Wednesday, 28 March 2012

ಬೇಗ ಬಾ



ಮತ್ತದೇ ನೆನಪು ಗೆಳತಿ 
ಮುತ್ತುದುರಿಸಿದಂತ  ಮಾತು 
ಬೆಳದಿಂಗಳಂತೆ ಹೊಳೆವ ನಗು
ನಾವ್ ಜೊತೆಗಿದ್ದ ದಿನಗಳೇ  ನಾಲ್ಕು 
ಆಡಿದ ಮಾತು ನಕ್ಕ ನಗು  
ನಾಲ್ಕು ದಶಕ ಗಳಿಗೆ  ಆಗುವಸ್ಟು

ನಂಬಲಾಗುತ್ತಿಲ್ಲ ......
ಮತ್ತೆ ಮರೆತು ಹೋದಂತ  ಮೌನ 
ತುಟಿ ಬಿರಿದು ದಶಕ ಕಳೆಯಿತೇನೂ
ಬೇಟಿ ಬೇಸರವಾಯಿತ ?
ಸಾಗಿದ ದಾರಿಗಳ ಮದ್ಯೆ ಗೆರೆ 
ಕಂದರ ವಾಯಿತಾ ?

ಹೇಳು ಮನ ಬಿಚ್ಚಿ .....
ಮೌನ ಸಹಿಸಲಾರೆ ಮಾತಾಡು 
ನಗುವಿಗೊಂದು  ಗಡುವ ಕೊಡು 
ಅತ್ತು ಬಿಡುವೆ ...
ಮತ್ತೆ ಬದುಕ ಬೀಜ ಬಿತ್ತಿ 
ನಗುವ ಬೆಳೆ ತೆಗೆಯುವ ....

ಬೇಗ ಜಿಗಿದು ಬಾ  ...
ಬಂಧನವನೇ  ಹರಿದು 
ಕಳೆದು ಹೋದ ಬದುಕ, 
ನರಕವಾದ ನೆನಪ ಬಿಟ್ಟು ...
ಮೊದಲಿನಿಂದ ನಡೆಯುವ ........

5 comments:

  1. hi Vandana,
    ತುಟಿ ಬಿರಿದು ದಶಕ ಕಳೆಯಿತೇನೂ
    ಬೇಟಿ ಬೇಸರವಾಯಿತ ?
    bhaava poorna....... ishtavaaytu kavana!

    ReplyDelete
  2. ಸೊಗಸಾದ ಕವನ... ಸೊಗಸಾದ ಜೀವನಕ್ಕೆ ಹೊಸ ದಿಶೆಕೊಡುವ ಕ್ಷಣದ ಮನಬಿಚ್ಚಿದ ಮಾತು ಚನ್ನಾಗಿ ಭಾವಾವತರಣಗೊಂಡಿದೆ. ಶುಭವಾಗಲಿ ವಂದನಾ.

    ReplyDelete
  3. ನಿವೇದನೆ ... :) ಸರಳ ಸುಂದರ .. :) ಪದಗಳ ಜೋಡಣೆಯೂ ಇಷ್ಟವಾಯ್ತು :)

    ReplyDelete
  4. ನರಕವಾದ ನೆನಪ ಬಿಟ್ಟು ನಡೆಯುವುದು :) ಚಂದ ಕವನ :)

    ReplyDelete