Sunday 18 August 2013

ಅಪ್ಪೆಮರನ ಕೊಡ್ಳು ಹಾಗೂ ಉದ್ದ ಲಂಗ


 ಖಾಲಿ  ಕುಳಿತಾಗ  ಬಾಲ್ಯದತ್ತ ಓಡುವ  ಮನಸು ,

ಎಲ್ಲೋ ಕಳೆದು ಹೋದ ಬಾವ ..... 

ಬಾಲ್ಯ ಮರುಕಳಿಸುವಂತಿದ್ದರೆ  ಇವೆಲ್ಲ ಮಾಡಬಾರದು  ಇವನ್ನ ಮಾಡಬೇಕು  

ಅಂತ ಪಟ್ಟಿ ಮಾಡಿ ಬಿಡುತ್ತಿದ್ದೆನೇನೂ 

ಬಾಲ್ಯ  ದತ್ತ ತಿರುಗಿದಾಗೆಲ್ಲ  ನೆನಪಾಗುವದು ...............  

ಉದ್ದ ಲಂಗ, ಅಪ್ಪೆಮರನ ಕೊಡ್ಳು (ಹಳ್ಳ )...... 

ಕೂಡು ಕುಟುಂಬದಲ್ಲಿ ಬೆಳೆದ ನಮಗೆ  

ವರ್ಷಕ್ಕೆ  ಎರಡು ಬಾರಿ  ಬಟ್ಟೆ ಬರುತ್ತಿತ್ತು .. (ಟಾಕಿ )

ಇಗಸ್ಟೇ  ಹೊಲಿಗೆ ಕಲಿಯುತ್ತಿರುವ ಅತ್ತೆಯಂದಿರು   ಎಲ್ಲರಿಗೂ  ಡ್ರೆಸ್  

ಹೊಲಿಯುವ ಜವಾಬ್ದಾರಿ ಹೊತ್ತಿರುತ್ತಿದ್ದರು .... 

ಅವರವರ  ಎತ್ತರಕ್ಕೆ ಅಗಲಕ್ಕೆ ತಕ್ಕಂತೆ  ಹೊಲಿಯುವ  ನಿಯಮವನ್ನ 

ಎಲ್ಲಿಗೋ ತೂರಿ .... 

ಬಟ್ಟೆಯನ್ನ ಅಳತೆ ಮಾಡಿ ಇವರದ್ದು ಇಸ್ಟು ಪಾಲು ಅಂತ ತೆಗೆದಿಟ್ಟು ....  

ಆಮೇಲೆ  ಹೊಲಿಯುವ  ಕೆಲಸ ಶುರು...........   ನನ್ನಂತಹ ಕುಳ್ಳಿಗೆ ಉದ್ದ 

ಲಂಗ , ಎತ್ತರದ  ದೊಡ್ಡಪ್ಪನ ಮಗಳಿಗೆ ಗಿಡ್ಡ ... 

ಇನ್ನೊಂದು ವಿಚಾರ ಏನೆಂದರೆ .... ನಮ್ಮೂರಿನ (ಪೇಟೆಯ ) ಬಟ್ಟೆ ಅಂಗಡಿ 

ಅಲ್ಲಿಂದ ಕೇವಲ ನಮ್ಮದೇ ೬-೮ ಮನೆಯವರು 

ಬಟ್ಟೆ  ತೆಗೆದು ಕೊಳ್ಳುತ್ತಿದ್ದರೆನೋ  ಅನ್ನುವದು  ನನ್ನ ಅನುಮಾನ ......  

ಯಾವತ್ತು ಅಂಗಡಿಯ ಬಾಗಿಲನ್ನ  ಮುಚ್ಚಿ  ಹೋಗ 

ಬಹುದು ಅಂತ ಪ್ರತಿ ಬಾರಿಯೂ ನಾನು ಮತ್ತು ಅನು 

ಮಾತಾಡಿದ್ದು ಸುಳ್ಳಲ್ಲ ....... 

ಅಪ್ಪ -ದೊಡ್ಡಪ್ಪ  ಪೇಟೆಗೆ  ಹೋದಾಗೆಲ್ಲ  

ಮಧ್ಯಾಹ್ನ  ಕಡ್ಲೆ ಭಟ್ರ  ಖಾನಾವಳಿ ಯಲ್ಲಿ ಊಟ ಮಾಡಿ  

ಚಿತ್ರಿಗಿ ಬಟ್ಟರ  ಬಟ್ಟೆ ಅಂಗಡಿ ಯಲ್ಲಿ ನಿದ್ದೆ  ಮಾಡಿಯೇ ಬರುತ್ತಿದ್ದದ್ದು ........  

