Saturday, 21 July 2012

ಐದೂಕಾಲರ ಬಸ್ಸು



ಮೊನ್ನೆ ನನ್ನ ಫ್ರೆಂಡ್ ಮನೆಗೆ ಬಂದಿದ್ದಳು ...
ಊಟ ಮಾಡಿ ಕತೆ ಹೇಳಿ .... ಬಾಲ್ಯ-ಟೀನ್ ನೆನಪಿಸುತ್ತಾ 
ಟೀ ಕುಡಿಯುವಾಗ  "ಬಸ್  ಹೋಗುತ್ತೇನೆ ನಿಮ್ಮ ಊರಿಗೆ ಇಗ?"
ಕೇಳಿದ್ದಕ್ಕೆ ಏನು ಉತ್ತರಿಸ ಬೇಕೆಂದೇ ಗೊತ್ತಾಗದೆ .... 
ಪಿಳಿಪಿಳಿ  ಕಣ್ಣು ಬಿಟ್ಟು ನಮ್ಮನ್ನೇ ನೋಡುತ್ತಿದ್ದ   ಅವಳ ಮಗಳ ಮಾತಿಗೆಳೆದೆ .......
ಮನದಲ್ಲಿ ಬಸ್ ನದೇ ವಿಚಾರ ಒಂದೂವರೆ ವರ್ಷದಿಂದ ರಸ್ತೆ  ರಿಪೇರಿ ಕೆಲಸಕ್ಕೆ ..
ಅಂತ ಬಂದ್ ಆದ ಬಸ್ ಮತ್ತೆ ಬರಲೇ ಇಲ್ಲ........
ಅದರೊಂದಿಗಿನ ನೆನಪುಗಳು .... ಕಾಡುತ್ತಿವೆ ...
ಮತ್ತೆ ಅದೇ ಬಸ್ ನಲ್ಲಿ ಹೋಗಬೇಕು .... 
ಪರಿಚಯದ ಮುಖಗಳು? ಸಿಗಬಹುದಾ?
ಯಾಕೋ ತುಂಬಾನೇ ಮಿಸ್ ಮಾಡುತ್ತಿದ್ದೀನಿ ...
ಅವತ್ತು ಕಾಲೇಜು ದಿನಗಳಲ್ಲಿ ಪ್ರತಿದಿನ  ಸಂಜೆ ಮನೆ ಸೇರುವ 
ಏಕಮೇವ   ಮಾರ್ಘ ಅಂದರೆ (ಬಸ್ ನಂ1094), ಐದೂಕಾಲರ ಬಸ್ಸೂ.......
ಸೋಮವಾರ ದಿಂದ ಶನಿವಾರದವರೆಗೆ ತಪ್ಪದೆ ಬರುತ್ತಿತ್ತು .....(!)
ಸ್ಕೂಲ್ ಮತ್ತೆ ಕಾಲೇಜ್ ನವರಿಗಾಗಿಯೇ ಬರುತ್ತೇನೋ .. 
ಎನ್ನುವ ಮಟ್ಟಿಗೆ ನಮ್ಮಿಂದಲೇ ತುಂಬಿ ಹೋಗುತ್ತಿತ್ತು .... 
ಮೊಬೈಲ್ ಫೋನ್ ಇಲ್ಲದ ದಿನಗಳು, ಬಸ್ನಲ್ಲೇ ಸುದ್ದಿ ಸಂಚಾರ , 
ಎಲ್ಲ ಕಿಟಕಿ ಸೀಟುಗಳಿಗೆ ಕಾಲೇಜ್  ಗುಟ್ಟುಗಳು ಗೊತ್ತಾಗುತ್ತಿತ್ತು........
"ಕೊನೆಯ ಸ್ಟಾಪ್ ಹುಡುಗಿ ಬಂದಳ... ಹಾಗಿದ್ದರೆ ಹೊರಡೋಣ ... ಅನ್ನುವ ಚಾಲಕ- ನಿರ್ವಾಹಕರು
