Thursday, 4 July 2013

ಎಡ ಬಿಡಂಗಿ

ಅವತ್ತು ಕಾಡಿದ ಭಾವ ಇವತ್ತು ನನ್ನಲ್ಲಿ ಭದ್ರ ವಾಗಿದೆ .....


ದಶಕ ಗಳ ಹಿಂದೆ ಮದುವೆಯಾಗಿ ಹೊರಟಾಗ ಅಮ್ಮನಲ್ಲಿ ಸಂತ್ರಪ್ತಿ ...


"ಅಂತು ಮಗಳಿಗೆ ಒಳ್ಳೆಯ ಹುಡುಗನ್ನ ಹುಡುಕಿದೆ " ಯಾರೋ ಆಡಿದ ಮಾತು ... ..


ಅಮ್ಮನಿಗೂ ಇದೆ ಬೇಕಿತ್ತಾ ...?


ಪ್ರಶ್ನೆ ಉತ್ತರ ಸಿಗದೇ ನನ್ನೊಳಗೇ ... ಉಳಿದ ಪ್ರಶ್ನೆ ಗಳೊಂದಿಗೆ ಕಣ್ಣಮುಚ್ಚೆ ಆಡುತ್ತಾ ....


ಅಲ್ಲಲ್ಲೇ ಸುತ್ತಿ ಮತ್ತೆ ಗೋಜಲಾಗುತ್ತಿದೆ ..........


ಒಂಟಿತನಕ್ಕೆ ಉತ್ತರ .......


" ನಾನಲ್ಲಿಂದ ವದರಿದ್ದೆ ಬದ್ದ ".... .... ಸತ್ಯ ಸುಳ್ಳುಗಳ ತಾಕಲಾಟಕ್ಕೆ .....


ಅಲ್ಲೆಲ್ಲೋ ಕುಳಿತ ಅಮ್ಮನಿಗೆ ನನ್ನ ಒಂಟಿತನದ ಬಿಸಿ ತಾಗ ಬಾರದೆಂದು .....


ಮಾತಿನಲ್ಲಿ ನಸುನಗುವಿನ ಮುಸುಕೆಳೆಯುತ್ತೇನೆ ................


ಮುಖ ಕಾಣದ್ದಕ್ಕೆ ..... ಅಂದಿನ ಮಾತು ಮುಗಿದರೆ ...


ನನಗೆ ಯುದ್ದ ಗೆದ್ದ ಭಾವ ........


ನನ್ನದೇ ಸ್ನೇಹಿತರು .... ಓಡಾಡಿದ ತೋಟ, ಕಾಡು ತಿಂದ ಕಾಡು ಹಣ್ಣು ,


ಓದಿದ ಪುಸ್ತಕ ..... ನನ್ನದೇ ಮಾತ್ರ ಭಾಷೆಯ ಜನ.....


ಇದೆಲ್ಲ ಒಂದು ಹಂತದ ವರೆಗೆ ..... ....


ಅಪ್ಪನ ವತ್ತಾಯಕ್ಕೆ ..... ತಿರುಗಿ ಮಾತಾಡಲಾರದೆ .... ಒಪ್ಪಿಕೊಂಡ ಓದು ...


ಇಲ್ಲ ..... ಬೇಕಿರಲಿಲ್ಲ ನನಗೆ .... ಲಕ್ಷ ಲಕ್ಷ ಸಂಪಾದನೆ ......


.... ನನ್ನಂತಹ ಎಲ್ಲಾ ಎಲ್ಲಾ ಹುಡುಗಿಯರಂತೆ .... ನಾನು ನನ್ನಷ್ಟಕ್ಕೆ ಹಾಡಿಕೊಂಡು ....


"ಟವೆಲ್ ಇಟ್ಟು ಕೊಂಡು ಓದುವ ಕಾದಂಬರಿ ಓದಿಕೊಂಡು".....


ನನ್ನದೇ ಪುಟ್ಟ ಪ್ರಪಂಚದಲ್ಲಿ ಬದುಕಿ ಬಿಡುತ್ತಿದ್ದೆ.... ...


ಪರಿಚಿತರಿಲ್ಲದ ಊರು .... ಆಸಕ್ತಿ ಇಲ್ಲದ ಕೂಡಿ ಕಳೆಯುವ ಓದು ....


ನನ್ನಂತಹ ಭಾವ ಜೀವಿಗಲ್ಲ .....


ಅಮ್ಮ ನೆದುರು ಬಿಕ್ಕಿ ಬಿಕ್ಕಿ ಅತ್ತಿದ್ದೆ...


ಕೊನೆಗೂ ಎಲ್ಲರೆದುರು ಹೇಳಲಾಗದೆ .....


ಒಂಟಿಯಾಗಿ ನನ್ನೊಳಗೆ ಬದುಕಿ ಬಿಡುವ ....


ನನ್ನ ಆಸೆಗಳನ್ನ .... ನನ್ನವೇ ಮಾಡಿ ಕೊಂಡು.....


ಕನಸು ಗಳನ್ನ ಕಟ್ಟಿಟ್ಟು ....


ಭಾವನೆ ಗಳಿಲ್ಲದ ಭವಿತವ್ಯಕ್ಕೆ ನಾಂದಿಯಿಟ್ಟೆ ,


ನನಗಿಂತ ದೊಡ್ಡ....! ಬ್ಯಾಗ್ ಗಳೊಂದಿಗೆ ....


ಹೊರಟಾಗ .... ಆಗಿನ್ನೂ ಕನಸು ಕಾಣುವ ಹರಯ ......


ಅಪ್ಪನಿಸ್ಟದ ಓದು.... ಅಪ್ಪನಿಗಾಗಿ ಓದಿದೆ .....


ಕೇಲಸ ..... ಬೇಡ ವೆಂದರೂ ಕರೆದು ಕೊಟ್ಟರು .....


ಮೂರ್ನಾಲ್ಕು ವರ್ಷಕ್ಕೆಲ್ಲ .... ಕೂದಲೆಲ್ಲ ಹಣ್ಣಾಗಿ , ಕಣ್ಣು ಮಂದವಾಗಿ,


ಕನ್ನಡಕ ಮತ್ತೆ ಕೂದಲಿನ ಬಣ್ಣ ಒಟ್ಟೊಟ್ಟಿಗೆ .... ನನ್ನ ಸ್ನೇಹಿತರಾದವು .....


ರಾಜಣ್ಣ ನ ಲೈಬ್ರರಿ ಯನ್ನ .... ಯಾರಿಗೋ ಮಾರಾಟ ಮಾಡಿ ಹೋದ ...


ಅನ್ನುವ ಸುದ್ದಿಯನ್ನೂ ಅಮ್ಮ, ನಗುವಿ ನೋಟ್ಟಿಗೆ ಹೇಳಿದಾಗ .....


ನೀವು ಎಲ್ಲಾ ಊರು ಬಿಟ್ಟ ಮೇಲೆ .... ಯಾರು ಓದುವರಿಲ್ಲದಂತಾಗಿ...


ಪುರೋಹಿತ್ಯ ಮಾಡುವದೇ .... ಆದಾಯದ ಮೂಲ ಮಾಡಿಕೊಂಡ ರಾಜಣ್ಣ .....


(ವಾರಕ್ಕೆ ೪ ರೂಪಾಯಿ ಯಂತೆ ಒಂದು ಪುಸ್ತಕ ಕೊಡುತ್ತಿದ್ದ ರಾಜಣ್ಣ ....)