( ಅಂಗಡಿ ಯಲ್ಲಿ ಇವರನ್ನ  ಕೂಡಿ ಹಾಕಿ ಊಟಕ್ಕೆ ಹೋದ ಭಟ್ಟರು  ೩ ಘಂಟೆಗೆ 

ಬರುವ ಹೊತ್ತಿಗೆ ಒಳ್ಳೆ ನಿದ್ದೆ ಮುಗಿದಿರುತ್ತಿತ್ತು )

ದಿನ ಕಳೆದಂತೆ  ಅತ್ತೆಯ ಮದುವೆಯೂ ಆಯಿತು........  ಮನೆ ಪಾಲೂ ಆಯಿತು ...... 

ಇ ಸಲ ಅಪ್ಪ  ನಮಗೆ ಮೊದಲು ಬಟ್ಟೆ ತಂದಾಗ .... ಎಲ್ಲೋ ಅನುಗೆ ಇನ್ನು 

ಬಂದಿಲ್ಲ ನನಗೆ ಮೊದಲು ಹೊಸ ಲಂಗ 

ಅಂತ ಖುಷಿ ಯಾದರೂ  ಆ ಖುಷಿ  ತುಂಬಾ ದಿನ ಉಳಿಯಲಿಲ್ಲ ..... 

ನಮಗೆ ತಂದು ಎರಡು ವರದ ನಂತರ  ದೊಡ್ಡಪ್ಪ ಬಟ್ಟೆ ತಂದರು  

ಹೊಸ ಡಿಸಾಯನ್ ದು .... 

ಆರು ತಿಂಗಳ ಮೇಲೆ ನಮಗೆ ಅಂತದ್ದೇ ಬಂತು ಅವಾಗ 

ಹಳೆಯದು  ಅನ್ನಿಸಿತ್ತು ..... ಪ್ರತಿ ಬಾರಿಯೂ ಹೀಗೆ 

ಕೊನೆಗೂ ತಿಳಿದ ಕಾರಣ ಏನೆಂದರೆ  ಅಲ್ಲಿ ಬಹುಷಃ ಬಟ್ಟೆ ಖರೀದಿ 

ಮಾಡುತ್ತಿದ್ದದ್ದು .....  ನಮ್ಮೆರಡೇ  ಮನೆ..... 

ಎರಡು ಮನೆಯಿಂದ ಒಂದು ಟಾಖಿ  ಖಾಲಿ ಆಗುತ್ತಿತ್ತು ........... 

ಒಂದು ಖಾಲಿ ಅದ ಮೇಲೆ ಇನ್ನೋದು ತರುವ ಸ್ವಭಾವ ...... ಭಟ್ಟರದ್ದು .... 

ಇಲ್ಲಿ ವ್ಯಾಪಾರ ಇಲ್ಲದೆ ಯಾಕೆ ಇಲ್ಲಿದ್ದಾರೆ ಅಂತಾ  ಕೇಳಿದ್ದಕ್ಕೆ ನಮ್ಮದು 

ಊರಲ್ಲಿ  ದೊಡ್ಡ ಷೋ ರೂಂ  ಇದೆ ಅನ್ನುವ  ಸಿದ್ದ 

ಉತ್ತರ............  

ಕೆಲವೇ ಮನೆಯವರು  ಹೋಗುತ್ತಿದ್ದದ್ದ ರಿಂದ  ಮನೆಯ ಎಲ್ಲ ಹಬ್ಬ ಹರಿ 

ದಿನಕ್ಕೂ  ಅವರನ್ನು ಕರೆಯುವ ಪರಿ ಪಾಟ 

ಒಮ್ಮೆ ಅವರ     ಷೋ ರೂಂ  ನೋಡಿದಾಗಲೇ ಗೊತ್ತಾಗಿದ್ದು  ಅಲ್ಲಿ ಯವರಿಗೆ 

ಕೊಡುತ್ತಿದ್ದದ್ದು  ಇದೆ ಉತ್ತರ............ 

ಇನ್ನೊಂದು  ಹೇಳಲೇ ಬೇಕಾದದ್ದು  ಅಪ್ಪೆ ಮರನ  ಕೊಡ್ಳು ..... 

ಪ್ರತೀ ಮಳೆಗಾಲಕ್ಕೆ ಅಪ್ಪ ಬಣ್ಣದ ಕೊಪ್ಪೆ ತಂದು ಕೊಡುತ್ತಿದ್ದರು 

ಛತ್ರಿ ನಮ್ಮೂರಿನ ಗಾಳಿ  ಮಳೆಗೆ  ಒಂದು ತಿಂಗಳೂ 

ಉಳಿಯುತ್ತಿರಲಿಲ್ಲ ...... 

ಶಾಲೆಯಲ್ಲಿ  ಅಕ್ಕೋರು ಬಿಟ್ಟು (ಟೀಚರ್ )ಎಲ್ಲರಿಗೂ  ಕೊಪ್ಪೆಯೇ ಆಗಿದ್ದರಿಂದ 

ಬೇಜಾರೇನು ಇರಲಿಲ್ಲ ............. 

ಮಳೆ ಗಾಲದಲ್ಲಿ ತುಂಬಿ ಹರಿಯುವ  ಕೊಡ್ಳು  

ಉಳಿದ ದಿನಗಳಲ್ಲಿ ಒರತೆ ನೀರು ಇರುತ್ತಿತ್ತು ..... 

