Thursday 1 December 2011

ಅಟೋಗ್ರಾಫ್

ಎಂದೋ ಮಡಚಿಟ್ಟ ಪುಟಗಳ  
ತೆರೆಯುತ್ತ ಹೋದೆ 
ಮೌನ ಮಾತಾಯಿತು 


ಕತೆ ಹೇಳಿದವು ಪುಟ 
ಮುಗುಳು ನಗೆಯಿಟ್ಟು 
'' ನೆನಪು ಮೊದಲಿರಲಿ'' ಎಂದ ಹುಡುಗ 
ಕಾಣೆಯಾಗಿದ್ದಾನೆ 

ಮುಗಿಯದ ಮಾತು  ಆರದ ನಗು ಬಾಕಿ ಇದೆ

ಗೆಳೆಯಾ.....!
'' ಬೇಟಿ ಕೊಂಚ ತಡವಾದರೂ 
ಸ್ನೇಹಕ್ಕೆ ಮೋಸವಿಲ್ಲ 
ಇಲ್ಲಿ ನಂಬಿಕೆ ಆರುವದಿಲ್ಲ

ಮದ್ಯೆ  ಕೆಲವು ವರ್ಷಗಳ ಮೌನ ....
..... ಕುಳಿತದ್ದೊಂದೇ ಬದಲು  
ಅಲ್ಲವೇನೆ ....." 
ಎಂದ ಹುಡುಗಿ 

 ಮಗಳು, ಹೆಂಡತಿ, ಸೊಸೆ ,ಅಮ್ಮ ನಾದಿನಿ 
ಪಾತ್ರ ಗಳ ಮದ್ಯೆ ಬೆರೆತು ಹೋಗಿದ್ದಾಳೆ ...
ಮಾಥ್ಸ್ ಕಲಿಸಿದ ಮೇಸ್ಟ್ರು , ಗೆಳೆಯನಂತ ಅಣ್ಣನ  ಜೋತು ಅತ್ತ .........
'ಆಯ್ ಲವ್ ಯು'  ಅಂದ ಹುಡುಗ   

ಎಲ್ಲರೂ ವೇಷ  ಕಟ್ಟುತ್ತಾರೆ ,

ಸರಧಿ ಬಂದಾಗ ತೆರೆ ಹಿಂದೆ  ಮರೆಯಾಗುತ್ತಾರೆ ...

ಪಕ ಪಕನೆ ನಕ್ಕ ಹುಡುಗಿ 
ಸಿಟ್ ಗಾಗಿ ಜಗಳಾಡಿದ  ಡುಮ್ಮ 
ಪ್ರಜಾವಾಣಿಯ ಹುಡುಗ 
ಎಲ್ಲ ಮಡಿಸಿಡುವ ಪುಟಗಳಲಿ 

ಸೇರುತ್ತ ಹೋಗುತ್ತಾರೆ ....
ತೆರೆದಾಗ ಮಿಂಚಿ ಮುಗುಳು ನಗುವಾಗಿ 
ಮತ್ತೆ ಪುಟ ಸೇರುತ್ತಾರೆ ....
ನಿನ್ನೆಯಂತೆ.......

2 comments:

  1. prajavaniya huduga eduru ninta nenapayita ?

    andidda elli ... sanje 5ra varege paper kadittu koduttidda ... varushagala varege ,... tammanata huduga , hesaru nenapilla ...

    ReplyDelete
  2. ಮಸ್ತ್ ಕವನ...

    ನನ್ನ ಕಾಲೇಜು ದಿನಗಳ ನೆನಪು ಬೇಡವೆಂದರೂ ಆಯ್ತು...

    ಬಹಳ ಇಷ್ಟ ಆಗಿದ್ದು.. ಈ ಸಾಲುಗಳು...
    ..
    "ಎಲ್ಲ ಮಡಿಸಿಡುವ ಪುಟಗಳಲಿ
    ಸೇರುತ್ತ ಹೋಗುತ್ತಾರೆ ....
    ತೆರೆದಾಗ ಮಿಂಚಿ ಮುಗುಳು ನಗುವಾಗಿ
    ಮತ್ತೆ ಪುಟ ಸೇರುತ್ತಾರೆ ....

    ನಿನ್ನೆಯಂತೆ...."

    Thank u.....

    ReplyDelete