Wednesday, 7 December 2011

ಪೋಲಿಸ್ ಸ್ಟೇಷನ್ನಲ್ಲಿ ಗಣಪ



ಪೋಲಿಸ್  ಅಂದ್ರೆ  ಒರಟರು ಊಟ ಮಾಡದ ಮಕ್ಕಳಿಗೆ ,
ಪೋಲಿಸ್ ಮಾವನ್ನ  ಕರಿತಿನಿ ಅಂತ ಹೆದರಿಸುವ ಅಮ್ಮಂದಿರು 
ಬೆರಳೆನಿಕೆಗೆ ಸಿಗ ಬಹುದು .
ಮನೆಗೂ ಸ್ಟೇಷನ್ನಲ್ಲಿಯ ತಲೆ ಬಿಸಿ ತಗೊಂಡೆ 
ಹೋಗಿರುತ್ತಾರೆ. ಈ ಕೆಲಸಕ್ಕೆ ಸೇರಿದಂದೆ ಮುಗಿತು , ಮಗ/ ಮಗಳು 
 ಒರ ಟಾದರು ಅಂತಾನೆ ಲೆಕ್ಕ ... ಎದುರಿರೋ ಕಳ್ಳತನ ಕೊಲೆ ದರೋಡೆ 
ಮೇಲಿಂದ ಬರುವ ಒತ್ತಡ .... ಮಂತ್ರಿ ಮಹೋದಯರು....!  
 ಬರುತ್ತಾರೆ ......!  ಆ ದಾರಿಯಿಂದ ಹೋಗು ತ್ತಾ ರೆ ಅನ್ನುವ ವಿಚಾರ ಇದ್ದ ರಂತೂ  ಮುಗಿತು 
ನಾಲ್ಕು ದಿನದಿಂದ   ಅನ್ನ ನೀರು ಬಿಟ್ಟು ಕಾಯುವದು ...( ಟೈಮ್ ಇರಲ್ಲ ಮಹೋದಯರಿಗೆ )
ಹಗಲು ರಾತ್ರಿ ಕೇಲಸ,  ಆಗ  ಸಿಡುಕು ಸ್ವಾಭಾವಿಕ ,
ಹಬ್ಬ ಹರಿದಿನ ಮನೇಲಿ ಇರ್ತೀನಿ ಅನ್ನು ವಂತೆ ಇಲ್ಲ ....
ಮೊನ್ನೆ ಗಣೇಶನ ಹಬ್ಬಕ್ಕೆ ಹುಬ್ಬಳ್ಳಿ ಗೆ ಹೋಗಿದ್ದೆ ,
ಪೂಜೆ ಎಲ್ಲಾ ಮುಗಿದ ಮೇಲೆ ಹೊರಗೆ  ಬಂದ್ರೆ ... 
ಲಾಟಿ ಹಿಡಿಯುವ ಕಯ್,   ರಂಗೋಲಿ ಹಾಕುತ್ತಿತ್ತು 
ಮಹಿಳಾ ಪೋಲಿಸ್  ರಂಗೋಲಿ  ಇಟ್ಟರೆ, ಪುರುಷರು 
ಬಣ್ಣ ಹಾಕುತ್ತಿದ್ದರು ..
ದೂರ ನಿಂತು ತಡೆಯಲಾರದೆ ..
ಹತ್ತಿರ ಹೋದೆ..ಒಂದೆರಡು ಫೋಟೋ 
ತಗೊಳ್ಳಲ ... ಕೇಳಿದ್ದಕ್ಕೆ ... ಮಹಿಳಾ ಪೋಲಿಸ್
ನನ್ನ ಹತ್ತಿರ ದೂರು ನೀಡಿದರು -''ರಂಗೋಲಿ ಹಾಕಕ್ಕೆ ಪುಡಿ ತನ್ನಿ ಅಂದರೆ 
ಬಣ್ಣ ಮಾತ್ರ ತಂದಿದ್ದಾರೆ, ಪಕ್ಕದ ಮನೇಲಿ ಕೇಳಿ ತಂದೆ, ಹಬ್ಬದ ದಿನ 
ಸರಿ ಅನ್ನಿಸುತ್ತ ?'' ಗಣಪತಿಯನ್ನ ತರುತ್ತಿವಿ ಬನ್ನಿ ...
ಕರೆದುಕೊಂಡು ಹೊರಟರು .. ಮೆಟ್ಟಿಲ ಮೇಲೆಲ್ಲ  ಅಲಂಕಾರ 
ಮಂಟಪ ,ದೀಪಗಳು  ...ಹಬ್ಬದ ಸಡಗರ ,
ರಾಜ್ಯೋತ್ಸವ ,ಸ್ವಾತಂತ್ರ್ಯ ದಿನ , ಗಣರಾಜ್ಯದಿನ ,
 ಗಾಂಧಿ ಜಯಂತಿ  ಎಲ್ಲಾ ಆಚರಿಸಿದ್ದು ನೋಡಿದ 
ನನಗೆ  ಎದು ಹೊಸದು..
ಮಾತಾಡಿಸುತ್ತ ಹೋದೆ , ಆಯುದ ಪೂಜೆ ,ದೀಪಾವಳಿ ,ಸಂಕ್ರಾಂತಿ  ಎಲ್ಲಾ 
ಮಾಡುತ್ತಿವಿ, ರಜಾ ಇರಲ್ಲ , ಮನೆಯಲ್ಲಂತೂ ಆಗಲ್ಲ ಇಲ್ಲೇ
ಎಲ್ಲರು ಸೇರಿ ಅಚೆರಿಸುತ್ತಿವಿ.... ಇಲ್ಲೇ ಕುಶಿ ಇದೆ.
ಮದ್ಯಾಹ್ನ ಹನ್ನೊಂದರ  ಮೇಲೆ ಗಣಪತಿ ತರಿತ್ತಿವಿ 
ಬನ್ನಿ ,,, ದೂರು  ನಿಡಕ್ಕಲ್ಲದೆ  ಜನ ಪೂಜೆಗೂ ಬರುತ್ತಾರೆ ,
ಅನ್ನೋದು ಸಂತೋಷ ಆಗುತ್ತೆ ,
 ಎನ್ನುವ ಅವ್ಹಾನದ ಜೊತೆಗೆ ಕಳಿಸಿ ಕೊಟ್ಟರು.
ಇದೆಲ್ಲ ಆಗಿದ್ದು ..