ಇವೆಲ್ಲ ಫೋನ್ ನಲ್ಲಿ ಅಮ್ಮ ಹೇಳಿದ್ದು ..... ಖುಷಿಯಿಂದಲ ?


ಗೊತ್ತಿಲ್ಲಾ !


ಒಮ್ಮೊಮ್ಮೆ ತುಂಬಾ ಭಾವುಕಳಾಗಿ .... ಕಣ್ತುಂಬಿ ಕೊಂಡಿದ್ದೇನೆ ....


ನನ್ನ ಎಡ ಬಿಡಂಗಿ ಬದುಕಿಗೆ .....


ಎಲ್ಲಿಯ ವರೇಗೆ ಹೀಗೆ ಬೇರೆಯವರಿಗಾಗಿ ಬದುಕಲಿ ಅಂತೆಲ್ಲಾ ...


ನನ್ನ ಕಂಡಿಶನ್ನಿನಂತೆ ಮದುವೆ ಯಾದ ಮೇಲೆ ಕೆಲಸ ಮಾಡಲ್ಲ ....


ಅಂದು ಕೊಂಡವನು ..... ದಿನವಿಡೀ ಕಾಡುವ ಒಂಟಿತನಕ್ಕೆ ....


ಹೆದರಿ ... ಕೆಲಸಕ್ಕೆ ಸೇರಿಕೊಂಡೆ ....


ಪುರಸೋತ್ತಿದ್ದಾಗ ಓದಬೇಕು ಅಂತ ತಂದಿಟ್ಟ ಪುಸ್ತಕಗಳೆಲ್ಲಾ


ಮನೆ ಬದಲಿಸುವಾಗ ..... ಎಲ್ಲೆಲ್ಲೋ .... ಸೇರಿ ಹೋದವು .....


ಬೇಕಾದಾಗ ಸಿಗಲಿಲ್ಲಾ , ಸಿಕ್ಕಾಗ ಓದಲಾಗಲಿಲ್ಲ .....


ಮನಸ್ಸಿಗೆ ಬಂದಾಗ .... ಮನೆಯ ಅಂಗಳದಲ್ಲಿ ಕುಳಿತು .....


ಕತೆ ಹೇಳಬೇಕು ..... ಅಂತೆಲ್ಲ ಹೋಗಿದ್ದೆ .....


ಆದರೆ , ಅಲ್ಲಿ ನಾ ಪರಕೀಯಳು, ಇಲ್ಲಿ ನಾ ಹೊರಗಿನವಳು .....


ಊರೆಲ್ಲಾ ಬದಲಾಗಿದೆ ..... ನಾನೋದಿದ ಶಾಲೆ ಮುಚ್ಚಿ ವರ್ಷ ಕಳೆದಿದೆ .....


ಮಕ್ಕಳೆಲ್ಲಾ ಪೇಟೆ ಶಾಲೆಗೇ ಹೊರಟಿದ್ದಾರೆ .....


ಬಾರೋ ನೇರಳೆ ಹಣ್ಣಿದೆಯ ನೋಡಿ ಬರೋಣ ಎಂದಿದ್ದಕ್ಕೆ ....


ನನ್ನಣ್ಣನ ಮಗ ..... " ನಾಳೆ ಸ್ಕೂಲ್ ಗೆ ಹೋಗಬೇಕು ನಾಲಿಗೆ ಎಲ್ಲಾ ನೀಲಿ ಯಾಗುತ್ತೆ "


ಅಂದು ಒಳಗಿಂದ ಇನ್ನೇನೋ .... ಚಿಪ್ಸ್ ತಂದ ಬೇಕಾ ಎನ್ನುತ್ತಾ ?


ಅಪ್ಪ ಇದಕ್ಕೇನ ನನ್ನ ಮಾಮೂಲು ಹುಡುಗಿಯಂತೆ ಇಲ್ಲೇ ಓದಲು ಬಿಡದೆ ಹೋದದ್ದು .....


ಅನ್ನಿಸಿತು ...


ನನ್ನ ಹಾಸ್ಟೆಲ್ ಓದು ..... ಭಾವನೆ ಗಳನ್ನ ಕಿತ್ತು ಕೊಂಡದ್ದು ....



ಅಧುನಿಕರನ್ನಾಗಿಸುವ .... ಹಟಕ್ಕೆ ಬಿದ್ದ ಅಪ್ಪ .....


ತಪ್ಪು ಮಾಡಿಲ್ಲ ....


ತನಗೆ ಅಂದು ಅವಕಾಶ ವಿಲ್ಲದ ತನ್ನಿಸ್ಟದ ಓದಿಗೆ ನಮ್ಮ .... ಸೇರಿಸಿದ್ದ .....


ನಾನು ಹಾಗೆ ಮಾಡಲ ?


ನನ್ನಾಸೆಯ ಓದಿಗೆ ನನ್ನ ಮಕ್ಕಳನ್ನ ಸೇರಿಸಲಾ ?


ಕೊನೆಯೇ ಇಲ್ಲದ ವಿಚಾರ ಗಳು ......


ನನ್ನ ಗೆಳತಿಯರೆಲ್ಲಾ ಆಗಾಗ ಒಟ್ಟಿಗೆ ಸೇರಿ ....


ಅಲ್ಲಿಗೆ ಹೋಗಿದ್ದು , ಇಲ್ಲಿ ತಿಂದದ್ದು ಅಂತೆಲ್ಲಾ


ಫೇಸ್ ಬುಕ್ ನಲ್ಲಿ ಫೋಟೋ ಅಂಟಿಸಿ ದಾಗೆಲ್ಲ ....


ನನ್ನ ಧಾವಂತದ ಬದುಕಲ್ಲಿ ಕಳೆದು ಹೋದದ್ದು ....


ಮತ್ತಷ್ಟು ಕಾಡಿ ಮೌನಿ ಯಾಗುತ್ತಿನಿ .....


ಈಗ ಇದೆಲ್ಲಾ ಯಾರಲ್ಲಿ ಹೇಳಲಿ ಗೊತ್ತಾಗದೇ .....


ಕೂಡಿ ಕಳೆಯುವ ಲೆಕ್ಕದ ಕೆಲಸದಲ್ಲಿ ತಪ್ಪು ಮಾಡುತ್ತೀನಿ .... ನನಗಲ್ಲ


ಕೇಲಸ ಇ ತಿಂಗಳ ಕೊನೆಗೆ ಬಿಟ್ಟು ಬಿಡುತ್ತೀನಿ....


ಅಂದು ಕೊಂಡು ಲೆಕ್ಕ ಸರಿ ಮಾಡಿ .... ಹೊರಡುತ್ತೀನಿ


ಬಿಟ್ಟು ಬಿಡಬೇಕು ಎಂದು ಕೊಂದ ಕೆಲಸ .... ಇನ್ನು ಬಿಟ್ಟಿಲ್ಲ


ಗಂಡ ಆಫೀಸ್ ಗೆ ಮಕ್ಕಳು ಅವರವರ ಓದಿಗೆ ಹೊರಟ ಮರು ಕ್ಷಣ


ಕಾಡುವ ಒಂಟಿತನ ದಿಂದ ಹೊರಗೆ ಹೋಗಲು ಕೆಲಸಕ್ಕೆ ಹೊರಡುತ್ತೇನೆ ...


ಓದದೆ ಉಳಿದ ಪುಸ್ತಕ ಓದಲು ನನ್ನಾಸೆಯಂತೆ .....


ತೋಟ ಸುತ್ತಲು .....


ಮತ್ತೆ ಕೆಲಸ ಬಿಡುವ ವಿಚಾರ ಮಾಡುತ್ತೇನೆ................

