Tuesday 5 January 2016

ನಿರೀಕ್ಷೆ



ನಾವು ನಂಬಿಕೆ ಉಳಿಸಿ ಕೊಳ್ಳದವರು .....


ಎಲ್ಲ ನಾಳೆಗಾಗಿ ಬದುಕಿ ಬಿಟ್ಟವರು ....

ನಂಗೆ ಗೊತ್ತಾಗ್ತಿಲ್ಲ ಯಾಕೆ ಎಲ್ಲವನ್ನ ನಾಳೆಗಾಗಿ  ಕೂಡಿ ಇಡುತ್ತಿದ್ದೇವೆ .... 

ಗೊತ್ತು ನಮಗೆ ನಾಳೆ ನಮ್ಮ ಮಕ್ಕಳು ನಮ್ಮ ನೋಡಿ ಕೊಳ್ಳುವರಲ್ಲ ..... 

ನಿರಿಕ್ಷೆಯನ್ನು ಮಾಡುವಷ್ಟು ಪೆದ್ದ ನಾನಲ್ಲ .... 

ನಿನ್ನೆಯ ವರೆಗೆ ಮಕ್ಕಳಿಗಾಗಿ ಮಾಡಿದೆ .... 

ಬೈ ಹೇಳುವ ಮುನ್ನ ಗಂಟಲುಬ್ಬಿದ್ದು ನಿಜ ..... 

ಎಲ್ಲೋ ಸಣ್ಣ ಆಸೆ ನನ್ನದು ಇರ ಬಹುದಾ ಅನುಮಾನ ಕಾಡಿತ್ತು ... ಮನೆ ಮುಟ್ಟುವ ವರೆಗೆ ... 

ನನ್ನ ನಾಳೆಗಳಿಗೆ ಆಸರೆ ಆಗಬಹುದ ? ಕೋಲೂರಿ ನಡೆವ ಮುನ್ನ .... 

ನನ್ನ ಜೊತೆಗೆ ಇರು ಬಾ ಅಂತ ಕರೆದು ಕೊಂಡು  ಹೋಗಕ್ಕೆ ಬರ್ತಾರೆ ..... 

ವಯಸ್ಸಾದ ಮೇಲೆ  ಕನಸಿನ ಜೊತೆಗೆ ಬದುಕೋದು ..

ಯಾಕೆ  ಮನಸ್ಸು ಒಪ್ಪುತ್ತಿಲ್ಲ ಪಾಶ್ಚಾತ್ಯ  ಸಂಸ್ಕ್ರತಿ ನಮ್ಮನೆಗೂ  ಕಾಲಿಟ್ಟಿದೆ  ಅನ್ನುವದನ್ನ ,

ಮಗ, ಮಗಳು, ಸೊಸೆ, ಅಳಿಯ  ಹಬ್ಬಕ್ಕೆ ಅಸ್ಟೆ  ಅತಿಥಿಗಳು  ಆಗಿದ್ದು

ಇಂದಲ್ಲ, ನಾನು ಅದನ್ನೇ ಅಲ್ಲವಾ  ಮಾಡಿದ್ದೂ ......

ಮಕ್ಕಳು ಶಾಲೆ ...... ಕಾರಣ  ಹಲವು ......

ಆದರೂ  ಮತ್ತದೇ  ನಿರೀಕ್ಷೆ.....


ಮನಸ್ಸು ಎಸ್ಟೇ  ಸಮಾಧಾನ  ಮಾಡಿಕೊಳ್ಳಲು  ಪ್ರಯತ್ನಿಸಿದರೂ  ಮತ್ತಲ್ಲೇ

ಬಂದು ನಿಲ್ಲುತ್ತೇನೆ  ಇಂದಲ್ಲ  ನಾಳೆ ಕರೆದೇ  ಕರೆಯುತ್ತಾರೆ .....

ನನ್ನವರು ಹಾಗಿಲ್ಲ .......  ನಿಜ ಹಾಗಿಲ್ಲ ....

ಸಂಸ್ಕಾರ  ಹಾಗಿಲ್ಲ .......

ಪರಿಸ್ತಿತಿ ?

ಎಲ್ಲರೂ  ಪರಿಸ್ತಿತಿಯ  ಗೊಂಬೆಗಳು ...

ನನಗೆ ಅಲ್ಲಿ ಹೊಂದಿಕೆ ಆಗಲ್ಲ  ಅವರೂ  ೫-೬ ಅಂಕೆಯ  ಸಂಬಳ  ಬಿಟ್ಟು ಬರಲ್ಲ ......

"ಸರ್ , ಗಾಡಿ  ಒಳಗಿಡಲ " ಮನೆ ಬಂದದ್ದು  ಗೊತ್ತಾಯಿತು .....

"ಹಮ್ " ........

ಮನೆ ಒಳಗೆ ಬರುತ್ತಿದ್ದಂತೆ ಖಾಲಿ ಮನೆ ..... ಮನಸ್ಸು .....

ನಿನ್ನೆ ಏನು ಇವತ್ತು ಬೆಳಗಿನ ವರೆಗೂ ..... ತುಂಬಿದ್ದ ಮನೆ ..... ಖಾಲಿ ಖಾಲಿ .....

