Sunday 25 December 2011

ಒಂದು ತೊಟ್ಟಿಲ ಕ(ವ್ಯ)ಥೆ


ನಾನು  ಅಟ್ಟದ ಮೇಲಿಂದ  ಮಾತಾಡುತ್ತಿದ್ದೀನಿ,
ನನ್ನ ಅಳಲನ್ನ ನೀವಾದರೂ ಕೇಳಿಸಿ ಕೊಳ್ಳುತ್ತೀರಾ?
ನಂಗೂ ಆಸೆ.......

ಮೊನ್ನೆ ಮೊನ್ನೆ  ನನ್ನ ಮಡಿಲಲ್ಲಿ ಮಲಗಿದ ಪುಟ್ಟಿ 
ಇಂದು ಹೆರಿಗೆಗೆ  ಅಂತ  ನಮ್ಮನೆಗೆ  ಬಂದಿದ್ದಾಳೆ ..
ಆದರೆ .........

ನನ್ನ ಯಾರೂ ಮಾತಾಡಿಸುತ್ತಲೇ ಇಲ್ಲ
ನಾನು ಅಟ್ಟದ ಮೂಲೆಯಲ್ಲಿ  ಧೂಳು ಹಿಡಿದು
ಹಳೆಯ ಪೇಪರ್,ಬಟ್ಟೆ ಎಲ್ಲಾ ಮಡಿಲಲ್ಲಿ ತುಂಬಿ ಕೊಂಡು
ಕೂತಿದ್ದೀನಿ ...

ಎರಡು ದಿನದ ಹಿಂದೆ  ಅಮ್ಮ ಮಗ ಮತ್ತೆ ಸೊಸೆ 
ಮಾತಾಡಿದ್ದನ್ನು ಕೇಳಿದ ಮೇಲಂತೂ,
 ಬೇಸರ ತಡಿಯಕ್ಕೆ ಆಗುತ್ತಿಲ್ಲ,
ನಿಮ್ಮೆದುರು ಹೇಳಿಕೊಳ್ಳೋಣ ....
ಅಂತ ... 
"ನನ್ನ ಪಾಪುಗೆ ಆ ಹಳೆ ತೊಟ್ಟಿಲು ಬೇಡ 
ಎಷ್ಟು ಜನ ಯುಸ್  ಮಾಡಿದ್ದಾರೋ ಏನೋ 
ನನ್ನಸ್ಟೇ ವಯಸ್ಸಾಯಿತು ಬೇರೆ ತರೋದಾದರೆ ತನ್ನಿ 
ಇಲ್ಲ, ನಾನೇ ತರುತ್ತಿನಿ " ಅಂತ ಅಮ್ಮ ನೆದುರು 
ಮಗ ಹೇಳಿ ಬೇಜಾರು ಮಾಡಿ ಕೋತಿದ್ದ....
ಕೆಲವೇ  ದಿನಗಳಲ್ಲಿ ಮನೆಗೆ ಹೊಸ ಸದಸ್ಯ  ಬರಲಿದ್ದಾನೆ/ಳೆ,
ಅಂತಾದರೆ,ತಿಂಗಳ ಮೊದಲೇ  ನನ್ನ ಇಳಿಸಿ ಬಿಸಿಲಲ್ಲಿ ಒಣಗಿಸಿ,
ಹೊಸ ಅತಿಥಿಯ ಸ್ವಾಗತಕ್ಕೆ  ತಯಾರಿ ಮಾಡಲಾಗುತ್ತಿತ್ತು .
ನಿನ್ನ ಅಪ್ಪ ನಿಗೂ  ಇದೇ  ತೊಟ್ಟಿಲಲ್ಲಿ ಮಲಗಿಸಿದ್ದು ...
ಅಂತ ಅಜ್ಜಿ  ಬೊಚ್ಚು ಬಾಯಗಲಿಸಿ ....
ನೆನಪಿನ ಬುತ್ತಿ  ಬಿಚ್ಚುತ್ತಿದ್ದರು .....
ಮಗು ಹುಟ್ಟಿದ ಹನ್ನೊಂದನೆಯ ದಿನ ... 
ನನ್ನ ಮಡಿಲಿಗೆ ಹಾಕುವದಕ್ಕಿಂತ ಮೊದಲು 
ಗುಂಡು ಕಲ್ಲಿಗೆ  ಅಲಂಕಾರ ಮಾಡಿ  ತೂಗಿ 
ಆಮೇಲೆ ಮಗುವನ್ನ  ಮಲಗಿಸಿ ....
ನಾಮಕರಣ  ಶಾಸ್ತ್ರ ಮಾಡುತ್ತಿದ್ದರು .
೨-೩  ವರ್ಷದ  ಹಿಂದೆ ಪರಿಚಯದ ಡಾಕ್ಟರ್  ಒಬ್ಬರು 
ಹೇಳುತ್ತಿದ್ದರು ....
ಮಗು ತಾಯಿಯ ಮಗ್ಗುಲಲ್ಲಿ ಮಲಗಿದರೆ 
ಅವಳ ಮೈ ಶಾಖ ದಿಂದ ಬೆಚ್ಚಗಿರುತ್ತೆ .
ಅದಿಕ್ಕೆ ನಮ್ಮಲ್ಲಿ ಎಲ್ಲಾ ತೊಟ್ಟಿಲನ್ನ ತೆಗೆಸಿದ್ದಿವಿ,
ಹಿರಿಯರು ಮತ್ತೆ ಕೆಲವು ಡಾಕ್ಟರ್ ಹೇಳುವ ಪ್ರಕಾರ 
ಕೆಲವು ವಾರಗಳ ವರೆಗೆ ತಾಯಿಯ ದೇಹಕ್ಕೆ 
ಆಯಾಸ ವಾಗಿರುತ್ತೆ
ಅದರಿಂದ  ತೊಟ್ಟಿಲಲ್ಲಿ ಮಲಗಿಸಿದರೆ
ಇಬ್ಬರು  ಒಳ್ಳೆಯ ನಿದ್ದೆ ಮಾಡ ಬಹುದು.
ಜೊತೆಗೆ ಜೋಗುಳವೂ  ಸೇರಿದರೆ,
ಬೇಗ ನಿದ್ದೆ  ಮಾಡಬಹುದು ...
ಪರಂಪರಾಗತವಾಗಿ  ಬಂದ ಮರದ ತೊಟ್ಟಿಲು ,
ಬೆತ್ತದ   ತೊಟ್ಟಿಲು ಚೆನ್ನಪಟ್ಟಣದ  ಬಣ್ಣದ ತೊಟ್ಟಿಲು ,
ಗಳಿಂದ ಹಿಡಿದು  ಎಲ್ಲಿ ಬೇಕೆಂದರಲ್ಲಿ 
ಕೊಂಡೊಯ್ಯ ಬಹುದಾದ ಸ್ಟ್ಯಾಂಡ್ ಇರುವ ಪ್ಲಾಸ್ಟಿಕ್ ತೊಟ್ಟಿಲು,
ಆಧುನಿಕತೆ ಬೆಳೆದಂತೆ ಸ್ವಯಂಚಾಲಿತ ತೊಟ್ಟಿಲು ಗಳು ಬಂದಿವೆ.

