Monday, 10 December 2012

ಮಾತು ಮೌನ ಮತ್ತೂ ನಿದ್ದೆ

ಭಾವನೆಯೆಲ್ಲ  ಮಾತಾಗಿ ...

ನಿನ್ನೆದುರು  ಬಿಚ್ಚಿಡ ಬೇಕಾದ ಹೊತ್ತು ...

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಬದುಕಿನ ಬ್ಲಾಕ್ ಅಂಡ್  ವೈಟ್  ಚಿತ್ರಕ್ಕೆ.....

ಬಣ್ಣ ಹಾಕಿ ಇವೆಲ್ಲ ನಮ್ಮದೇ ಎನ್ನುವ  ಕ್ಷಣ...... 

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಭೂತವನ್ನೆಲ್ಲಾ  ತಿಕ್ಕಿ ತೊಳೆದು ....

ಭಾವಿ ಬದುಕಿಗೆ ಭಾಷ್ಯ ಬರೆಯುವ  ಹೊತ್ತು ...

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ನಡೆದು ಹೋದ ಧಾವಂತದ ಅಪರಾದ ....

ನಮ್ಮದೇ  ಕೂಗಿ ಹೇಳಬೇಕಾದ ಹೊತ್ತು ....

ಮಾತು  ಮೌನದ ಮಡಿಲಲ್ಲಿ ....
                              ಬೆಚ್ಚಗೆ  ಮಲಗಿತ್ತು ......

ನಿನ್ನ ದನಿಯು ಕಿವಿಗೆ ಬಡಿದು ಎದೆಗೆ ....

ಏರಲಾರದೆ  ಅಲ್ಲೇ ಸುತ್ತಿ ಸುತ್ತಿ ನಿಂತ ಹೊತ್ತು ..

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಎದೆಯ ಮಾತು ಮರೆತು ಹೋಗಿ  ಹೇಳಲೇನು ..

ಉಳಿದಿದೆ  ಎಲ್ಲ ನಿನಗೆ ತಿಳಿದಿದೆ  ಎಂದು .....

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

21 comments:

  1. ಮಾತನ್ನೇ ಮೌನಕ್ಕೆ ಶರಣಾಗತಿಸಿದ್ದೀರಿ... ಚೆನ್ನಾಗಿದೆ ಕವಿತೆ

    ReplyDelete
  2. chennagiddu.. olleya saalugalu ..

    ReplyDelete
  3. ಸುಂದರ ಸಾಲುಗಳು ....

    ReplyDelete
  4. ಭೂತವನ್ನೆಲ್ಲಾ ತಿಕ್ಕಿ ತೊಳೆದು ....

    ಭಾವಿ ಬದುಕಿಗೆ ಭಾಷ್ಯ ಬರೆಯುವ ಹೊತ್ತು ...

    ತುಂಬಾ ಚಂದಿದ್ದು.....

    ಒಳ್ಳೊಳ್ಳೆಯ ಸಾಲುಗಳು.....

    ಅಂತರಂಗದ ಮಾತು ಎದ್ದು ಕೂಗಿ ಹೇಳಬೇಕಾದ ಹೊತ್ತು....
    ಮಾತು ಸುಮ್ಮನೆ ಬೆಚ್ಚಗೆ ಮಲಗಿದ್ಯಾಕೆ ಗೊತ್ತಾಯ್ದಿಲ್ಲೆ....

    ReplyDelete
    Replies
    1. ಕೆಲವೊಮ್ಮೆ ಹೇಳದೆ ಹಾಗೆ ಉಳಿದರೆ ಒಳ್ಳೆಯದು ......
      ಮಾನವನ ಬೆಲೆ ಉಳಿಯುತ್ತೆ ....

      Delete
  5. chennagide ista aytu :-)
    ~apara

    ReplyDelete
  6. ಮಾತು ಮೌನದ ಮಡಿಲಲ್ಲಿ .... ಬೆಚ್ಚಗೆ ಮಲಗಿತ್ತು ......

    ಎನ್ನುವುದು ನನ್ನ ಮನಸ್ಸಿನಲ್ಲಿ ಎಷ್ಟು ನಾಟಿತೂ ಎಂದರೆ, ಇಡೀ ಕವನವನ್ನು ನನ್ನ ಮಡದಿಗೆ ಮೂರು ಬಾರಿ ಓದಿ ಹೇಳಿದೆ.

