Monday 5 December 2011

ಭೋಧಿ ವೃಕ್ಷ


ನಿನ್ನ ಪ್ರೀತಿಯೇ ಹಾಗಿತ್ತು ...
ಮೌನದ  ಕತ್ತೆ ಯೋಡೆದ  ಮಂದಹಾಸದಂತೆ                                                
ನೊರೆ ನೊರೆ ಯಾಗಿ ಬಂದ ಅಬ್ಬರದ  ತೆರೆಯಂತೆ 
ಅಡ್ಡ ತಿಡ್ದ ಗೆರೆಯಲ್ಲ  ಚೌಕಟ್ಟೆರಿದ ಚಿತ್ರದಂತೆ..

ಇಬ್ಬನಿಯ ತಂಪಿಂದ ಒದ್ದೆ ಯಾಗುತ್ತ ...
ಹೂ ಅರಳುವ ಶಬ್ದ  ಕೇಳುತ್ತ ....
ಪಕ್ಷಿ ಸಂಕುಲದ  ಗೊರಕೆ ಸವಿಯುತ್ತ ...
ಬದುಕಿನ ಕೆಲವಸಂತ  ಜೊತೆ  ಕಳೆದ ಮೇಲೆ ..

ಬದಲಾದೆವೆಕೂ  ನಾವು ಗೆಳೆಯ ...
ನೊರೆ ನೊರೆಯ ತೆರೆ  ಸುನಾಮಿಯಾಗಿ ...
ಇಬ್ಬನಿಯ ತಂಪು  ಸಹಿಸದಾಗಿ ...
ಇಂಚಿಂಚಾಗಿ ಹೊರ ಬಂದ  ಬದುಕಿನ  ಚಿತ್ರ .....

ಭೋಧಿ ವೃಕ್ಷ  ಇದ್ದಲ್ಲಿಗ ಬಟಾಬಯಲು 
ಗೂಡು ಕಟ್ಟಿದ್ದ ಪಕ್ಷಿ ಯನ್ನೆಲ್ಲ ಒಂಟಿ ಮಾಡಿ..
ಮೌನದ ಕತ್ತೆಯ ಬಿರುಕ ಮುಚ್ಚಿ ...
ಎಲ್ಲಿಲ್ಲಿ  ಉರಿ  ಇಡುತ್ತಿರುವದೂ .....
ಬೆಂಕಿ ಕಡ್ಡಿಯಾಗಿ ವೃಕ್ಷ .....

2 comments:

  1. ಅರ್ಥ ಗರ್ಭಿತ ಸಾಲುಗಳು...

    ಸುಂದರ ಸಾಲುಗಳಿಗೆ ಅಭಿನಂದನೆಗಳು...

    ReplyDelete