ಎಲ್ಲರು ಪರಿಚಿತರು.... ಯಾಕಂದರೆ ನಮ್ಮದು ಪುಟ್ಟ ಹಳ್ಳಿ ಬರುವದು ಎರಡೇ ಬಸ್ ..... ಬೆಳಿಗ್ಗೆ ೮.೪೦ ಕ್ಕೆ 
ಸಂಜೆ ಐದೂಕಾಲ ಕ್ಕೆ ........
ಅವತ್ತೊಂದು ಶನಿವಾರ, ಕ್ಲಾಸ್ ಮುಗಿಸಿ ಬಸ್ ಸ್ಟ್ಯಾಂಡ್ ಗೆ ೪.೪೫ ಕ್ಕೆ ಬಂದು ಕುಳಿತಿದ್ದೆವು.
ಸ್ನೇಹಿತರೆಲ್ಲ ಹಾಸ್ಟೆಲ್ -ರೂಮ್ ಮಾಡಿಕೊಂಡು ಉಳಿದು ಕೊಂಡವರು,ಮಾತಾಡುತ್ತ ನಿಂತಿದ್ವಿ ,
ಐದೂಕಾಲರ ಬಸ್ ೬.೩೦ ಆದರು ಪತ್ತೆಯಿಲ್ಲ ಒಬ್ಬೊಬ್ಬರ ಬಸ್ ಬಂದಂತೆ ಹೊರಡುತ್ತಿದ್ದರು .....
ಹಸಿವು ಜಾಸ್ತಿಯಾಗುತ್ತಿತ್ತು... ಬೆಳಿಗ್ಗೆ ತಿಂದ ದೋಸೆ .... ತನ್ನ ಡ್ಯೂಟಿ ಮುಗಿಸಿತ್ತು ....
ಕಂಟ್ರೋಲರ್ ಕೇಳಿದ್ದಕ್ಕೆ "ಈಗ ಬರುತ್ತಮ್ಮ ಸ್ವಲ್ಪ ತಡ ".......
ಗಂಟೆ  ೭ ದಾಟುತ್ತಿತ್ತು...........
ಜೊತೆಗಿದ್ದವರೆಲ್ಲ  ಖಾಲಿಯಾಗುತ್ತಿದ್ದರು ........
ನಮಗೋ  ಅದೇ ಬಸ್ ಬರಬೇಕು ........
ಹೊರಗೆ ಆರದ   "ಆರಿದ್ರೆ" (ನಕ್ಷತ್ರ)  ಮಳೆ....
ಬೇರೆ ಬಸ್ ಅಂದರೆ ೪-೫ ಕಿ ಮಿ  ನಡೆದು ಹೋಗಬೇಕು ......
ನಾವು ಮೂವರು ಅಲ್ಲಿಯ ಕಲ್ಲು ಬೆಂಚಿನ ಮೇಲೆ ...
' ಗಾಂಧೀಜಿ ಯ ಕೋತಿಗಳಂತೆ '....... ಕುಳಿತಿದ್ದೆವು ಜನರೆಲ್ಲಾ .... 
ಖಾಲಿ ಯಾಗುತ್ತಿದ್ದರು ..........
ಬ್ಯಾಗ್ ನಲ್ಲಿಯ ಒಂದು ರೂಪಾಯಿಯ ಕಾಇನ್ ನಿಂದ ಮನೆಗೆ ಫೋನ್ ಮಾಡಲು.. ಪ್ರಯತ್ನಿಸಿದಾಗೆಲ್ಲ...
ಅಮ್ಮ ಹಲೋ ಎನ್ನುವದು ನನಗೆ ಕೇಳುತ್ತಿತ್ತು .... 
ನಾನು ಮಾತಾಡಿದ್ದು ಅವರಿಗೆ ಕೇಳುತ್ತಿರಲಿಲ್ಲ ......
ವಾಚು ಮಾತ್ರ ಸಮಯವನ್ನ  ಮುಂದೊಡಿಸುತ್ತಲೇ  ಇತ್ತು....