 ಹುಬ್ಬಳ್ಳಿಯ ಅಶೋಕ್ ನಗರ ಪೋಲಿಸ್ ಸ್ಟೇಷನ್ನಲ್ಲಿ,
ಇದೆಲ್ಲ ಮಾತಾಡುತ್ತ ರಂಗೋಲಿ ಇಟ್ಟು ಮುಗಿಸಿದ 
ಲೇಡಿ ಪೋಲಿಸ್ ಮುಖದಲ್ಲಿ ಮನೆಯೊಡತಿಯ 
ನಿರಾಳಭಾವ... 
ಒತ್ತಡದ ಮದ್ಯೆ ಇಂಥ ಹಬ್ಬ ಗಳು ಮತ್ತೆ ಬರುತ್ತಿರ ಬೇಕು .
ಯಾವುದೊ ತಲೆಬಿಸಿಗೆ, ಬದಲಾವಣೆ ಬೇಕು 
ಮುಖ್ಯವಾಗಿ ಜನರ ಭಾವನೆ ಬದಲಾಗಿ , ಸಂಭ್ರಮಿಸುವಂತೆ ಆಗಬೇಕು ,

4 comments:

  1. ಮನೆಯಲ್ಲಿ ಹೇಗೆ ಇದ್ದರೂ..
    ಹೊರಗಡೆ ಎಲ್ಲರೂ ಸರಿ ಇರುತ್ತಾರೆ..
    ಗಂಡಿರಲಿ..
    ಹೆಣ್ಣಿರಲಿ.. ಅಲ್ವಾ?

    ಪೋಲಿಸ್ ಕೆಲಸ ಒಂದು ರೀತಿಯಲ್ಲಿ ನರಕ...

    ನೀವು ಹೇಳಿದ ಹಾಗೆ ಅವರಿಗೂ ಬದಲಾವಣೆ ಬೇಕಲ್ಲ..
    ಇದ್ದಿದುದರಲ್ಲಿ ..
    ಸಂತೋಷ... ಸಂಭ್ರಮ ಕಂಡುಕೊಳ್ಳಬೇಕಲ್ಲ..

    ReplyDelete
  2. ಎಷ್ಟೇ ಪೊಲೀಸರಾದರೂ ಅವರೂ ಮನುಷ್ಯರು ಅಲ್ಲವೆ! ಒಳ್ಳೆ ಚಿತ್ರ ಬರಹ ಮೇಡಂ...

    ReplyDelete
  3. ಚೆನ್ನಾಗಿದೆ ವಂದನ ... ಈ ರೀತಿಯ ಒಳ್ಳೆಯ ಲೇಖನ ಗಳು ಮೂಡಿ ಬರುತ್ತಿರಲಿ

    ReplyDelete