ಬೆಳಿಗ್ಗೆ ಎದ್ದು ಸ್ನಾನ ಮಾಡುವಾಗ ಬಿಸಿ ನೀರು
ಹೊಯ್ದಸ್ಟು ಮತ್ತು ಬೇಕು ಅನ್ನಿಸುವಸ್ಟು ಚಳಿ,
ಇವತ್ತಾದ್ರೂ ಸ್ಟಾಟ್ ಪ್ರಾಬ್ಲಮ್ ಕೇಳಬೇಕು,
ಲೈಬ್ರರಿ ಯಿಂದ ಬುಕ್ ,ಅಮ್ಮನಿಗೆ ಗೋದ್ರೆಜ್
ಹೇರ ಡಯಿ,
ಪ್ರಜಾವಾಣಿ ಪೇಪೆರ್.. ಲೆಕ್ಕ ಹಾಕುತ್ತ ಬಟ್ಟೆ ಬದಲಾಯಿಸಿ
ರೇಡಿಯಾಗಿದ್ದೆ .
ಜಡಿ ಮಳೆ ಮನೆಯಿಂದ ಹೊರಡುವಾಗಲೇ ಅಳುಕು ,
ಮಳೆ ಜೋರಾದ್ರೆ ಬಸ್ ಬರಲ್ಲ,
ತಿರುಗಿ ಮನೆಗೆ ಹೇಗೆ ಬರೋದು ಅನ್ನುವ ಪ್ರಶ್ನೆ ಹೊತ್ತು
ಬ್ಯಾಗ್ ಗೆ ಪುಸ್ತಕ ತುಂಬಿ ,ಅಮ್ಮ ಕೊಟ್ಟ ತಿಂಡಿಯ
ರುಚಿ ಗೊತ್ತಾಗುವ ಮುನ್ನವೇ ನುಂಗಿ ಓಡಿ ಬಿಟ್ಟಿದ್ದೆ.
ಸಾಹಿತ್ಯ ಓಡಿ ಗೊತ್ತೇ ಇಲ್ಲದ ನೀನು, ಪುಸ್ತಕ ಕೊಳ್ಳುವ
ಹವ್ಯಾಸಕ್ಕೆ ಬಿದ್ದದ್ದು ಯಾಕೇಂತ ಗೊತ್ತಾಗಿರಲಿಲ್ಲ,
ಒಂದು ಓದಿಲ್ಲ ಅನ್ನೋದು ಸಾಬಿತಾಗಿತ್ತು,
ಬುಕ್ ತಗೊತಿದ್ದಿಯ ಅಂದಿದ್ದಕ್ಕೆ ಪೆದ್ದನಂತೆ ನಕ್ಕಿದ್ದೆ?
ಯಾರನ್ನೋ ಮೆಚ್ಚಿಸಕ್ಕೆ ಆಗಿದ್ದರೆ ನಿನ್ನದೇ ಸಂಬಳ ದಲ್ಲಿ
ಅವರಿಗೊಂದು ಒಳ್ಳೆಯ ಪುಸ್ತಕ ಕೊಡಿಸು .....
ಉಚಿತ ಸಲಹೆ ನೀಡಿದ್ದೆ .....
ಅದೇ ನಿನ್ನ ಫ್ರೆಂಡ್ ನಿನ್ನೆ ಏನೇನೋ ಲವ್
ಅಂತೆಲ್ಲ,
ಮಾತಾಡಿದ ... ಏನು ಮಾಡಬೇಕು ಗೊತ್ತಿಲ್ಲ ಕಣೋ
ಅಂತ ಕ್ಯಾಂಟಿನ್ನಲ್ಲಿ ಹೇಳಿದಾಗ ....
ನೀನು ಮುಖ ಕೊಟ್ಟು ಮಾತಾಡಲಿಲ್ಲ ..
ಅಗಸ್ಟ್ ಮೊದಲ ವಾರ ರಿಸಲ್ಟ್ ಬಂತು,
ನಿನ್ನಲ್ಲೇನೋ ಬದಲಾವಣೆ ಗಮನಿಸಿದ್ದೆ
ಏನಾಯಿತು ಅಂದಿದ್ದಕ್ಕೆ,,
"ಆಮೇಲೆ ಸಿಗು ಹೇಳುತ್ತೀನಿ .."
"ನಾನೊಂದು ಹುಡುಗಿಯನ್ನ ಲವ್
ಮಾಡುತ್ತಿದ್ದೀನಿ"
"ಯಾರೋ ಅದು? "
"ನೀನು"
"ತಮಾಷೆ ಮಾಡಬೇಡ ..."
