ಅಬ್ಬಾ ಏನೂ ಕುತೂಹಲ ......... ಇವತ್ತು ಏನೂ ಹೊಸದು ...
ಕಾಯುತ್ತಿದ್ದೆ ... ಮನದೊಳಗೆ ಮಂಡಿಗೆ ಮೆದ್ದು ........
ಯಾವಾಗ ಕ್ಲಾಸ್ ಬಿಡುತ್ತೆ / ಮನೆ ಯಾವಾಗ ತಲುಪುತ್ತೇನೆ ......
ಅಂತೆಲ್ಲ ಯೋಚಿಸಿ .... ಹೇಳಿದ ಪಾಠ ತಲೆಗೇ ಹೋಗದೆ ....
ಒಟ್ಟಿನಲ್ಲಿ ಕೂತಿದ್ದೆ ..... ಕ್ಲಾಸ್ ರೂಂ ನಲ್ಲಿ ......
ಅಂತು ಬೆಲ್ ಆಯಿತು ....
ಕತೆ ಹೇಳುತ್ತಾ ಹೆಜ್ಜೆ ಹಾಕುವ ಹಿಂದಿನ ಮನೆ ಲಕ್ಷ್ಮಿ ಯನ್ನ ಬಿಟ್ಟು ಹೋಗಲು ...
ಮಾಡಿದ ಪ್ಲಾನ್ ಎಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ .... ಅವಳ
ಯಾವ ಮಾತಿಗೂ ಲಕ್ಷ್ಯ ಕೊಡದೆ ....
ಸುಮ್ಮನೆ ಬಿರುಸಾಗಿ ಹೆಜ್ಜೆ ಇಡುತ್ತಿದ್ದ ನನ್ನ ನೋಡಿ ...." ಏನೇ ಇವತ್ತು
ಓಡುತ್ತಿದ್ದಿಯ ? ಮನೆಗೆ ಯಾರಾದರು ಬರುತ್ತಾರಾ ? "
ಅಂತ ಕೇಳಿದ್ದಕ್ಕೆ ನಾಲಿಗೆಯ ತುದಿಯ ವರೆಗೆ ಬಂದ ಮಾತನ್ನ ತಡೆ ಹಿಡಿದು
.... ಅವಳು ಪಾಲಿಗೆ ಬಂದರೆ ಅಂತ ಭಯವಾಗಿ ...
"ಇಲ್ಲ ಅಮ್ಮ ಬೇಗ ಬಾ ತೋಟಕ್ಕೆ ಹೋಗಿ ಬರೋಣ ಅಂತ ಹೇಳಿದ್ದಾರೆ "....
ಅಂತ ಬೊಗಳೆ ಬಿಟ್ಟೆ !
"ನನ್ನ ಅಮ್ಮ ಪೇಟೆಗೆ ಹೋಗಿದ್ದಾರೆ .... ಬರುವ ವರೆಗೆ.....
ನಿಮ್ಮ ಮನೆಲಿರು ಅಂತ ಹೇಳಿದ್ರು ನಿನ್ನ ಅಮ್ಮನಿಗೂ ಹೇಳಿ ಹೋಗ್ತೀನಿ
ಅಂದಿದ್ದಾರೆ.....
ಹಾಗಿದ್ದರೆ ನಾನು ನಿಮ್ಮ ಜೊತೆ ತೋಟಕ್ಕೆ ಬರಬಹುದು" ಅಂದಾಗ
ಬೇಡ ಅನ್ನ ಲಾಗದೆ ...
ಬಾಡಿದ ಮುಖ ಹೊತ್ತು ದೇವರಿಗೆ ಹರಕೆ ಹಾಕಿಕೊಳ್ಳ ತೊಡಗಿದೆ .....
ನಿನ್ನೆ ಯಿಂದ ಇವತ್ತಿಗೆ ಅಂತ ಕಾದೆ ದೇವರೇ ಅಮ್ಮ ಇವತ್ತು ಮಾಡದಿರಲಿ ....
ನಾಳೆಯ ವರೆಗೆ ಕಾದೆನು .... .....
ಪ್ಲೀಸ್ ದೇವರೇ ನಾಳೆ ೨೧ ಗರಿಕೆ ಹಾಕುತ್ತೀನಿ ..
ಅಂತೆಲ್ಲ ಲಂಚ ದ ಆಮಿಷ ವನ್ನ ದೇವರಿಗೆ ಒಡ್ದ ತೊಡಗಿದೆ.......
ಆತ ಯಾವುದೊ ಎಮರ್ಜೆನ್ಸಿ ಕೆಲಸಕ್ಕೆ ಲಂಚ ತಗೊತಿದ್ದನೋ ಗೊತ್ತಿಲ್ಲ,
ಅಥವಾ ನಾನು ತೋರಿಸಿದ ಆಮಿಷ ಕಡಿಮೆ ಇತ್ತ ?
ನಿದ್ದೆ ಮಾಡಿ ಬಿಟ್ಟಿರ ಬೇಕು ಬೆಳಗ್ಗಿ ನಿಂದ ನಡೆದ ಪೂಜೆಗೆ ಹೊಡೆದ
ಜಾಗಟೆ ಶಬ್ದಕ್ಕೆ....