Tuesday, 2 April 2013

ನಾನು



ವಾಸ್ತವದಲಿ ತತ್ತರಗೊಂಡ



ಕನಸುಗಳಿಗೆ ಸಾಂತ್ವನ



ಹೇಳುತ್ತಿದ್ದ ದಿನಗಳು



ಇನ್ನು ನನ್ನೆದುರಿಲ್ಲ



ಕನಸುಗಳೇ ನನಗೇ



ಸಾಂತ್ವನ ಹೇಳುತ್ತಿವೆ



ನನ್ನೆದುರಿನ ವಾಸ್ತವದಲಿ



ತತ್ತರ ಗೊಂಡಿದ್ದು ಇಂದು



'ವಾಸ್ತವ' ಮತ್ತೆ 'ಕನಸು' ಗಳಲ್ಲ



"ನಾನು "..............

Friday, 1 March 2013

ಆಲಾಪಿನಿ

ಈಗ ನಾವು ಬರೆ ಪ್ರವಾಸಿಗರು ಮಾತ್ರ ....

ವರ್ಷಕ್ಕೊಮ್ಮೆ ಒಂದು ತಿಂಗಳು

ಕ್ಯಾಮರ ಹೆಗಲಿಗೇರಿಸಿ Q ನಲ್ಲಿ ನಿಂತು ಪಾಸ್ ಪಡೆದು ಅಂಡಲೆಯುವ ನಾವು

ನಿಮ್ಮೆಲ್ಲರಂತೆ ನಾವು ಬರೆ ಪ್ರವಾಸಿಗರು ,

ಇವತ್ತಿಗೂ ಅಜ್ಜಿ ಹೇಳಿದ್ದು ನೆನಪಿದೆ ...

ಹಾಳು ಇತಿಹಾಸ ಬೇಕೆನಿಸುತ್ತಿಲ್ಲ ...

ಇಲ್ಲಿಗೆ ಕಾಲಿಡ ಬಾರದು ಎಂದುಕೊಂಡಿದ್ದ ನಾನು ..

ಬಂದಿದ್ದೇನೆ ... ಇತಿಹಾಸದಲ್ಲಿ ನಮ್ಮವರ ಕುರುಹು ಎಲ್ಲಾದರೂ 

ಸಿಗಬಹುದೆಂದು..

ಕಾಲದ ಮರೆಯ ಕಸರತ್ತಿಗೆ ಕಯ್ ತಪ್ಪಿದ ಅರಮನೆ ...


ಕಾಲನ ತೆಕ್ಕೆಗೆ ಸೇರಿ ಹೋದ ನಾವು ....

ಒಂದೊಂದೇ ಹೆಜ್ಜೆ ಎತ್ತಿಡುತ್ತಾ ಭಾರವಾದ ಮನಸಿಗೆ ಸಮಾಧಾನ ಹೇಳುತ್ತಾ ....

ನಮ್ಮ ಮುತ್ತಾತ ಮೆರೆದ, ಮುತ್ತಜ್ಜಿ ನೊಂದ ಮನೆ ಇದು


ಒಂದು ಕಾಲದಲ್ಲಿ ನಮ್ಮದೇ ಮನೆ ...


ಇಂದು ಇಲ್ಲಿ ಕೇವಲ ಪ್ರವಾಸಿ ನಾವು .....

ಮುತ್ತಜ್ಜಿ ನೋಡಿದ ನೆನಪಿಲ್ಲ ಅಜ್ಜಿ ಯಾವತ್ತು ಹೇಳಿದಂತೆ ..


ಸುಂದರ ವಾಗಿದ್ದರು ... ಜಾಣ್ಮೆಯಾ ಹೆಂಗಸು ....


ಅಂದಿನ ಯುವರಾಜ ಮೆಚ್ಚಿ ಮದುವೆ ! ಯಾದಹುಡುಗಿ ...


( ಮದುವೆ ಆಗದವ ರೆಷ್ಟೋ )

ಅವರ ಜಾಣ್ಮೆ ಮದುವೆ ಆಗುವಂತೆ ಮಾಡಿದ್ದು .....


ಪಟ್ಟದ ರಾಣಿ ಅಲ್ಲ ಬಿಡಿ .....

ಒಳ ಅಡಿ ಇಟ್ಟಂತೆ .. ಮನ ಸ್ಮಶಾನ ಮೌನ ..


ಗೋಡೆಯ ಮೇಲಿನ ಸುಂದರ ಚಿತ್ರ ಅಲ್ಲಿಯ ಸಿಂಹಾಸನ ನೆಲದ ಹಾಸು ಕಲ್ಲು ..
ಚಿನ್ನ -ಬೆಳ್ಳಿಯ ವ್ವೆಭವ ... ನನ್ನ ಅತ್ತ ಸೆಳೆಯಲೇ ಇಲ್ಲ ....

ಮೂಲೆಯ ಕಂಭಕ್ಕೆಒರಗಿ ಒಂದು ಕ್ಷಣ ನನ್ನ ಮರೆಯುವಾಸೆ ...


ನನ್ನವನಿಗೆ ಹೇಳಿದೆ ...." ಕುಳಿತುಬಿಡು "


ಆತ ಮುಂದೆ ಸಾಗಿದ .....ವಿಚಾರಕ್ಕೆ ಬಿದ್ದೆ ...

ಇದೇ ಬಾಗಿಲಿಂದ ....

ಎದುರಾಡಿದ ಮನೆಯ ಹೆಣ್ಣು ಮಕ್ಕಳನ್ನ ಎಳೆ ತಂದಿರ ಬಹುದ ?

ಜೋರಾಗಿ ಕಿರುಚಿರ ಬೇಕು ....

ಅದಕ್ಕೆ.. ಇ ಗೋಡೆ,ಕಂಭ .... ಎಲ್ಲ ಇವತ್ತು ಸಾಕ್ಷಿ ಹೇಳ ಬಹುದಾ

ಎಷ್ಟು ಜನ ಅಮಾಯಕ ಹುಡುಗಿಯರ ಶಾಪ ಇರಬಹುದು ...

ಕಣ್ಣಿರು ... ಹೆತ್ತವರ ಬದುಕಿದ್ದು ಸತ್ತಂತ ಭಾವ...

"ಪುಣ್ಯ ನಮ್ಮ ಮಕ್ಕಳಿಗೆ ದುಡಿದು ತಿನ್ನುವ ದಾರಿ ತೋರಿಸಿದ್ದಕ್ಕೆ "

ಅಂತ ಅಜ್ಜಿ ಊರ ದೇವರ ಮುಂದೆ ಹೇಳಿ ನಮಸ್ಕರಿಸಿದ್ದು ನೋಡಿದ್ದೇನೆ ..

ಕಾರಣ ವಿಲ್ಲದೆ ,ಯಾರದೋ ತಪ್ಪಿಗೆ ನೇಣು ಗಂಭ ಏರಿದವರ..

ಅರಮನೆಯ ಸೇವೆಗೆ ಮುಡಿಪಿಟ್ಟ ನಂಬಿಗಸ್ಥರ ತಲೆ ದಂಡ

ಕಾಲನ ಹೊಡೆತಕ್ಕೆ ಕಳೆದು ಹೋಗಲು ....

ಇಸ್ಟೇ ಸಾಕಿರ ಬಹುದು....