ಆರೋಗ್ಯಅನುಕೂಲ ,ಅಂದ ಮತ್ತು  ಪರಂಪರಾಗತ 
ತೊಟ್ಟಿಲು ಇಂದು ಅಟ್ಟದಿಂದಲೂ ಕಾಣೆಯಾಗುತ್ತಿದೆ.
ಮಾಳಿಗೆಗೆ  ಬಂದು ಮಕ್ಕಳನ್ನು ದೊಡ್ಡವರನ್ನಾಗಿಸಿ,
ಅಟ್ಟ ಸೇರುತ್ತಿದ್ದ ನಾನು.....

ಇಂದು ಬೇಡದ ವಸ್ತುವಾಗಿ  ಮೂಲೆ ಸೇರಿದ್ದೇನೆ,
ನನ್ನವರಲ್ಲಿ ಕೆಲವರು ಮ್ಯೂಸಿಯಂ  ಸೇರುವ 
ತಯಾರಿಯಲ್ಲಿದ್ದಾರೆ........

ಪಾಪುವಿಗೆ ಹೊಸ ತೊಟ್ಟಿಲನ್ನು ತರುವ ವಿಚಾರ 
ಊಟಕ್ಕೆ ಕುಳಿತಾಗ ಮಾತಾಡುತ್ತಿದ್ದಾರೆ.......
.......................... ಅವಳ ಸಂತೋಷವೇ 
ನನ್ನ ಸಂತೋಷ ....ಅವಳನ್ನ ಮತ್ತೆ  ಅವಳ  ಅಪ್ಪ ,ಅಜ್ಜ
ಚಿಕ್ಕಪ್ಪಅತ್ತೆಅಕ್ಕ,ಅಣ್ಣ  ಹೀಗೆ ಎಲ್ಲರನ್ನ 
ಮಡಿಲಲ್ಲಿ  ಮಲಗಿಸಿ ಕೊಂಡ ನನಗೆ ..
ಪುಟ್ಟಿಯ  ಪಾಪುವನ್ನ ಮಲಗಿಸಿ ಕೊಳ್ಳ ಬೇಕೆನ್ನುವ 
ಆಸೆ ತಪ್ಪಾ.......?

