ಮೊನ್ನೆ ಸಿಕ್ಕ ಮಗುವಿನ ಬೊಚ್ಚು ನಗು ....
ನಿಮಗೂ ನೆನಪಿರ ಬಹುದು ....
ಪುಟಗಳಲಿ ಮರೆಯಾಗದ ಎಂದಿಗೂ ಹಸಿರೆನಿಸುವ
ನೆನಪುಗಳು ಬೆಂದ ಬದುಕಿಗೆ ತಂಪನೆರೆಯ ಬಹುದು ....
ಯಾವುದೊ ಕತೆಗೆ ಚೌಕಟ್ಟು ಹಾಕುತ್ತ ಕುಳಿತವಳಿಗೆ ....
ನೀನು ಹೀಗೆ ಕನಸು ಕಟ್ಟಿರ ಬಹುದಾ ಅನ್ನಿಸಿತು ...
ನನ್ನ ದಶಕಗಳ ಹಳೆಯ ಗೆಳತಿ ನೀನು...
ನನ್ನ ದಶಕಗಳ ಹಳೆಯ ಗೆಳತಿ ನೀನು...
ನೀನು ನನ್ನಿಂದ ಕಾಣೆಯಾಗಿ ಆರೇಳು ವರುಷ ಗಳೇ ಆಯಿತಲ್ಲವಾ ...
ಯಾಕೋ ನಂಬಲಾಗುತ್ತಿಲ್ಲ ...
ಎಲ್ಲೋ ನಾನು ನನ್ನ ಹಳೆಯ ವಿಳಾಸಕ್ಕೆ ಹೋದಾಗ
.... ಒಮ್ಮೆ ಲೇಟರ್ ಬಾಕ್ಸ್ ನತ್ತ ಕಣ್ಣಾಡಿಸದೆ ಬರುವದಿಲ್ಲ ....
ಇರ ಬಹುದು ನಿನ್ನ ಪತ್ರ .....
ಎನ್ನುವ ನಂಬಿಕೆ ಇನ್ನು ನನ್ನ ಬೆನ್ನಿಗಿದೆ ಹುಡುಗಿ....
ಎನ್ನುವ ನಂಬಿಕೆ ಇನ್ನು ನನ್ನ ಬೆನ್ನಿಗಿದೆ ಹುಡುಗಿ....
ಯಾವತ್ತೂ....
ನಾನು ನಿನ್ನ ಬಗ್ಗೆ ವಿಚಾರಿಸಿದಾಗ ನಿನ್ನಮ್ಮ ಹೇಳಿದ ಮಾತು
ಇನ್ನು ಗುಂಯಿ ಗುಡುತ್ತಿದೆ ....
ಇನ್ನು ಗುಂಯಿ ಗುಡುತ್ತಿದೆ ....
"ನಿನಗೇನಾದರೂ ಹೇಳಿದ್ದಾಳ ?
ಎಲ್ಲಿಗೆ ಹೋಗುವೆನೆಂದು ?"
ಅಂದೇ ಕೊನೆ ಮತ್ತೆ ಮಾತಿಲ್ಲ ನಮ್ಮಲ್ಲಿ ....
ನನ್ನಲ್ಲೂ ಪ್ರಶ್ನೆ ಗಳಿದೆ ಎಲ್ಲಿದ್ದಿಯ ? ಹೇಗಿದ್ದೀಯ?
ಯಾಕೆ ಬಿಟ್ಟು ಹೋದದ್ದು ?
ಯಾಕೆ ಬಿಟ್ಟು ಹೋದದ್ದು ?
ಮೊನ್ನೆ ಮೊನ್ನೆಯಂತೆ ಮಾತು ನಗು ಇನ್ನು ಹಸಿರಾಗಿದೆ ......
ಅಕ್ಕ, ಅಮ್ಮ, ಅಣ್ಣ ಎಲ್ಲರ ಫೋನ್ ಅವತ್ತೊಂದು ದಿನ .......
ಅಸ್ಟೇ, ಆಮೇಲೆ ಮಾತಿಲ್ಲ ನಿನ್ನ ಸುದ್ದಿಯೂ ಇಲ್ಲ ...
ಅಸ್ಟೇ, ಆಮೇಲೆ ಮಾತಿಲ್ಲ ನಿನ್ನ ಸುದ್ದಿಯೂ ಇಲ್ಲ ...
ನನ್ನ ಮದುವೆ ಗೆ ಎಲ್ಲಿದ್ದರೂ ಬರುತ್ತೀನಿ ಅಂದವಳು ಬರಬಹುದು
ಅಂದು ಕೊಂಡದ್ದೆ ಬಂತು ...
ಅಂದು ಕೊಂಡದ್ದೆ ಬಂತು ...