ಒಂದು ಕಡೆ ಭಯ , ಊರಿಗೆ ಹೋಗುವದು ಹೇಗೆ ?
ಇಲ್ಲಿ ಫ್ರೆಂಡ್ಸ್ ಎಲ್ಲ ವೀಕ್ಎಂಡ್  ಊರಿಗೆ ಹೋಗಿದ್ದಾರೆ ...........!
ಆಟೋ ದವರು ಬರಲ್ಲ ನಮ್ಮೂರಿಗೆ ಅದೂ....... ಇ ಹೊತ್ತಿನಲ್ಲಿ .......
ಅಳುವದಸ್ಟೇ ಬಾಕಿ .....

ಅದೆಲ್ಲಿಂದಲೋ ಪ್ರತ್ಯಕ್ಷ ನಾದ.... ಅವತ್ತಿನ ಪಾಳಿಯ ಡ್ರೈವರ್ .....
ಹೋಗುತ್ತಿದ್ದ ಜೀವ  ಬಂದಂತಾದರೂ..........
ಮುಂದಿನ ಟ್ರಿಪ್ ಸಮಯವೂ ಮುಗಿಯುತ್ತಿದೆ ........
 ಹಾಳಾದ ಬಸ್ ನ್ನ ಸರಿ ಮಾಡಿಸಿ ಕೊಂಡು ಬರಲು ತಡವಾದದ್ದಕ್ಕೆ ,
ಕಂಟ್ರೋಲರ್ ಮುಂದಿನ "೧೦೯೪ ಬಸ್ ನಂ................"  ಟ್ರಿಪ್ ಅಂತ ಒದರಿಯೇ ಬಿಟ್ಟ ................
ಕಣ್ಣ ಚಿಂನಲ್ಲಿದ್ದ ನೀರು....ತುಂಬಿದಂತೆಯೇ 
ಡ್ರೈವರ್ ಗೆ ಕೇಳಿದಾಗ ಬಸ್ ಹತ್ತಿಕೊಳ್ಳಿ........ನಾನು ನೋಡಿ ಕೊಳ್ಳುತ್ತಿನಿ ....
ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿ ಸಿಕ್ಕಂತಾಯಿತು .....
ಕಾಲಿಡಕ್ಕೆ  ಜಾಗ  ಅಂತು ಸಿಕ್ಕಿತು ....
ಜೋರು ಜೋರು ಮಾತು ನಡಿತಿತ್ತು .........ಮಳೆಯ ಅಬ್ಬರ ದಲ್ಲಿ  ....ಕೇಳಲಿಲ್ಲ 
ಕೊನೆಗೂ ನಮ್ಮನ್ನ ನಮ್ಮೂರಿಗೆ ಬಿಟ್ಟು ಮುಂದಿನ ಟ್ರಿಪ್ ಹೋಗಿದ್ದರು .............

ಇಂತಹ ಹಲವಾರು ಮರೆಯಲಾಗದ ಅನುಭವ ವನ್ನ ಐದೂಕಾಲರ ಬಸ್ ನೀಡಿದೆ ....
ಅಂತಹ ಹೊಸದಲ್ಲದ ,ದೂಳಿ ನಿಂದ ಯಾವತ್ತು ಮುಚ್ಚಿರುತ್ತಿದ್ದ ,
ನನ್ನ ಸ್ನೇಹಿತರ ಬಾಯಿಗೆ ಆಗೀಗ ಆಹಾರ ವಾದ,
 " ಇವತ್ತು ಬರೋವಾಗ ಆರೂ ವೀಲ್ ಇತ್ತು ತಾನೆ ?" ಕಿಚಾಯಿಸಿದಾಗ
ಮನದ ಮೂಲೆಯಲ್ಲಿ  ನೋವಾಗ್ತಿತ್ತು.......
ನನ್ನ ಕಾಲೇಜು ಬದುಕಿನ  ಬಾಗವೇ ಆಗಿದ್ದ ೧೦೯೪ ಬಸ್ ನ್ನ ಇವತ್ತಿಗೂ ಮಿಸ್ ಮಾಡ್ತೀನಿ ....
ಬಸ್-ಸ್ಟಾಪ್  ನಲ್ಲಿ ನಿಂತಾಗೆಲ್ಲ  .....  ೧೦೯೪  ಬರುತ್ತಾ ಕಾಯ್ತೀನಿ .........