ಊದಿನ ಕಡ್ಡಿಯ ಮತ್ತೆ ಧೂಪದ ಮಿಶ್ರ ಘಮಕ್ಕೆ ತಲೆ ನೋವು ಬಂದಿರ ಬೇಕು .....
ಗೊತ್ತಿಲ್ಲ .....
ಅಂತು ನನ್ನ ಮಾತು ಕೇಳಲಿಲ್ಲ ...
ಮನೆಯ ಬಾಗಿಲಿಗೆ ಬರುತ್ತಿದ್ದಂತೆ ತರಕಾರಿಯನ್ನ ಫ್ರೈ ಮಡಿದ ಘಮ ಕ್ಕೆ ...
ಅಂತು ಇನ್ನು ಬೇಡಿಕೊಂಡು ಪ್ರಯೋಜನವಿಲ್ಲ.....
ಅಮ್ಮ ನಿಗಾದರು ಬುದ್ದಿ ಬೇಡವ ? ಇವತ್ತೇ ಯಾಕೆ ಮಾಡಬೇಕಿತ್ತು..
ಅದೂ ಹಿಂದಿನ ಮನೆಯ ಕಮಲೂಚಿಕ್ಕಿ ಮಗಳು ಸ್ಕೂಲ್ ನಿಂದ ಇಲ್ಲೇ
ಬಂದು ಇರುತ್ತಾಳೆ..
ಅಂದಾಗ ಬುದ್ದಿ ಬೇಡವ ಅಂದು ಕೊಂಡೆ ....
ಅಮ್ಮ ವಿಚಾರ ಮಾಡಿರ ಬೇಕು ಅವಾಗವಾಗ ಇಬ್ಬರು ಸೇರಿ ಸ್ವೀಟ್
ಮಾಡಲು ಸಹಾಯ ಮಾಡಿ ಕೊಳ್ಳುತ್ತಾರೆ...
ಹೊಸದೇನೋ ತಿಂಡಿ ಮಾಡಿದರೂ ಅತ್ತ ಇತ್ತ ಓಡಾಡುತ್ತೆ....
ಡಿಸ್ಕೌಂಟ್ ಗೂ ಒಟ್ಟಿಗೆ ಹೋಗಿ ಒಂದೇ ತರಹದ ಸೀರೆ ತರುತ್ತಾರೆ ....
ಇವತ್ತು ಅಡುಗೆ ಮಾಡಕ್ಕೆ ಯಾಕೋ ಮನಸ್ಸಿಲ್ಲ ಕಮಲೂ ಅಂತ ಅಮ್ಮ ಹೇಳಿದರೆ ..
ಅನ್ನ ಕ್ಕೆ ಇಡು ಸಾಕು ಹುಳಿ, (ಸಾಂಬಾರು ) ಪಲ್ಯ ,
ಅಪ್ಪೆಹುಳಿ ನಾನು ಮಾಡ್ತಿ ಸಾಕು
ಮತ್ತೆ ಮಾಡಡ.... ಅನ್ನುವ ಭಾಂದವ್ಯ ...
ಮೊನ್ನೆ ಕಮಲೂಚಿಕ್ಕಿ ಮಾಡಿದ ಹಲಸಿನ ಹಣ್ಣಿನ ಕಡಬು ಅಂತು ನೆನಪಾದರೆ ..... ಆಹಾ ..
"ನೀನು ಹೇಗೆ ಮಾಡಿದ್ದೂ ಅಂತ ಕೇಳಿ ಕಲಿತುಕೋ " ಅಪ್ಪ ಆದೇಶ
ಹೊರಡಿಸಿದ ಮೇಲಂತೂ ...
ಅಮ್ಮ ನಿಗೆ ಕಮಲೂಚಿಕ್ಕಿ ಮೇಲೆ ಪ್ರೀತಿ ....
ತಯಾರಿ ನಡೆದಿತ್ತು ಪಾಕೆಟ್ ತೆಗೆದಿಟ್ಟು ನಮ್ಮ ಕಾಯುತ್ತಿದ್ದರು ...
ಸರಿ ನೀವಿಬ್ಬರು ಇರುತ್ತೀರಿ ಅಂತ ಎರಡು ಮಾಡುತ್ತೀನಿ ನನಗೆ ಬೇಡ
ಎನ್ನುತ್ತಾ ...
ಪಾಕೆಟ್ ಮೇಲಿನ ವಿವರ ಓದುತ್ತ ..
ಬೆಳ್ಳಿ ಬಣ್ಣದ ..... ಪ್ಯಾಕ್ ಕತ್ತರಿಸಿ ಮಸಾಲೆ ಹಾಕಿ ...
ಪಕ್ಕಕ್ಕಿಟ್ಟರು .... ಹಳದಿ ಬಣ್ಣದ ಪ್ಯಾಕ್ ಮೇಲೆ ಅವರು ಬರೆದದ್ದನ್ನ
ಓದುತ್ತಿದ್ದರು ...
ನಮ್ಮ ಹತ್ತಿರ ಸಣ್ಣ ಪ್ಯಾಕ್ ಸಿಕ್ಕಿದ್ದೇ .... ಸುವಾಸನೆ ಯನ್ನ ಆಘ್ರಾಣಿಸಿ...
ಕತ್ತರಿಸಿದ
ಬಾಗದಲ್ಲಿ ನಿಧಾನ ನಾಲಿಗೆ ತೂರಿ ವಾವ್....