Thursday, 1 December 2011

ಬೆಳಕು



ರವಿ ಇನ್ನು ಹೊದಿಕೆ ಸರಿಸದೆ ..

ಎರಡೇ ನಿಮಿಷ  ಎನ್ನುತ್ತಾ 

ಮುಸುಕೆಳೆದ  ಹೊತ್ತು ...

ನಾಯಿ ಹಿಡಿದು ಹೊರಟೆ ....

ಹನಿ ಹನಿಯಾಗಿ  ತಲೆಮೇಲೆ 

ಮುತ್ತು ಪೋಣಿಸುವ  ಮಂಜು...

ಮೂಗಿನ ತುದಿ  ಬೆರಳುಗಳಲಿ 

ಚಳಿಯ ಕೊರೆತ 

ಎಲೆ ಗಳಲಿ ಇಬ್ಬನಿಯ  ಪಸರು 

ನಡೆದಸ್ಟು   ಮುಗಿಯದ ದಾರಿ ..

ಕಣ್ಣು ತುಂಬಿ  ಕೊಂಡಷ್ಟು  ಮುಗಿಯದಾ ದಾಹ ...

ಹೊದಿಕೆ ತೆಗೆಯುತ್ತಿರುವ  ರವಿಯ ಕಿರಣ 

ತಲುಪಿತ್ತು ಅಗಸ್ಟೇ ಭುವಿಗೆ ....

ನಾಯಿಮರಿ ನನಗಿಂತ ಮೊದಲೇ ಮನೆಗೆ 

No comments:

Post a Comment