ಮಗಳ ಮದುವೆ , ತಂಗಿಯ ಮದುವೆಗೆ ಬಂದಿದ್ದ ಅಣ್ಣಂದಿರು ......  ಸೊಸೆಯಂದಿರು ......

ಎಲ್ಲರನ್ನ ಏರ್ ಪೋರ್ಟ್  ಗೆ ಬಿಟ್ಟು  ಬರುವಾಗ .....

ಗಂಟಲುಬ್ಬಿದ್ದು ..........

ಅಪ್ಪನಿಗೆ  ಹುಷಾರಿಲ್ಲ ಅಡ್ಮಿಟ್ ಆಗಿದ್ದಾರೆ.....

ಟೆಲಿಗ್ರಾಂ  ಸಿಕ್ಕಿತ್ತು ....  ನಾನಿದ್ದದ್ದು  ಅಂತಾ ದೂರದ ಊರೇನಲ್ಲ ......

ವಾರ  ಕಳೆದು ಹೋದಾಗ ಅಪ್ಪ ಇರಲಿಲ್ಲ ...... ಅಮ್ಮ ನಲ್ಲಿ  ಮಾತುಗಳು ಕೂಡ ,

"ಜೊತೆಗೆ ಬಂದು ಬಿಡು ಅಮ್ಮಾ " ಅನ್ನಲಿಲ್ಲ ......

"ಅಲ್ಲಿ  ನಿನಗೆ ಹೊಂದಿಕೆ ಆಗಲ್ಲ ಇಲ್ಲೇ  ಇರು ಆಗಾಗ ಬರುತ್ತೇವೆ ....... "

ಆ  ಮಾತಿಗೆ ಅರ್ಥವೇ ಇರಲಿಲ್ಲ ಅವತ್ತಿಗೂ .... ಇವತ್ತಿಗೂ ....

ನಾನೂ  ಹೋಗಲಿಲ್ಲ ಆಗಾಗ ....... 

ಕಾರಣ  ಗಳೇ ಸಿಗುತ್ತಿತ್ತು ಹೋಗದಿರಲು ....... 

ನನ್ನವಳು ಬೇಡ ಅಂದವಳಲ್ಲ , ಹೋಗು  ಅಂದವಳು ಅಲ್ಲ ..... 

ನಾವು  ನಮ್ಮಸ್ಟಕ್ಕೆ ಬದುಕಿದವರು ..... 

ನಿರ್ಲಿಪ್ತೆ ..... ಮಕ್ಕಳು  ದೂರದೂರಿನ  ಓದಿಗೆ .... ಹೊರಟಾಗಲೂ 

ಕಣ್ಣು ತುಂಬಿ ಕೊಂಡವಳಲ್ಲ ..... 

ಮೌನದಲ್ಲೇ ಮುಚ್ಚಿಟ್ಟು ಕೊಂಡು .....  ಉಳಿದವಳು .... 

" ಎರಡು ಹನಿ ಕಣ್ಣಿರು ಹಾಕಿ ಸಮಾಧಾನ ಮಾಡಿಕೊಳ್ಳೆ " ಅಂದಿದ್ದಕ್ಕೆ 

"ಯಾಕಂತ ಅಳಲಿ ....  ಒಳ್ಳೇದಕ್ಕೆ  ಹೋಗ್ತಿರೋದಲ್ಲವ ..... 

ಅವರವರ ಬದುಕು ಅವರು ಕಟ್ಟಿ ಕೊಂಡರೆ .... ಸಂತೋಷ ಪಡಬೇಕು "


ಅಂದವಳು ..... 

ಅವಳಿದ್ದಾಗ  ಒಂದು  ಜೊತೆ .... ದಿನಪೂರ್ತಿ  ಮಾತು .....  ಗುನುಗುವ ಹಾಡು .... 

ಜೊತೆಗೆ ಶಾಪಿಂಗ್ .....  

ದೇವಸ್ತಾನಕ್ಕೆ  ಹೋದ ನೆನಪಿಲ್ಲ .... 

ಬರೋಬ್ಬರಿ  ೩೨ ವಸಂತ ಜೊತೆಗಿದ್ದದ್ದು ..... .. 

ಮನೆಯೆಲ್ಲಾ  ಖಾಲಿ .....  ಅವಳಿಲ್ಲ  ಅವತ್ತು ...  ಇವತ್ತು  ಮಕ್ಕಳು ಹೊರಟರು ... ಮರಳಿ 

ಗೂಡಿಗೆ ......... 

ನಾನೂ  ನಿರ್ಲಿಪ್ತ ನಾಗಬೇಕು ... 

ಹೆಜ್ಜೆ  .....  ನಿನ್ನತ್ತ  ಎಳೆತರಲು  ಶುರುವಾಯಿತು .......  

ನೀನು ಮೊದಲಿನ ತರಾನೆ  ನಗುತ್ತ ನಿಂತಿದ್ದೆ ....  

ಅದೇ ಎತ್ತರ ..... ನಸುಗೆಂಪಿನ  ಸೀರೆಯಲ್ಲಿ  ನಗುತ್ತ ... 

ಚೌಕಟ್ಟಿನೊಳಗೆ ......