5 comments:

  1. ವಂದನಾ....

    ಇಂತಹ ಎಷ್ಟೋ ಅನುಭವಗಳು ನಮ್ಮೊಂದಿಗೆ ಒಂದಲ್ಲಾ ಒಂದು
    ಸಲ ಜೊತೆಗೂಡಿ ಬರ್ತು.....

    ಆದರೆ ಇಷ್ಟು ಚನ್ನಾಗಿ ಹೇಳೋದು ಎಲ್ರಿಗೂ ಬತ್ತಿಲ್ಲೆ....

    "ಬೆಳಿಗ್ಗೆ ತಿಂದ ದೋಸೆ .... ತನ್ನ ಡ್ಯೂಟಿ ಮುಗಿಸಿತ್ತು ...."

    ಈ ಸಾಲಿಂಗೆ ಇದರದೇ ಆದ ಪ್ರತ್ಯೇಕತೆ ಇದ್ದು....

    ಹೇಳಿದ ರೀತಿ ತುಂಬಾ ಚಂದಿದ್ದು....

    ಇಷ್ಟ ಆಯ್ತು......

    ReplyDelete
    Replies
    1. thank u ಕನಸು ಕಂಗಳ ಹುಡುಗ , ಇ ಬಸ್ ಎರಡೇ ಇದ್ದರೆ ... ನನ್ನ ಓದಿನ ಕನಸು ಕನಸಾಗಿ ಬಿಡುತ್ತಿತ್ತ ? ನನಗಿದು ಉತ್ತರ ಸಿಗದ ಪ್ರಶ್ನೆ ........

      Delete
  2. ಬಹಳ ಆಸಕ್ತಿ ಮೂಡಿಸೋ ನೆನಪುಗಳು...ಕೆಲವೊಮ್ಮೆ ಮಧುರ ಮೆಲುಕುಗಳು.... ಚನ್ನಾಗಿದೆ ವಂದನಾ. ಹಾಗಿಲ್ಲದಿದ್ದರೆ ಹೇಗಾಗ್ತಿತ್ತು...?? ಹೌದು ಯೋಚಿಸೋಕೆ ಒಂದು ಹೊಸತು ...

    ReplyDelete
  3. ಪುಟ್ಟ ಹಳ್ಳಿಗಳನ್ನು ಸಂಪರ್ಕಿಸುವ ಬಸ್ಸುಗಳು ಬಾರದೇ ಹೋದಾಗ ಎಂತಹ ಪಜೀತಿ ಅಲ್ಲವೇ!

    ReplyDelete
  4. ವಂದನಾ

    ನಮಗೆ "ಬಾಳೆಸರ" ಬಸ್ ಇತ್ತು ಇದೇ ರೀತಿ...

    ಆ ಬಸ್ಸಿನಲ್ಲಿ ಎಷ್ಟು ಸಂಬಂಧಗಳು ಬೇರೆಯಾಗಿವೆ...
    ಎಷ್ಟೋಂದು ಜೊತೆಯಾಗಿವೆ...
    ನಮ್ಮ ನೆನಪುಗಳಿಗೂ ಆ ಬಸ್ಸಿಗು ಬಹಳ ನಂತು...

    ಬಹಳ ಖುಷಿ ಆಯಿತು....

    ReplyDelete