    ಈಗ ನಾನೂ ಬೆಚ್ಚಗಾದೆ!

    ReplyDelete
  7. ಒಳ್ಳೆ ಕವನ. ಸುಪರ್ :)

    ReplyDelete
  8. ಚೆನ್ನಾಗಿದೆ.ಎಷ್ಟೋ ಬಾರಿ ಹೀಗಾಗುವುದಿದೆ.ಮಾತಿಗಿಂತ ಮೌನವೇ ಹೆಚ್ಚು ಕೆಲಸ ಮಾಡುತ್ತದೆ..

    ReplyDelete
  9. ಭಯ೦ಕರ ಚೆನ್ನಾಗಿದೆ!

    ReplyDelete
  10. ಅವನು ಕೇಳುವನೋ, ಮಾತಾಡುವನೋ ಇಲ್ಲಾ ಮೌನವನಾಲಿಸುವನೋ, ಈ ಮಾತು ಮೌನಗಳ ದನಿ ಇದೆಯಲ್ಲ ಅದರ ರಿಂಗಣ ಮಾತ್ರ ಅನವರತ...
    ಚೆಂದದ ಭಾವಾಭಿವ್ಯಕ್ತಿ ವಂದನಾ.

    ReplyDelete
  11. ಒಳ್ಲೆ ಫೀಲ್ ಕೊಡುವ ಕವಿತಾ ಇದು ಓದಿ ಖುಷೀ ಆತು

    ReplyDelete
  12. ಮಸ್ತ್ ಅಕ್ಕೊ :)

    ReplyDelete
  13. ಕೆಲವು ಬಾರಿ ಮಾತುಗಳು ಬಾರದೇ ಮನಸ್ಸು ಮೌನವಾಗಿ , ನಾವೆಲ್ಲಾ ಅದೇಕೆ ಮೂಕರಾಗುತ್ತೇವೆ ಎಂಬುದನ್ನು ಒಂದು ರಮ್ಯವಾದ ಕಲ್ಪನೆಯಲ್ಲಿ ಚಿತ್ರಿಸಿರುವ ಈ ಪದಗಳ ಪರಿಯು ಅತೀ ಅದ್ಭುತ ... ಮೌನವನ್ನು ಶೃಂಗಾರದೊಡನೆ ಬೆರೆಸಿ ಮಧುರವಾದ ಕವಿತೆಯನ್ನು ಕಟ್ಟಿರುವ ನಿಮ್ಮ ಮೌನದ ಕ್ಷಣಗಳಿಗೆ , ನನ್ನೆರಡು ಮಾತುಗಳಿವು .. ತುಂಬಾ ಸೊಗಸಾಗಿದೆ .. ತುಂಬಾ ಇಷ್ಟವಾಯಿತು .. :)

    ReplyDelete
  14. ಬೆಚ್ಚಗೆ ಮಲಗಿದ ಮೌನವು ಕವಿತೆಯಲ್ಲಿ ಚೆನ್ನಾಗಿ ಮಾತಾಡಿದೆ ..

    ReplyDelete
  15. ಮಾತು..
    ಮಲಗಿದ್ದಕ್ಕೆ ಅಲ್ಲವೆ ಮೌನ ಮೊರೆದದ್ದು?...
    ಇಷ್ಟೆಲ್ಲ ಕವನವಾದದ್ದು...

    ಚಂದದ ಕವನ...
    ಬಹಳ ಇಷ್ಟವಾಯ್ತು....

    ReplyDelete
  16. ಮಾತು ಮೌನದ ಮಡಿಲಲ್ಲಿ ಬೆಚ್ಚಗೆ ಮಲಗಿತ್ತು ...... ಸುಂದರ ಸಾಲುಗಳು....ಸೊಗಸಾದ ಕವನ...

    ReplyDelete
  17. ಮಾತು ಮೌನಕ್ಕೆ ಶರಣು...ನನ್ನದು ನಿಮ್ಮ ಈ ಕವನಕ್ಕೆ ಶರಣು...

    ReplyDelete