"ಇದೇನು ದೇವಸ್ತಾನ ಅಂದುಕೊಂಡಿದ್ದಾರ ಇಲ್ಲಿ ಕುಳಿತು ಕೊಳ್ಳಲು"

ನನಗೆ ಅರೆಬರೆ ತಿಳಿಯುವ ಅವರದೇ ಭಾಷೆಯಲ್ಲಿ ಹೇಳುತ್ತಾ ಬಂದ

ಪೋಲಿಸ್ ನನಗೆ ಅಂದಿದ್ದು ಗೊತ್ತಾಗಿ ಅಲ್ಲಿಂದ ಎದ್ದೆ ....

ಸರ್ಕಾರ ಪೂರ್ತಿಯಾಗಿ ಹಣ ಗಳಿಸಲು ಮಾತ್ರವೇ

ಉಪಯೋಗಿಸಿದನ್ತಿತ್ತು ಅರಮನೆ ...

ಮಳೆಗೆ ನೀರು ಸೋರಿದ ಗುರುತು .....

"ಉತ್ತರದ ಮೂಲೆಯ ಎರಡನೇ ಕೋಣೆ"

ನಿನ್ನ ಮುತ್ತಜ್ಜಿಯದು ನೋಡದೆ ಬರಬೇಡ ..

ಅಮ್ಮ ಹೇಳಿದ್ದು ನೆನಪಾಗಿ ಅತ್ತ ಮುಖ ಮಾಡಿದೆ ...

ಬಾಗಿಲು ಹಾಕಿತ್ತು ... ಕೊಲೂರುವ ಮುತ್ತಜ್ಜಿ ಬಾಗಿಲು ತೆರೆಯ ಬಾರದ ...

ಮುಖ ನೋಡಿದವನಲ್ಲ ಮುತ್ತಜ್ಜಿಯದು ... ಇದ್ದರೆ ಬೆನ್ನು ಬಾಗಿ .. ಕೊಲುರುವ

ಹಾಗಿರ ಬಹುದು .... ಅಂದು ಕೊಂಡೆ ....

ರೇಷ್ಮೆ ಸೀರೆ ... ಅಕ್ಕ ಪಕ್ಕ ಸೇವಕಿಯರು ...

ಇಂತಹ ಬದುಕು ಬದುಕಿದವಳ ?

ಅಥವ ಹತ್ತೆಂಟು ರಾಣಿಯರ ನಡುವೆ ಕಳೆದು ಹೋದವಳ ?

ಕಿಟಕಿಯ ಸಂದಿಯಿಂದ ಕಾಣ ಬಹುದು...

ಇಣುಕಿದೆ ಮರದ ಮಂಚ .ಪಕ್ಕದ ಕುರ್ಚಿ...

ಸಣ್ಣ ಟಿಪಾಯಿ ....ಇದೆಲ್ಲ ಮುತ್ತಜ್ಜಿ ಉಪಯೋಗಿಸಿದ್ದ ?

ಅರಮನೆಯ ಮೂಲೆ ಮೂಲೆ ಓಡಾಡಿರ ಬಹುದು ...

ಸೊಸೆ ಯಾಗಿ ಬಂದಾಗ ಖುಷಿಯಿತ್ತ ... ಕೇಳಬೇಕಿತ್ತು ...

ನನ್ನ ಸಾವಿರಾರು ಪ್ರಶ್ನೆ ಗಳಿಗೆ ಉತ್ತರ ಬೇಕಿತ್ತು ...

ಸಂಜೆಯಾಗುತ್ತ ಬಂದಂತೆ ಅರಮನೆಯ ಕಿಟಕಿಯಿಂದ ಬೆಳಕು ಒಳ ಬರುತ್ತಿತ್ತು ..
ಸುಂದರ ವಾಸ್ತು ಕಲ್ಪನೆ ....

ಇದೆಲ್ಲವನ್ನು ಮರೆಸಿ ಮತ್ತೆ ಮತ್ತೆ ... ದುರಂತ ನೆನಪಾಗಿ


ನಿಧಾನ ಹೊರ ಬಂದೆ ....

ಇನ್ನೆಂದು ಯಾರಿಗೂ ಇಂತಹ ಭಾವ ಬರದಿರಲಿ ...

ಇನ್ನೆಂದು ಬರಲಾರೆ ... ಇಲ್ಲಿಗೆ ....

ಎಲ್ಲರಂತೆ ... ಅರಮನೆಯ ಎದುರು ನಿಂತು ... ಫೋಟೋ ಕ್ಕೆ ಹಲ್ಕಿರಿದು ....

ಹೊರಟೆ .....







Sunday, 17 February 2013

ಎಂದೂ ಮಾಸದ ನೆನಪು....


ಮೊನ್ನೆ ಸಿಕ್ಕ ಮಗುವಿನ  ಬೊಚ್ಚು ನಗು ....

ನಿಮಗೂ ನೆನಪಿರ ಬಹುದು ....  

ಪುಟಗಳಲಿ ಮರೆಯಾಗದ ಎಂದಿಗೂ ಹಸಿರೆನಿಸುವ 

ನೆನಪುಗಳು ಬೆಂದ ಬದುಕಿಗೆ   ತಂಪನೆರೆಯ  ಬಹುದು  .... 

ಯಾವುದೊ ಕತೆಗೆ ಚೌಕಟ್ಟು ಹಾಕುತ್ತ ಕುಳಿತವಳಿಗೆ .... 

 ನೀನು ಹೀಗೆ ಕನಸು ಕಟ್ಟಿರ ಬಹುದಾ  ಅನ್ನಿಸಿತು ... 

ನನ್ನ ದಶಕಗಳ  ಹಳೆಯ ಗೆಳತಿ ನೀನು...

ನೀನು ನನ್ನಿಂದ ಕಾಣೆಯಾಗಿ  ಆರೇಳು ವರುಷ ಗಳೇ ಆಯಿತಲ್ಲವಾ  ... 

ಯಾಕೋ ನಂಬಲಾಗುತ್ತಿಲ್ಲ ... 

ಎಲ್ಲೋ  ನಾನು   ನನ್ನ ಹಳೆಯ ವಿಳಾಸಕ್ಕೆ ಹೋದಾಗ 

.... ಒಮ್ಮೆ ಲೇಟರ್ ಬಾಕ್ಸ್ ನತ್ತ  ಕಣ್ಣಾಡಿಸದೆ  ಬರುವದಿಲ್ಲ .... 

ಇರ ಬಹುದು ನಿನ್ನ ಪತ್ರ ..... 

 ಎನ್ನುವ ನಂಬಿಕೆ ಇನ್ನು ನನ್ನ ಬೆನ್ನಿಗಿದೆ  ಹುಡುಗಿ.... 

ಯಾವತ್ತೂ....   

ನಾನು ನಿನ್ನ ಬಗ್ಗೆ ವಿಚಾರಿಸಿದಾಗ ನಿನ್ನಮ್ಮ  ಹೇಳಿದ ಮಾತು 

ಇನ್ನು  ಗುಂಯಿ ಗುಡುತ್ತಿದೆ .... 

"ನಿನಗೇನಾದರೂ ಹೇಳಿದ್ದಾಳ ? 

ಎಲ್ಲಿಗೆ ಹೋಗುವೆನೆಂದು ?" 

ಅಂದೇ  ಕೊನೆ ಮತ್ತೆ ಮಾತಿಲ್ಲ  ನಮ್ಮಲ್ಲಿ ....

ನನ್ನಲ್ಲೂ  ಪ್ರಶ್ನೆ  ಗಳಿದೆ  ಎಲ್ಲಿದ್ದಿಯ ?  ಹೇಗಿದ್ದೀಯ? 