ನೀವೇ ಹೇಳಿ ......

7 comments:

  1. ಮನೆಯ ತೊಟ್ಟಿಲುಗಳು ಅದರಲ್ಲೂ ಅವಿಭಕ್ತ ಕುಟುಂಬದಲ್ಲಿ ಬಹಳ ಉಪಯೋಗಿ.. ಇವುಗಳಿಗೇ ಜೀವ ಬಂದಂತೆ ಇಂದಿನ ವಸ್ತು ಸ್ಥಿತಿಯ ಹಿನ್ನೆಲೆಯಲ್ಲಿ ಚನ್ನಾಗಿ ಕಲ್ಪಿಸಿಕೊಂಡು ಅಕ್ಷಗಳನ್ನಾಗಿ ಅನುವಾದಿಸಿದ್ದೀರಿ... ಚನ್ನಾಗಿದೆ.

    ReplyDelete
  2. ಪತ್ರಿಕೆಯಲ್ಲಿ ಬಂದಿದ್ದು ನೋಡಿಲ್ಲ..
    ನೀವು ಬರೆದದ್ದು ಚೆನ್ನಾಗಿದೆ..
    ಇಷ್ಟ ಆಯ್ತು.....

    ReplyDelete
  3. This comment has been removed by the author.

    ReplyDelete
  4. ಕಾಗುಣಿತ ಮತ್ತು ವ್ಯಾಕರಣ ದೋಷ ಬಿಟ್ಟರೆ ’ತೊಟ್ಟಿಲ ಸ್ವಗತ’ ಚೆನ್ನಾಗಿದೆ, ಪತ್ರಿಕೆಯಲ್ಲಿ ಬಿಡಿ ಅದು ಹೇಗೂ ಆಗಬಹುದು. ಭಾವನೆಗಳನ್ನು ಹೊರಹಾಕುವಾಗ ಭಾಷೆಯ ಶಬ್ದ ಮತ್ತು ವ್ಯಾಕರಣ ಶುದ್ಧತೆಗೆ ಗಮನ ಹರಿಸಿ, ಅವೇ ಭಾಷೆಯ ಅಂಗಸೌಷ್ಟವಗಳು,ನಾನು ಹೇಳದ್ದಕ್ಕೆ ಬೇಸರ ಪಡುವ ಅಗತ್ಯವಿಲ್ಲ, ಮುಂದಿನ ಬರಹಗಳಿಗೆ ಶುಭಕೋರುತ್ತೇನೆ.

    ReplyDelete
  5. ಚೆನ್ನಾಗಿದ್ದು ವಂದನ ,,, ನಮ್ಮ ಮನೆಲ್ಲೂ ಈ ತರದ್ದು ಒಂದು ತೊಟ್ಟಿಲು ಇದ್ದು ಅದರ ಆಸೆ ಯನ್ನು ಖಂಡಿತಾ ನಿರಾಸೆ ಮಾಡ್ತ್ನಿಲ್ಲೆ ...

    ReplyDelete
  6. ಜಲನಯನ,
    ಸಿಮೆಂಟು ಮರಳಿನ ಮದ್ಯೆ ,
    ವಿ . ಆರ್. ಭಟ್ ,
    ನನ್ನೊಳಗಿನ ಕನಸು ವೆಂಕಟೇಶ್ .
    ಧನ್ಯವಾದಗಳು ,

    ನನ್ನದು ಬರೆಯುವ ಪ್ರಯತ್ನ ಅಸ್ಟೇ
    ವ್ಯಾಕರಣ ದೋಷ ವನ್ನ ಮುನಿನ ಪೋಸ್ಟ್ ಗಳಲ್ಲಿ
    ತಿದ್ದಿ ಕೊಳ್ಳುವೆ......
    ನಿಮ್ಮೆಲ್ಲರ ಸಹಾಯ......... ಯಾವತ್ತಿಗೂ ಹೀಗೆಯೇ ಇರಲಿ
    ಓದಿದವ ರೆಲ್ಲರಿಗೂ
    ಧನ್ಯವಾದಗಳು

    ReplyDelete
  7. ನೈಸ್. ವಂದನ.
    ನಿಮ್ಮ ಬ್ಲಾಗ್ ಕಡೆ ಬರದೆ ತುಂಬ ದಿನ ಆಗಿತ್ತು.
    ಇವತ್ತು ಬಂದಿದ್ದಕ್ಕೆ ಒಳ್ಳೆ ತಟ್ಟಿಲು ಸಿಕ್ತು.
    -ಮನು

    ReplyDelete