ಹೆಜ್ಜೆಗಳು ಗೆಜ್ಜೆಗಳತ್ತ ...
ನಡೆದ ದಾರಿಯ ತುಂಬಾ ಒಂಟಿತನ,
ಮೌನದಾಚೆ ಬಂದ ಮಾತು ..
ಚಿಗುರಿ ನಿಂತ ಮೊದಲ ಹಸಿರು ..
ತಿಳಿವ ಮುನ್ನ ಬಡಿದ ಸಿಡಿಲು ..
ಮುಖ ಗಳೆಷ್ಟು ಪ್ರೀತಿಗೆ,
ಒಂಟಿ ಪಯಣ ಗೊತ್ತಿರದ ದಾರಿ ..
ಮಧ್ಯೆ ಕನುಸುಗಳ ಗರ್ಭಪಾತ ..
ನಡುಗುವ ಚಳಿಯಲ್ಲೂ ಹರಿದ ಬೆವರು
ಇದಕ್ಕೆಲ್ಲ ನನ್ನೂರ ಸೂರ್ಯ ಸಾಕ್ಷಿ,
ಮುಗಿದ ಮಾತು
ಕಣ್ಣೀರ ಪ್ರವಾಹಕ್ಕೆ ..
ಕೊಚ್ಚಿಹೋದ ಗುರುತು ..
ಅಶ್ರುವಿನ ಧಾರೆಗೆ ತುಂಬಿದ ಅಘನಾಶಿನಿ ..
ನೆನಪಿನ ಬುಟ್ಟಿಗೆ ಹಿಡಿದ ಗೆದ್ದಲು ..
ಗೆಳೆಯಾ ...
ನನ್ನೂರ ಕನಸುಗಳಿಗೆ ಸಾವಿಲ್ಲ ..
ನನ್ನೆದೆಯ ಕೋಣೆಯಲಿ
ಬಂಧಿಯದು..
ಹೆಜ್ಜೆಗಳು ಮತ್ತೆ ಕನಸಿನ ಕಡೆಗೆ......
(ಚಿತ್ರ net ನಿಂದ )