ಯಾಕೆ ಬಿಟ್ಟು ಹೋದದ್ದು ? 

ಮೊನ್ನೆ ಮೊನ್ನೆಯಂತೆ ಮಾತು ನಗು ಇನ್ನು ಹಸಿರಾಗಿದೆ ......

ಅಕ್ಕ, ಅಮ್ಮ, ಅಣ್ಣ ಎಲ್ಲರ ಫೋನ್  ಅವತ್ತೊಂದು ದಿನ .......  

ಅಸ್ಟೇ,  ಆಮೇಲೆ ಮಾತಿಲ್ಲ ನಿನ್ನ ಸುದ್ದಿಯೂ ಇಲ್ಲ ...

ನನ್ನ ಮದುವೆ ಗೆ  ಎಲ್ಲಿದ್ದರೂ  ಬರುತ್ತೀನಿ ಅಂದವಳು ಬರಬಹುದು  

ಅಂದು ಕೊಂಡದ್ದೆ ಬಂತು ... 

ಮದುವೆಗೆ ಒಂದು ವಾರವಿದೆ ಅನ್ನುವಾಗ  ಫೋನ್ ಮಾಡಿ ....  

 ಹುಡುಕಬೇಡಿ  ಅವಳನ್ನ .... 

"ಆಕೆ ನಕ್ಸಲೇಟ್ ಜೊತೆಗೆ ಹೋಗಿದ್ದಾಳೆ "

ಹೇಗೆ ಹೇಳುವದು ಗೊತ್ತಿಲ್ಲದೇ ಇಷ್ಟು ದಿನ ಕಳೆದೆ ....  

-ನಿನ್ನ ಪ್ರೀತಿಯ ಹುಡುಗ ಹೇಳಿದಾಗ ...

ಅಂತ ಹೇಳಿದಾಗ ಎನುತ್ತರಿಸಲಿ ಗೊತ್ತಾಗಲಿಲ್ಲ .....

ಮತ್ತೆ ಎಂದಿನಂತೆ ಮೌನ ದ ಮೊರೆ ಹೊಕ್ಕೆ  ..

ಅವತ್ತು ಯಾವುದೋ  ಮಾಲ್ ನ ಕೊನೆಯ ಮಹಡಿಯ

  ರೆಸ್ಟೋರೆಂಟ್  ನಲ್ಲಿ ಏನೋ ಮೆದ್ದು ಕೆಳಗಿಳಿಯುವಾಗ  

ಎದುರಾದದ್ದು  ನೀನೆ ...... 

ಮೊನ್ನೆ ಚಿತ್ರ ಸಂತೆ ಯಲ್ಲಿ ಫೈಬರ್ ಚೇರ್ ನಲ್ಲಿ ಪುಟ್ಟ ಮಗುವನ್ನೆತ್ತಿ 

ಕುಳಿತವಳು ನೀನೆ .....  

ಯಾಕೆ ಮಾತಾಡಲಿಲ್ಲ ...

ಚಿತ್ರ ಸಂತೆ ಯಲ್ಲಿ ನೀನು ನಕ್ಕಿದ್ದೆ ..... 

ನನ್ನ ಗೊಂದಲದಲ್ಲಿ ಯಾಕೆ ಮಾತಾಡಲಿಲ್ಲ 

ನೀನೆ ಅಲ್ಲವಾ ಅಂತೆಲ್ಲ ನನ್ನಲ್ಲಿ ಮಾತಾಡಿ ಕೊಂಡು  

ಮತ್ತೆ ನಿನಿದ್ದಲ್ಲಿಗೆ ಬಂದಾಗ ನೀನಿರಲಿಲ್ಲ  ಅಲ್ಲಿ ....

ಮಗುವಿನ  ಬೊಚ್ಚು ನಗು...

ನೆನಪು  ಯಾವತ್ತು ಮರೆಯಲಾಗದು ನನ್ನಲ್ಲಿ ...

ನಿನಗೆ ನನ್ನ ಗುರುತೇ ಸಿಗಲಿಲ್ಲವ ?

ಹೇಗೆ ಸಿಕ್ಕಿತು  ಹೇಳು  ಹೊಟ್ಟೆಗೆ   ಇಲ್ಲದವನಂತೆ  ಇದ್ದಾಗ  ನೋಡಿದ್ದು ...

ಇಗ ಮೂರು ವರೆ  ಕ್ವಿಂಟಾಲ್   ತೂಗುವ ನನ್ನ ನೋಡಿದರೆ .... 

ಯಾರಿಗೆ ತಾನೆ ನಂಬಲಾ ದೀತು ?

ಇನ್ನೇಲ್ಲಾದರೂ   ಎದುರು ಸಿಕ್ಕರೆ  ನಗುವದ ಮರೆಯಬೇಡ ..........











Monday, 10 December 2012

ಮಾತು ಮೌನ ಮತ್ತೂ ನಿದ್ದೆ

ಭಾವನೆಯೆಲ್ಲ  ಮಾತಾಗಿ ...

ನಿನ್ನೆದುರು  ಬಿಚ್ಚಿಡ ಬೇಕಾದ ಹೊತ್ತು ...

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಬದುಕಿನ ಬ್ಲಾಕ್ ಅಂಡ್  ವೈಟ್  ಚಿತ್ರಕ್ಕೆ.....

ಬಣ್ಣ ಹಾಕಿ ಇವೆಲ್ಲ ನಮ್ಮದೇ ಎನ್ನುವ  ಕ್ಷಣ...... 

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಭೂತವನ್ನೆಲ್ಲಾ  ತಿಕ್ಕಿ ತೊಳೆದು ....

ಭಾವಿ ಬದುಕಿಗೆ ಭಾಷ್ಯ ಬರೆಯುವ  ಹೊತ್ತು ...

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ನಡೆದು ಹೋದ ಧಾವಂತದ ಅಪರಾದ ....

ನಮ್ಮದೇ  ಕೂಗಿ ಹೇಳಬೇಕಾದ ಹೊತ್ತು ....

ಮಾತು  ಮೌನದ ಮಡಿಲಲ್ಲಿ ....
                              ಬೆಚ್ಚಗೆ  ಮಲಗಿತ್ತು ......

ನಿನ್ನ ದನಿಯು ಕಿವಿಗೆ ಬಡಿದು ಎದೆಗೆ ....

ಏರಲಾರದೆ  ಅಲ್ಲೇ ಸುತ್ತಿ ಸುತ್ತಿ ನಿಂತ ಹೊತ್ತು ..

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಎದೆಯ ಮಾತು ಮರೆತು ಹೋಗಿ  ಹೇಳಲೇನು ..

ಉಳಿದಿದೆ  ಎಲ್ಲ ನಿನಗೆ ತಿಳಿದಿದೆ  ಎಂದು .....

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

Tuesday, 30 October 2012

ಮೊದಲ ಸಲಾ.............


ಅಬ್ಬಾ ಏನೂ  ಕುತೂಹಲ ......... ಇವತ್ತು ಏನೂ ಹೊಸದು ...

ಕಾಯುತ್ತಿದ್ದೆ ...  ಮನದೊಳಗೆ  ಮಂಡಿಗೆ ಮೆದ್ದು ........

ಯಾವಾಗ  ಕ್ಲಾಸ್ ಬಿಡುತ್ತೆ / ಮನೆ ಯಾವಾಗ ತಲುಪುತ್ತೇನೆ ......

ಅಂತೆಲ್ಲ ಯೋಚಿಸಿ .... ಹೇಳಿದ ಪಾಠ  ತಲೆಗೇ ಹೋಗದೆ  .... 