ನನ್ನ ನಾಲ್ಕನೆ ಕ್ಲಾಸ್ ವರೆಗೂ, ಜೋರಾಗಿ ಮಳೆ ಬಂದಾಗ  ನನ್ನ ಸೊಂಟದ 

ವರೆಗೂ ಬರುತ್ತಿದ್ದ ನೀರು ..... 

ನಂತರ ಒಮ್ಮೆಯೂ ಅಸ್ಟೊಂದು ಬರಲಿಲ್ಲಾ ಯಾಕೇ ಅಂತಾ .... 

ಗೊತ್ತೇ ಆಗಲಿಲ್ಲ 

ದಿನವೂ ಬರೆಯುತ್ತಿದ್ದ ಒಳ್ಳೇ ಕೆಲಸದ ಪಟ್ಟಿಯಲ್ಲಿ ..... 

ವಾರಕ್ಕೆ ಒಮ್ಮೆಯಾದರೂ ... 

" ನಾನು ಕುರುಡನನ್ನು ರಸ್ತೆ ದಾಟಿಸಿದೆನು " ಅಂತ ಬರೆಯುತ್ತಿದ್ದೆ ,ಅಸಲು 

ನಮ್ಮೂರಿನಲ್ಲಿ ಯಾರೋಬ್ಬರು 

ಕುರುಡರು  ಇರಲಿಲ್ಲ ......  

ಕೇವಲ ೧೪ ಮನೆಗಳಿದ್ದ ನಮ್ಮ ಊರಿನಲ್ಲೇ ಉಳಿದು ,

ಊರವರೆ  ಆಗಿದ್ದ  ಅಕ್ಕೋರು 

ಗೊತ್ತಿದ್ದೂ ಗೊತ್ತಿದ್ದೂ ರೈಟ್ ಹಾಕಿ ಸಹಿ ಮಾಡುತ್ತಿದ್ದದ್ದು  

ಯಾಕೆ ?  ಹೀಗೆ  ಇನ್ನೂ  ಅರ್ಥವೇ  ಆಗದ , 

ಆಗೀಗ  ಕಾಡುವ ......  ವಿಚಾರ ಗಳು ಇನ್ನು ಇವೆ   

14 comments:

  1. odi...nannurina tumbaa vishaya nenapaaytu...thank you...

    ReplyDelete
  2. nenapugalu sihiyaagive. endoo sihiyaage iruttave

    ReplyDelete
  3. ಎಲ್ಲಾ ನೆನಪುಗಳು ಸಿಹಿಯೇ ತಾನೆ!

    ReplyDelete
  4. ನಿರೂಪಣೆ ಚೆನ್ನಾಗಿದೆ, ಹಳ್ಳಿಯ ಸೊಬಗಿನ ಬಾಲ್ಯದ ಜೀವನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ . ನಿಮ್ಮ ಹಳ್ಳಿಯ ಪರಿಚಯ ಹಾಗು ಅಲ್ಲಿನ ಕುಟುಂಬಗಳ ಬಗ್ಗೆ ಅಲ್ಲಿನ ಪರಿಸರದ ಬಗ್ಗೆ ಮಾಹಿತಿ ಇಷ್ಟಾ ಆಯ್ತು.

    ReplyDelete
  5. ಹಳೆದು ಅದರಲ್ಲು ಬಾಲ್ಯದ ನೆನಪಿನ ಭಂಡಾರ ಎಂದೂ ಬತ್ತದ್ದು ಬಿಡ್ರಿ..

    ReplyDelete
  6. ನೆನಪುಗಳ ಹಿಮಾಲಯ ಬಾಲ್ಯ.

    ReplyDelete
  7. Thanks Vandana Balyavannu mattomme nenapu madikottiddakke....

    ReplyDelete
  8. khushi aaythu odi antha heldre kadime aagatte :) chiranootana baalyada bagge bareda barahada vastu, bareda reeti eradoo bahala ishta aaythu :) .

    ReplyDelete
  9. ಬಾಲ್ಯ ಯಾವತ್ತೂ ಚಂದ ಚಂದವೇ...
    ನಿಮ್ಮ ಬರಹವೂ..

    ReplyDelete
  10. ಒಳ್ಳೆ ಕೆಲಸದ ಪಟ್ಟಿ ...
    ನಾನು ಅಮ್ಮನಿಗೆ ಸಾರು ಬಡಿಸಿದೆನು..ಇದು ನಮ್ಮ ಖಾಯಂ ಸಾಲು,ದಿನಾಂಕ ಮಾತ್ರ ಬದಲು:D

    ReplyDelete
  11. ಚೆನ್ನಾಗಿದೆ............

    ReplyDelete
  12. This comment has been removed by the author.

    ReplyDelete
  13. As I read this, I enjoyed the nostalgia of my own past. I really can't agree more with you...for your first 3/4 sentenses...!!!!

    ReplyDelete