Monday, 30 January 2012

ಹೆಜ್ಜೆ



ಹೆಜ್ಜೆಗಳು ಗೆಜ್ಜೆಗಳತ್ತ ...
ನಡೆದ ದಾರಿಯ ತುಂಬಾ ಒಂಟಿತನ,

ಮೌನದಾಚೆ ಬಂದ ಮಾತು ..
ಚಿಗುರಿ ನಿಂತ  ಮೊದಲ ಹಸಿರು ..
ತಿಳಿವ ಮುನ್ನ  ಬಡಿದ ಸಿಡಿಲು ..
ಮುಖ ಗಳೆಷ್ಟು   ಪ್ರೀತಿಗೆ,

ಒಂಟಿ ಪಯಣ  ಗೊತ್ತಿರದ ದಾರಿ ..
ಮಧ್ಯೆ ಕನುಸುಗಳ  ಗರ್ಭಪಾತ ..
ನಡುಗುವ ಚಳಿಯಲ್ಲೂ  ಹರಿದ ಬೆವರು 
ಇದಕ್ಕೆಲ್ಲ  ನನ್ನೂರ ಸೂರ್ಯ ಸಾಕ್ಷಿ,

ಮುಗಿದ ಮಾತು  ಕಣ್ಣೀರ  ಪ್ರವಾಹಕ್ಕೆ ..
ಕೊಚ್ಚಿಹೋದ  ಗುರುತು ..
ಅಶ್ರುವಿನ ಧಾರೆಗೆ  ತುಂಬಿದ  ಅಘನಾಶಿನಿ ..
ನೆನಪಿನ ಬುಟ್ಟಿಗೆ ಹಿಡಿದ ಗೆದ್ದಲು ..

ಗೆಳೆಯಾ ...
ನನ್ನೂರ ಕನಸುಗಳಿಗೆ  ಸಾವಿಲ್ಲ ..
ನನ್ನೆದೆಯ ಕೋಣೆಯಲಿ  ಬಂಧಿಯದು..
 ಹೆಜ್ಜೆಗಳು ಮತ್ತೆ ಕನಸಿನ ಕಡೆಗೆ......

(ಚಿತ್ರ net ನಿಂದ )

9 comments:

  1. ಕೆಲ ಚಿತ್ರಗಳು ಅಚ್ಚಳಿಯದೆ ಎದೆಯಾಳದಲ್ಲಿ ಉಳಿದು ಬಿಡುವ ಪರಿಯೇ ಹಾಗೆ! ಇದೊಂದು ಭಾವ ತೀವ್ರ ಕವನ.

    ನನ್ನ ಬ್ಲಾಗಿಗೆ ಸ್ವಾಗತ ಮೇಡಂ,
    www.badari-poems.blogspot.com/

    ReplyDelete
  2. ಕನಸಿನ ಗರ್ಭಪಾತ... ಬುಟ್ಟಿಗೆ ಹಿಡಿದ ಗೆದ್ದಲು...ಈ ಪದಗಳ ಸಾರ್ಥಕತೆ ಎದ್ದುಕಾಣುವುದು ಹೆಜ್ಜೆಗಳು ಮತ್ತೆ ಕನಸಿನ ಕಡೆಗೆ ಎನ್ನುವ ಆಶಾಭಾವ ಹೊತ್ತು ಮುನ್ನಡೆವ ಮನಸ್ಥಿತಿಯ ಕಾರಣ... ಚನ್ನಾಗಿದೆ ವಂದನಾ...

    ReplyDelete
  3. ವಂದನಾ...

    ತುಂಬಾ..
    ತುಂಬಾ..
    ತುಂಬಾ... ಚಂದದ ಕವನ...! ಬಹಳ ಇಷ್ಟವಾಯಿತು...!!

    ವೈಚಾರಿಕ ಪ್ರಬುದ್ಧತೆ ಎದ್ದು ಕಾಣುತ್ತಿದೆ....

    ReplyDelete
  4. ಕವಿತೆಯ ಎಲ್ಲಾ ಸಾಲುಗಳೂ ಸರಾಗ, ಸುಲಲಿತ.. ಖುಷಿಯಾಗುವಂತಿದೆ... ಆದರೆ, ಕೊನೆಯಲ್ಲಿ ಗೆಳೆಯಾ ಅನ್ನೋದೊಂದು ವಾಚ್ಯ ಅನಿಸಿತು.. ಅದನ್ನು ತೆಗೆದು ಓದಿದರೆ ಬ್ಯುಟಿ... ಇದು ನನ್ನನಸಿಕೆ...

    ReplyDelete
  5. ನನ್ನ ಅಲಾಪಕ್ಕು ಓದುಗರಿದ್ದಾರೆ ...
    ನಿಮ್ಮೆಲ್ಲರ ಸಹಕಾರ ಮತ್ತೆ ನನ್ನ ಬರೆಯಲು ತೊಡಗಿಸುತ್ತಿದೆ ...
    ಸಹಕಾರ ಅಗತ್ಯ ...
    ತೇಜಸ್ವಿನಿ , ಬದರೀನಾಥ ಜಿ ,ಜಲನಯನ, ಪ್ರಕಾಶಣ್ಣ , ಮಂಜುನಾಥ, thank u all

    ReplyDelete
  6. ವೈಚಾರಿಕ ಪ್ರಬುದ್ಧತೆ ಎದ್ದು ಕಾಣುತ್ತಿದೆ....

    ReplyDelete
  7. ಮುಳ್ಳಿನ ಹಾದಿಯನ್ನು ಹಾದು ಹೋಗುವಾಗ ಕನಸನ್ನು ಕಳಕೊಳ್ಳುವವರೇ ಜಾಸ್ತಿ. ನಿಮ್ಮ ಕನಸನ್ನು ಬಂದಿಸಿ ಇಟ್ಟುಕೊಂಡ ರೀತಿ ಇಷ್ಟವಾಯಿತು. ತುಂಬಾ ವಿಚಾರ ಪ್ರಭುದ್ದವಾಗಿ ಬರೆದಿದ್ದಿರಾ.

    ReplyDelete