ಒಟ್ಟಿನಲ್ಲಿ  ಕೂತಿದ್ದೆ ..... ಕ್ಲಾಸ್ ರೂಂ ನಲ್ಲಿ ......

ಅಂತು ಬೆಲ್ ಆಯಿತು ....

ಕತೆ ಹೇಳುತ್ತಾ  ಹೆಜ್ಜೆ ಹಾಕುವ ಹಿಂದಿನ ಮನೆ  ಲಕ್ಷ್ಮಿ ಯನ್ನ ಬಿಟ್ಟು ಹೋಗಲು ...

ಮಾಡಿದ  ಪ್ಲಾನ್ ಎಲ್ಲ ನೀರಿನಲ್ಲಿ  ಹೋಮ ಮಾಡಿದಂತಾಗಿ .... ಅವಳ 

ಯಾವ ಮಾತಿಗೂ ಲಕ್ಷ್ಯ  ಕೊಡದೆ ....

ಸುಮ್ಮನೆ  ಬಿರುಸಾಗಿ  ಹೆಜ್ಜೆ ಇಡುತ್ತಿದ್ದ ನನ್ನ ನೋಡಿ ...." ಏನೇ ಇವತ್ತು 

ಓಡುತ್ತಿದ್ದಿಯ ? ಮನೆಗೆ  ಯಾರಾದರು ಬರುತ್ತಾರಾ ? " 

ಅಂತ ಕೇಳಿದ್ದಕ್ಕೆ ನಾಲಿಗೆಯ ತುದಿಯ ವರೆಗೆ ಬಂದ ಮಾತನ್ನ ತಡೆ ಹಿಡಿದು 

.... ಅವಳು ಪಾಲಿಗೆ ಬಂದರೆ ಅಂತ ಭಯವಾಗಿ ...  

"ಇಲ್ಲ  ಅಮ್ಮ ಬೇಗ ಬಾ ತೋಟಕ್ಕೆ  ಹೋಗಿ ಬರೋಣ  ಅಂತ ಹೇಳಿದ್ದಾರೆ "....
 ಅಂತ ಬೊಗಳೆ ಬಿಟ್ಟೆ   !
"ನನ್ನ ಅಮ್ಮ ಪೇಟೆಗೆ  ಹೋಗಿದ್ದಾರೆ .... ಬರುವ ವರೆಗೆ..... 
ನಿಮ್ಮ ಮನೆಲಿರು ಅಂತ ಹೇಳಿದ್ರು  ನಿನ್ನ  ಅಮ್ಮನಿಗೂ  ಹೇಳಿ ಹೋಗ್ತೀನಿ  

ಅಂದಿದ್ದಾರೆ..... 

ಹಾಗಿದ್ದರೆ  ನಾನು ನಿಮ್ಮ ಜೊತೆ  ತೋಟಕ್ಕೆ  ಬರಬಹುದು"  ಅಂದಾಗ   

ಬೇಡ ಅನ್ನ ಲಾಗದೆ ... 

ಬಾಡಿದ  ಮುಖ ಹೊತ್ತು  ದೇವರಿಗೆ  ಹರಕೆ  ಹಾಕಿಕೊಳ್ಳ  ತೊಡಗಿದೆ ..... 

ನಿನ್ನೆ ಯಿಂದ ಇವತ್ತಿಗೆ  ಅಂತ ಕಾದೆ ದೇವರೇ  ಅಮ್ಮ ಇವತ್ತು ಮಾಡದಿರಲಿ ....

ನಾಳೆಯ ವರೆಗೆ  ಕಾದೆನು .... ..... 
ಪ್ಲೀಸ್  ದೇವರೇ  ನಾಳೆ  ೨೧  ಗರಿಕೆ  ಹಾಕುತ್ತೀನಿ ..

ಅಂತೆಲ್ಲ  ಲಂಚ  ದ ಆಮಿಷ ವನ್ನ ದೇವರಿಗೆ ಒಡ್ದ ತೊಡಗಿದೆ.......

ಆತ ಯಾವುದೊ  ಎಮರ್ಜೆನ್ಸಿ  ಕೆಲಸಕ್ಕೆ ಲಂಚ ತಗೊತಿದ್ದನೋ  ಗೊತ್ತಿಲ್ಲ,

ಅಥವಾ  ನಾನು ತೋರಿಸಿದ ಆಮಿಷ ಕಡಿಮೆ ಇತ್ತ ?

ನಿದ್ದೆ  ಮಾಡಿ ಬಿಟ್ಟಿರ ಬೇಕು ಬೆಳಗ್ಗಿ ನಿಂದ ನಡೆದ  ಪೂಜೆಗೆ ಹೊಡೆದ  

ಜಾಗಟೆ  ಶಬ್ದಕ್ಕೆ....

ಊದಿನ ಕಡ್ಡಿಯ ಮತ್ತೆ  ಧೂಪದ ಮಿಶ್ರ  ಘಮಕ್ಕೆ  ತಲೆ ನೋವು ಬಂದಿರ ಬೇಕು .....    

ಗೊತ್ತಿಲ್ಲ .....

ಅಂತು ನನ್ನ ಮಾತು ಕೇಳಲಿಲ್ಲ ...

ಮನೆಯ ಬಾಗಿಲಿಗೆ ಬರುತ್ತಿದ್ದಂತೆ ತರಕಾರಿಯನ್ನ ಫ್ರೈ ಮಡಿದ ಘಮ ಕ್ಕೆ ... 

ಅಂತು ಇನ್ನು ಬೇಡಿಕೊಂಡು ಪ್ರಯೋಜನವಿಲ್ಲ.....

ಅಮ್ಮ ನಿಗಾದರು ಬುದ್ದಿ ಬೇಡವ ? ಇವತ್ತೇ ಯಾಕೆ ಮಾಡಬೇಕಿತ್ತು..  

ಅದೂ ಹಿಂದಿನ  ಮನೆಯ ಕಮಲೂಚಿಕ್ಕಿ  ಮಗಳು ಸ್ಕೂಲ್  ನಿಂದ ಇಲ್ಲೇ 

ಬಂದು ಇರುತ್ತಾಳೆ..

ಅಂದಾಗ ಬುದ್ದಿ ಬೇಡವ ಅಂದು ಕೊಂಡೆ ....

ಅಮ್ಮ ವಿಚಾರ ಮಾಡಿರ ಬೇಕು ಅವಾಗವಾಗ  ಇಬ್ಬರು ಸೇರಿ ಸ್ವೀಟ್ 

ಮಾಡಲು ಸಹಾಯ ಮಾಡಿ ಕೊಳ್ಳುತ್ತಾರೆ...

ಹೊಸದೇನೋ ತಿಂಡಿ ಮಾಡಿದರೂ ಅತ್ತ ಇತ್ತ ಓಡಾಡುತ್ತೆ.... 

ಡಿಸ್ಕೌಂಟ್ ಗೂ ಒಟ್ಟಿಗೆ  ಹೋಗಿ ಒಂದೇ ತರಹದ ಸೀರೆ ತರುತ್ತಾರೆ ....

ಇವತ್ತು ಅಡುಗೆ ಮಾಡಕ್ಕೆ ಯಾಕೋ ಮನಸ್ಸಿಲ್ಲ ಕಮಲೂ  ಅಂತ ಅಮ್ಮ ಹೇಳಿದರೆ ..

