಮೆ ತುಂಬಾ ಭಾವುಕಳಾಗಿ .... ಕಣ್ತುಂಬಿ ಕೊಂಡಿದ್ದೇನೆ ....


ನನ್ನ ಎಡ ಬಿಡಂಗಿ ಬದುಕಿಗೆ .....


ಎಲ್ಲಿಯ ವರೇಗೆ ಹೀಗೆ ಬೇರೆಯವರಿಗಾಗಿ ಬದುಕಲಿ ಅಂತೆಲ್ಲಾ ...


ನನ್ನ ಕಂಡಿಶನ್ನಿನಂತೆ ಮದುವೆ ಯಾದ ಮೇಲೆ ಕೆಲಸ ಮಾಡಲ್ಲ ....


ಅಂದು ಕೊಂಡವನು ..... ದಿನವಿಡೀ ಕಾಡುವ ಒಂಟಿತನಕ್ಕೆ ....


ಹೆದರಿ ... ಕೆಲಸಕ್ಕೆ ಸೇರಿಕೊಂಡೆ ....


ಪುರಸೋತ್ತಿದ್ದಾಗ ಓದಬೇಕು ಅಂತ ತಂದಿಟ್ಟ ಪುಸ್ತಕಗಳೆಲ್ಲಾ


ಮನೆ ಬದಲಿಸುವಾಗ ..... ಎಲ್ಲೆಲ್ಲೋ .... ಸೇರಿ ಹೋದವು .....


ಬೇಕಾದಾಗ ಸಿಗಲಿಲ್ಲಾ , ಸಿಕ್ಕಾಗ ಓದಲಾಗಲಿಲ್ಲ .....


ಮನಸ್ಸಿಗೆ ಬಂದಾಗ .... ಮನೆಯ ಅಂಗಳದಲ್ಲಿ ಕುಳಿತು .....


ಕತೆ ಹೇಳಬೇಕು ..... ಅಂತೆಲ್ಲ ಹೋಗಿದ್ದೆ .....


ಆದರೆ , ಅಲ್ಲಿ ನಾ ಪರಕೀಯಳು, ಇಲ್ಲಿ ನಾ ಹೊರಗಿನವಳು .....


ಊರೆಲ್ಲಾ ಬದಲಾಗಿದೆ ..... ನಾನೋದಿದ ಶಾಲೆ ಮುಚ್ಚಿ ವರ್ಷ ಕಳೆದಿದೆ .....


ಮಕ್ಕಳೆಲ್ಲಾ ಪೇಟೆ ಶಾಲೆಗೇ ಹೊರಟಿದ್ದಾರೆ .....


ಬಾರೋ ನೇರಳೆ ಹಣ್ಣಿದೆಯ ನೋಡಿ ಬರೋಣ ಎಂದಿದ್ದಕ್ಕೆ ....


ನನ್ನಣ್ಣನ ಮಗ ..... " ನಾಳೆ ಸ್ಕೂಲ್ ಗೆ ಹೋಗಬೇಕು ನಾಲಿಗೆ ಎಲ್ಲಾ ನೀಲಿ ಯಾಗುತ್ತೆ "


ಅಂದು ಒಳಗಿಂದ ಇನ್ನೇನೋ .... ಚಿಪ್ಸ್ ತಂದ ಬೇಕಾ ಎನ್ನುತ್ತಾ ?


ಅಪ್ಪ ಇದಕ್ಕೇನ ನನ್ನ ಮಾಮೂಲು ಹುಡುಗಿಯಂತೆ ಇಲ್ಲೇ ಓದಲು ಬಿಡದೆ ಹೋದದ್ದು .....


ಅನ್ನಿಸಿತು ...


ನನ್ನ ಹಾಸ್ಟೆಲ್ ಓದು ..... ಭಾವನೆ ಗಳನ್ನ ಕಿತ್ತು ಕೊಂಡದ್ದು ....ಅಧುನಿಕರನ್ನಾಗಿಸುವ .... ಹಟಕ್ಕೆ ಬಿದ್ದ ಅಪ್ಪ .....


ತಪ್ಪು ಮಾಡಿಲ್ಲ ....


ತನಗೆ ಅಂದು ಅವಕಾಶ ವಿಲ್ಲದ ತನ್ನಿಸ್ಟದ ಓದಿಗೆ ನಮ್ಮ .... ಸೇರಿಸಿದ್ದ .....


ನಾನು ಹಾಗೆ ಮಾಡಲ ?


ನನ್ನಾಸೆಯ ಓದಿಗೆ ನನ್ನ ಮಕ್ಕಳನ್ನ ಸೇರಿಸಲಾ ?


ಕೊನೆಯೇ ಇಲ್ಲದ ವಿಚಾರ ಗಳು ......


ನನ್ನ ಗೆಳತಿಯರೆಲ್ಲಾ ಆಗಾಗ ಒಟ್ಟಿಗೆ ಸೇರಿ ....


ಅಲ್ಲಿಗೆ ಹೋಗಿದ್ದು , ಇಲ್ಲಿ ತಿಂದದ್ದು ಅಂತೆಲ್ಲಾ


ಫೇಸ್ ಬುಕ್ ನಲ್ಲಿ ಫೋಟೋ ಅಂಟಿಸಿ ದಾಗೆಲ್ಲ ....


ನನ್ನ ಧಾವಂತದ ಬದುಕಲ್ಲಿ ಕಳೆದು ಹೋದದ್ದು ....


ಮತ್ತಷ್ಟು ಕಾಡಿ ಮೌನಿ ಯಾಗುತ್ತಿನಿ .....


ಈಗ ಇದೆಲ್ಲಾ ಯಾರಲ್ಲಿ ಹೇಳಲಿ ಗೊತ್ತಾಗದೇ .....


ಕೂಡಿ ಕಳೆಯುವ ಲೆಕ್ಕದ ಕೆಲಸದಲ್ಲಿ ತಪ್ಪು ಮಾಡುತ್ತೀನಿ .... ನನಗಲ್ಲ


ಕೇಲಸ ಇ ತಿಂಗಳ ಕೊನೆಗೆ ಬಿಟ್ಟು ಬಿಡುತ್ತೀನಿ....


ಅಂದು ಕೊಂಡು ಲೆಕ್ಕ ಸರಿ ಮಾಡಿ .... ಹೊರಡುತ್ತೀನಿ


ಬಿಟ್ಟು ಬಿಡಬೇಕು ಎಂದು ಕೊಂದ ಕೆಲಸ .... ಇನ್ನು ಬಿಟ್ಟಿಲ್ಲ


ಗಂಡ ಆಫೀಸ್ ಗೆ ಮಕ್ಕಳು ಅವರವರ ಓದಿಗೆ ಹೊರಟ ಮರು ಕ್ಷಣ


ಕಾಡುವ ಒಂಟಿತನ ದಿಂದ ಹೊರಗೆ ಹೋಗಲು ಕೆಲಸಕ್ಕೆ ಹೊರಡುತ್ತೇನೆ ...


ಓದದೆ ಉಳಿದ ಪುಸ್ತಕ ಓದಲು ನನ್ನಾಸೆಯಂತೆ .....


ತೋಟ ಸುತ್ತಲು .....


ಮತ್ತೆ ಕೆಲಸ ಬಿಡುವ ವಿಚಾರ ಮಾಡುತ್ತೇನೆ................