ಮದುವೆಗೆ ಒಂದು ವಾರವಿದೆ ಅನ್ನುವಾಗ ಫೋನ್ ಮಾಡಿ ....
ಹುಡುಕಬೇಡಿ ಅವಳನ್ನ ....
"ಆಕೆ ನಕ್ಸಲೇಟ್ ಜೊತೆಗೆ ಹೋಗಿದ್ದಾಳೆ "
ಹೇಗೆ ಹೇಳುವದು ಗೊತ್ತಿಲ್ಲದೇ ಇಷ್ಟು ದಿನ ಕಳೆದೆ ....
-ನಿನ್ನ ಪ್ರೀತಿಯ ಹುಡುಗ ಹೇಳಿದಾಗ ...
ಅಂತ ಹೇಳಿದಾಗ ಎನುತ್ತರಿಸಲಿ ಗೊತ್ತಾಗಲಿಲ್ಲ .....
ಮತ್ತೆ ಎಂದಿನಂತೆ ಮೌನ ದ ಮೊರೆ ಹೊಕ್ಕೆ ..
ಅವತ್ತು ಯಾವುದೋ ಮಾಲ್ ನ ಕೊನೆಯ ಮಹಡಿಯ
ರೆಸ್ಟೋರೆಂಟ್ ನಲ್ಲಿ ಏನೋ ಮೆದ್ದು ಕೆಳಗಿಳಿಯುವಾಗ
ಎದುರಾದದ್ದು ನೀನೆ ......
ಎದುರಾದದ್ದು ನೀನೆ ......
ಮೊನ್ನೆ ಚಿತ್ರ ಸಂತೆ ಯಲ್ಲಿ ಫೈಬರ್ ಚೇರ್ ನಲ್ಲಿ ಪುಟ್ಟ ಮಗುವನ್ನೆತ್ತಿ
ಕುಳಿತವಳು ನೀನೆ .....
ಕುಳಿತವಳು ನೀನೆ .....
ಯಾಕೆ ಮಾತಾಡಲಿಲ್ಲ ...
ಚಿತ್ರ ಸಂತೆ ಯಲ್ಲಿ ನೀನು ನಕ್ಕಿದ್ದೆ .....
ನನ್ನ ಗೊಂದಲದಲ್ಲಿ ಯಾಕೆ ಮಾತಾಡಲಿಲ್ಲ
ನೀನೆ ಅಲ್ಲವಾ ಅಂತೆಲ್ಲ ನನ್ನಲ್ಲಿ ಮಾತಾಡಿ ಕೊಂಡು
ನೀನೆ ಅಲ್ಲವಾ ಅಂತೆಲ್ಲ ನನ್ನಲ್ಲಿ ಮಾತಾಡಿ ಕೊಂಡು
ಮತ್ತೆ ನಿನಿದ್ದಲ್ಲಿಗೆ ಬಂದಾಗ ನೀನಿರಲಿಲ್ಲ ಅಲ್ಲಿ ....
ಮಗುವಿನ ಬೊಚ್ಚು ನಗು...
ನೆನಪು ಯಾವತ್ತು ಮರೆಯಲಾಗದು ನನ್ನಲ್ಲಿ ...
ನೆನಪು ಯಾವತ್ತು ಮರೆಯಲಾಗದು ನನ್ನಲ್ಲಿ ...
ನಿನಗೆ ನನ್ನ ಗುರುತೇ ಸಿಗಲಿಲ್ಲವ ?
ಹೇಗೆ ಸಿಕ್ಕಿತು ಹೇಳು ಹೊಟ್ಟೆಗೆ ಇಲ್ಲದವನಂತೆ ಇದ್ದಾಗ ನೋಡಿದ್ದು ...
ಇಗ ಮೂರು ವರೆ ಕ್ವಿಂಟಾಲ್ ತೂಗುವ ನನ್ನ ನೋಡಿದರೆ ....
ಯಾರಿಗೆ ತಾನೆ ನಂಬಲಾ ದೀತು ?
ಯಾರಿಗೆ ತಾನೆ ನಂಬಲಾ ದೀತು ?
ಇನ್ನೇಲ್ಲಾದರೂ ಎದುರು ಸಿಕ್ಕರೆ ನಗುವದ ಮರೆಯಬೇಡ ..........
ಹಲವು ಚಿತ್ರಗಳನ್ನು ಒಂದೇ ಗೊಂಚಲಿನಲ್ಲಿ ಜೋಡಿಸಿಕೊಟ್ಟ ಈ ಬರಹದಲ್ಲಿ ನಮಗೂ ಯಾವುದೋ ಯಾನದ ನೆನಪು.
ReplyDeleteಹಲವರು ಉಲ್ಟಾ ಆಗ್ತಾರೆ ವಂದ್ಶಿ... ಚನ್ನಾಗಿದೆ ಲೇಖನ...
ReplyDelete