ಅನ್ನ ಕ್ಕೆ ಇಡು ಸಾಕು ಹುಳಿ, (ಸಾಂಬಾರು ) ಪಲ್ಯ , 

ಅಪ್ಪೆಹುಳಿ  ನಾನು ಮಾಡ್ತಿ ಸಾಕು 

ಮತ್ತೆ ಮಾಡಡ.... ಅನ್ನುವ ಭಾಂದವ್ಯ ...  

ಮೊನ್ನೆ ಕಮಲೂಚಿಕ್ಕಿ  ಮಾಡಿದ ಹಲಸಿನ ಹಣ್ಣಿನ ಕಡಬು ಅಂತು ನೆನಪಾದರೆ ..... ಆಹಾ ..
"ನೀನು ಹೇಗೆ ಮಾಡಿದ್ದೂ ಅಂತ ಕೇಳಿ ಕಲಿತುಕೋ " ಅಪ್ಪ ಆದೇಶ  

ಹೊರಡಿಸಿದ ಮೇಲಂತೂ ...

ಅಮ್ಮ ನಿಗೆ ಕಮಲೂಚಿಕ್ಕಿ  ಮೇಲೆ ಪ್ರೀತಿ ....

ತಯಾರಿ ನಡೆದಿತ್ತು ಪಾಕೆಟ್ ತೆಗೆದಿಟ್ಟು  ನಮ್ಮ ಕಾಯುತ್ತಿದ್ದರು ... 


ಸರಿ ನೀವಿಬ್ಬರು ಇರುತ್ತೀರಿ ಅಂತ ಎರಡು ಮಾಡುತ್ತೀನಿ ನನಗೆ ಬೇಡ 

ಎನ್ನುತ್ತಾ ...

ಪಾಕೆಟ್ ಮೇಲಿನ ವಿವರ ಓದುತ್ತ ..

ಬೆಳ್ಳಿ ಬಣ್ಣದ  ..... ಪ್ಯಾಕ್  ಕತ್ತರಿಸಿ ಮಸಾಲೆ ಹಾಕಿ ...

ಪಕ್ಕಕ್ಕಿಟ್ಟರು .... ಹಳದಿ ಬಣ್ಣದ ಪ್ಯಾಕ್  ಮೇಲೆ ಅವರು ಬರೆದದ್ದನ್ನ  

ಓದುತ್ತಿದ್ದರು ...

ನಮ್ಮ ಹತ್ತಿರ ಸಣ್ಣ ಪ್ಯಾಕ್  ಸಿಕ್ಕಿದ್ದೇ .... ಸುವಾಸನೆ ಯನ್ನ ಆಘ್ರಾಣಿಸಿ... 

ಕತ್ತರಿಸಿದ 

ಬಾಗದಲ್ಲಿ ನಿಧಾನ ನಾಲಿಗೆ  ತೂರಿ   ವಾವ್....

ನನ್ನ ಲಕ್ಷ್ಮಿ ಯ  ಮೊದಲ  ಮ್ಯಾಗಿ ..... 




Saturday, 21 July 2012

ಐದೂಕಾಲರ ಬಸ್ಸು



ಮೊನ್ನೆ ನನ್ನ ಫ್ರೆಂಡ್ ಮನೆಗೆ ಬಂದಿದ್ದಳು ...
ಊಟ ಮಾಡಿ ಕತೆ ಹೇಳಿ .... ಬಾಲ್ಯ-ಟೀನ್ ನೆನಪಿಸುತ್ತಾ 
ಟೀ ಕುಡಿಯುವಾಗ  "ಬಸ್  ಹೋಗುತ್ತೇನೆ ನಿಮ್ಮ ಊರಿಗೆ ಇಗ?"
ಕೇಳಿದ್ದಕ್ಕೆ ಏನು ಉತ್ತರಿಸ ಬೇಕೆಂದೇ ಗೊತ್ತಾಗದೆ .... 
ಪಿಳಿಪಿಳಿ  ಕಣ್ಣು ಬಿಟ್ಟು ನಮ್ಮನ್ನೇ ನೋಡುತ್ತಿದ್ದ   ಅವಳ ಮಗಳ ಮಾತಿಗೆಳೆದೆ .......
ಮನದಲ್ಲಿ ಬಸ್ ನದೇ ವಿಚಾರ ಒಂದೂವರೆ ವರ್ಷದಿಂದ ರಸ್ತೆ  ರಿಪೇರಿ ಕೆಲಸಕ್ಕೆ ..
ಅಂತ ಬಂದ್ ಆದ ಬಸ್ ಮತ್ತೆ ಬರಲೇ ಇಲ್ಲ........
ಅದರೊಂದಿಗಿನ ನೆನಪುಗಳು .... ಕಾಡುತ್ತಿವೆ ...
ಮತ್ತೆ ಅದೇ ಬಸ್ ನಲ್ಲಿ ಹೋಗಬೇಕು .... 
ಪರಿಚಯದ ಮುಖಗಳು? ಸಿಗಬಹುದಾ?
ಯಾಕೋ ತುಂಬಾನೇ ಮಿಸ್ ಮಾಡುತ್ತಿದ್ದೀನಿ ...
ಅವತ್ತು ಕಾಲೇಜು ದಿನಗಳಲ್ಲಿ ಪ್ರತಿದಿನ  ಸಂಜೆ ಮನೆ ಸೇರುವ 
ಏಕಮೇವ   ಮಾರ್ಘ ಅಂದರೆ (ಬಸ್ ನಂ1094), ಐದೂಕಾಲರ ಬಸ್ಸೂ.......
ಸೋಮವಾರ ದಿಂದ ಶನಿವಾರದವರೆಗೆ ತಪ್ಪದೆ ಬರುತ್ತಿತ್ತು .....(!)
ಸ್ಕೂಲ್ ಮತ್ತೆ ಕಾಲೇಜ್ ನವರಿಗಾಗಿಯೇ ಬರುತ್ತೇನೋ .. 
ಎನ್ನುವ ಮಟ್ಟಿಗೆ ನಮ್ಮಿಂದಲೇ ತುಂಬಿ ಹೋಗುತ್ತಿತ್ತು .... 
ಮೊಬೈಲ್ ಫೋನ್ ಇಲ್ಲದ ದಿನಗಳು, ಬಸ್ನಲ್ಲೇ ಸುದ್ದಿ ಸಂಚಾರ , 
ಎಲ್ಲ ಕಿಟಕಿ ಸೀಟುಗಳಿಗೆ ಕಾಲೇಜ್  ಗುಟ್ಟುಗಳು ಗೊತ್ತಾಗುತ್ತಿತ್ತು........
"ಕೊನೆಯ ಸ್ಟಾಪ್ ಹುಡುಗಿ ಬಂದಳ... ಹಾಗಿದ್ದರೆ ಹೊರಡೋಣ ... ಅನ್ನುವ ಚಾಲಕ- ನಿರ್ವಾಹಕರು
ಎಲ್ಲರು ಪರಿಚಿತರು.... ಯಾಕಂದರೆ ನಮ್ಮದು ಪುಟ್ಟ ಹಳ್ಳಿ ಬರುವದು ಎರಡೇ ಬಸ್ ..... ಬೆಳಿಗ್ಗೆ ೮.೪೦ ಕ್ಕೆ 
ಸಂಜೆ ಐದೂಕಾಲ ಕ್ಕೆ ........
ಅವತ್ತೊಂದು ಶನಿವಾರ, ಕ್ಲಾಸ್ ಮುಗಿಸಿ ಬಸ್ ಸ್ಟ್ಯಾಂಡ್ ಗೆ ೪.೪೫ ಕ್ಕೆ ಬಂದು ಕುಳಿತಿದ್ದೆವು.
ಸ್ನೇಹಿತರೆಲ್ಲ ಹಾಸ್ಟೆಲ್ -ರೂಮ್ ಮಾಡಿಕೊಂಡು ಉಳಿದು ಕೊಂಡವರು,ಮಾತಾಡುತ್ತ ನಿಂತಿದ್ವಿ ,
ಐದೂಕಾಲರ ಬಸ್ ೬.೩೦ ಆದರು ಪತ್ತೆಯಿಲ್ಲ ಒಬ್ಬೊಬ್ಬರ ಬಸ್ ಬಂದಂತೆ ಹೊರಡುತ್ತಿದ್ದರು .....
ಹಸಿವು ಜಾಸ್ತಿಯಾಗುತ್ತಿತ್ತು... ಬೆಳಿಗ್ಗೆ ತಿಂದ ದೋಸೆ .... ತನ್ನ ಡ್ಯೂಟಿ ಮುಗಿಸಿತ್ತು ....
ಕಂಟ್ರೋಲರ್ ಕೇಳಿದ್ದಕ್ಕೆ "ಈಗ ಬರುತ್ತಮ್ಮ ಸ್ವಲ್ಪ ತಡ ".......
ಗಂಟೆ  ೭ ದಾಟುತ್ತಿತ್ತು...........
ಜೊತೆಗಿದ್ದವರೆಲ್ಲ  ಖಾಲಿಯಾಗುತ್ತಿದ್ದರು ........
ನಮಗೋ  ಅದೇ ಬಸ್ ಬರಬೇಕು ........
ಹೊರಗೆ ಆರದ   "ಆರಿದ್ರೆ" (ನಕ್ಷತ್ರ)  ಮಳೆ....
ಬೇರೆ ಬಸ್ ಅಂದರೆ ೪-೫ ಕಿ ಮಿ  ನಡೆದು ಹೋಗಬೇಕು ......
ನಾವು ಮೂವರು ಅಲ್ಲಿಯ ಕಲ್ಲು ಬೆಂಚಿನ ಮೇಲೆ ...
' ಗಾಂಧೀಜಿ ಯ ಕೋತಿಗಳಂತೆ '....... ಕುಳಿತಿದ್ದೆವು ಜನರೆಲ್ಲಾ .... 
ಖಾಲಿ ಯಾಗುತ್ತಿದ್ದರು ..........
ಬ್ಯಾಗ್ ನಲ್ಲಿಯ ಒಂದು ರೂಪಾಯಿಯ ಕಾಇನ್ ನಿಂದ ಮನೆಗೆ ಫೋನ್ ಮಾಡಲು.. ಪ್ರಯತ್ನಿಸಿದಾಗೆಲ್ಲ...
ಅಮ್ಮ ಹಲೋ ಎನ್ನುವದು ನನಗೆ ಕೇಳುತ್ತಿತ್ತು .... 
ನಾನು ಮಾತಾಡಿದ್ದು ಅವರಿಗೆ ಕೇಳುತ್ತಿರಲಿಲ್ಲ ......
ವಾಚು ಮಾತ್ರ ಸಮಯವನ್ನ  ಮುಂದೊಡಿಸುತ್ತಲೇ  ಇತ್ತು....

