ಭಾವನೆಯೆಲ್ಲ ಮಾತಾಗಿ ...
ನಿನ್ನೆದುರು ಬಿಚ್ಚಿಡ ಬೇಕಾದ ಹೊತ್ತು ...
ಮಾತು ಮೌನದ ಮಡಿಲಲ್ಲಿ ....
ಬೆಚ್ಚಗೆ ಮಲಗಿತ್ತು ......
ಬದುಕಿನ ಬ್ಲಾಕ್ ಅಂಡ್ ವೈಟ್ ಚಿತ್ರಕ್ಕೆ.....
ಬಣ್ಣ ಹಾಕಿ ಇವೆಲ್ಲ ನಮ್ಮದೇ ಎನ್ನುವ ಕ್ಷಣ......
ಮಾತು ಮೌನದ ಮಡಿಲಲ್ಲಿ ....
ಬೆಚ್ಚಗೆ ಮಲಗಿತ್ತು ......
ಭೂತವನ್ನೆಲ್ಲಾ ತಿಕ್ಕಿ ತೊಳೆದು ....
ಭಾವಿ ಬದುಕಿಗೆ ಭಾಷ್ಯ ಬರೆಯುವ ಹೊತ್ತು ...
ಮಾತು ಮೌನದ ಮಡಿಲಲ್ಲಿ ....
ಬೆಚ್ಚಗೆ ಮಲಗಿತ್ತು ......
ನಡೆದು ಹೋದ ಧಾವಂತದ ಅಪರಾದ ....
ನಮ್ಮದೇ ಕೂಗಿ ಹೇಳಬೇಕಾದ ಹೊತ್ತು ....
ಮಾತು ಮೌನದ ಮಡಿಲಲ್ಲಿ ....
ಬೆಚ್ಚಗೆ ಮಲಗಿತ್ತು ......
ನಿನ್ನ ದನಿಯು ಕಿವಿಗೆ ಬಡಿದು ಎದೆಗೆ ....
ಏರಲಾರದೆ ಅಲ್ಲೇ ಸುತ್ತಿ ಸುತ್ತಿ ನಿಂತ ಹೊತ್ತು ..
ಮಾತು ಮೌನದ ಮಡಿಲಲ್ಲಿ ....
ಬೆಚ್ಚಗೆ ಮಲಗಿತ್ತು ......
ಎದೆಯ ಮಾತು ಮರೆತು ಹೋಗಿ ಹೇಳಲೇನು ..
ಉಳಿದಿದೆ ಎಲ್ಲ ನಿನಗೆ ತಿಳಿದಿದೆ ಎಂದು .....
ಮಾತು ಮೌನದ ಮಡಿಲಲ್ಲಿ ....
ಬೆಚ್ಚಗೆ ಮಲಗಿತ್ತು ......