ಒಂದು ಕಡೆ ಭಯ , ಊರಿಗೆ ಹೋಗುವದು ಹೇಗೆ ?
ಇಲ್ಲಿ ಫ್ರೆಂಡ್ಸ್ ಎಲ್ಲ ವೀಕ್ಎಂಡ್  ಊರಿಗೆ ಹೋಗಿದ್ದಾರೆ ...........!
ಆಟೋ ದವರು ಬರಲ್ಲ ನಮ್ಮೂರಿಗೆ ಅದೂ....... ಇ ಹೊತ್ತಿನಲ್ಲಿ .......
ಅಳುವದಸ್ಟೇ ಬಾಕಿ .....

ಅದೆಲ್ಲಿಂದಲೋ ಪ್ರತ್ಯಕ್ಷ ನಾದ.... ಅವತ್ತಿನ ಪಾಳಿಯ ಡ್ರೈವರ್ .....
ಹೋಗುತ್ತಿದ್ದ ಜೀವ  ಬಂದಂತಾದರೂ..........
ಮುಂದಿನ ಟ್ರಿಪ್ ಸಮಯವೂ ಮುಗಿಯುತ್ತಿದೆ ........
 ಹಾಳಾದ ಬಸ್ ನ್ನ ಸರಿ ಮಾಡಿಸಿ ಕೊಂಡು ಬರಲು ತಡವಾದದ್ದಕ್ಕೆ ,
ಕಂಟ್ರೋಲರ್ ಮುಂದಿನ "೧೦೯೪ ಬಸ್ ನಂ................"  ಟ್ರಿಪ್ ಅಂತ ಒದರಿಯೇ ಬಿಟ್ಟ ................
ಕಣ್ಣ ಚಿಂನಲ್ಲಿದ್ದ ನೀರು....ತುಂಬಿದಂತೆಯೇ 
ಡ್ರೈವರ್ ಗೆ ಕೇಳಿದಾಗ ಬಸ್ ಹತ್ತಿಕೊಳ್ಳಿ........ನಾನು ನೋಡಿ ಕೊಳ್ಳುತ್ತಿನಿ ....
ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿ ಸಿಕ್ಕಂತಾಯಿತು .....
ಕಾಲಿಡಕ್ಕೆ  ಜಾಗ  ಅಂತು ಸಿಕ್ಕಿತು ....
ಜೋರು ಜೋರು ಮಾತು ನಡಿತಿತ್ತು .........ಮಳೆಯ ಅಬ್ಬರ ದಲ್ಲಿ  ....ಕೇಳಲಿಲ್ಲ 
ಕೊನೆಗೂ ನಮ್ಮನ್ನ ನಮ್ಮೂರಿಗೆ ಬಿಟ್ಟು ಮುಂದಿನ ಟ್ರಿಪ್ ಹೋಗಿದ್ದರು .............

ಇಂತಹ ಹಲವಾರು ಮರೆಯಲಾಗದ ಅನುಭವ ವನ್ನ ಐದೂಕಾಲರ ಬಸ್ ನೀಡಿದೆ ....
ಅಂತಹ ಹೊಸದಲ್ಲದ ,ದೂಳಿ ನಿಂದ ಯಾವತ್ತು ಮುಚ್ಚಿರುತ್ತಿದ್ದ ,
ನನ್ನ ಸ್ನೇಹಿತರ ಬಾಯಿಗೆ ಆಗೀಗ ಆಹಾರ ವಾದ,
 " ಇವತ್ತು ಬರೋವಾಗ ಆರೂ ವೀಲ್ ಇತ್ತು ತಾನೆ ?" ಕಿಚಾಯಿಸಿದಾಗ
ಮನದ ಮೂಲೆಯಲ್ಲಿ  ನೋವಾಗ್ತಿತ್ತು.......
ನನ್ನ ಕಾಲೇಜು ಬದುಕಿನ  ಬಾಗವೇ ಆಗಿದ್ದ ೧೦೯೪ ಬಸ್ ನ್ನ ಇವತ್ತಿಗೂ ಮಿಸ್ ಮಾಡ್ತೀನಿ ....
ಬಸ್-ಸ್ಟಾಪ್  ನಲ್ಲಿ ನಿಂತಾಗೆಲ್ಲ  .....  ೧೦೯೪  ಬರುತ್ತಾ ಕಾಯ್ತೀನಿ .........