ಮಳೆಯ ಜೊತೆ ಸಿಡಿಲು ....
"ಇಲ್ಲ..."
ಮಾತಿಲ್ಲದೆ ತಿಂಗಳುಗಳೇ ಅಪರಿಚಿತ ರಂತೆ ಕಳೆದು ಹೋಯ್ತು
ಕ್ಲಾಸ್ ನಲ್ಲಿ ಎಲ್ಲರ ಜೊತೆ ಮಾತಾಡುತ್ತಿದ್ದರೆ,ನೀನು ಎದ್ದು ಹೋಗಿರುತ್ತಿದ್ದೆ,
ಅದರಂತೆ ನಾನು ,ಬೇಡ ಅನ್ನಕ್ಕೆ ಕಾರಣ ಇರಲಿಲ್ಲ .
"ಓಕೆ" ಅಂದಿದ್ದೆ,
ಮತ್ತೆ ಕೊನೆಯ ಪರಿಕ್ಷೆ ಹತ್ತಿರ ವಾಯಿತು ...
ಅಪ್ಪ ಅಮ್ಮನ ಜೊತೆ ನೀನು ಊರಿಗೆ ಹೊರಟಿದ್ದೆ,
ಯಾವುದೊ ನೆಪದಲ್ಲಿ ಮನೆಗೂ ಬಂದಿದ್ದೆ ...
ಅವರನ್ನ ಪರಿಚಯಿಸೋದು ಅನ್ನೋದು ಗೊತ್ತಾಗಿತ್ತು .
ನೀನು ಮಾತ್ರ ಒಳಗೆ ಬಂದು .. ಮಾತಾಡಿ,
ಬಾ ಅಪ್ಪ ಅಮ್ಮ ಇದ್ದಾರೆ ಅಂದಾಗ
ಬೇಜಾರಾಯ್ತು ...
ಕಾರ್ ವರೆಗೆ ಬರೋವರೆಗೆ ಹಣ ಎಣಿಸುತ್ತಿದ್ದ ಅಪ್ಪ ....
ನಮಸ್ತೆ .... ಅಂದ್ರು ......
ತಿರುಗಿ ಉತ್ತರಿಸಲಿಲ್ಲ ......
ಅಮ್ಮ ಹೊರಗೆ ಕಣ್ಣು ತೆರೆದವರೇ ಅಲ್ಲ ..
ನಕ್ಕರು ...ಮನೆಯೇ ಪ್ರಪಂಚ ಅಂದುಕೊಂಡವರು ....
ಅವತ್ತು ಅತ್ತಿದ್ದೆ
'ನಾವು ಭಾವನೆಗೆ ಬೆಲೆ ಕೊಡೊ ಜನ '
ನಮ್ಮ ಪರಿಕ್ಷೆ ಗಳೆಲ್ಲ ಮುಗಿದಿತ್ತು ..ಹಕ್ಕಿಗಳು
ಬಾಡಿಗೆ ಗೂಡು ಬಿಟ್ಟು ಸ್ವಂತ ಗೂಡಿಗೆ ಹೋಗಲು
ಹಂಬಲಿಸುತ್ತಿದ್ದ ದಿನ ಗಳು ....
ಎಲ್ಲರಂತೆ ನಮ್ಮ ನಮ್ಮಲ್ಲೇ ವಿದಾಯ ಹೇಳಿಕೊಂದ್ವಿ,
ಅಟೋಗ್ರಾಫ್ ವಿನಿಮಯ ಮಾಡೋವಾಗ,
ನಿನಗೆ ಗೊತ್ತಿತ್ತಾ? ನಮ್ಮ ದಾರಿಗಳು ಇನ್ನೆಲ್ಲೂ ಸೇರಲ್ಲ ಅಂತ ....
ದಿನ ಆಡುತ್ತಿದ್ದ ಮಾತು ... ವಾರಕ್ಕೆ ಬಂದು ... ತಿಂಗಳಿಗಾಯಿತು,
ನಂತರ ವರುಷಕ್ಕೆ ಒಮ್ಮೆಯೂ ಇಲ್ಲದೆ ಹೋಯಿತು ....
ಅಲ್ಲಿಂದ ನೀನು ಹೇಳಿದ್ದೆ ಸತ್ಯ , ಎಲ್ಲಿಂದ ನ ವದರಿದ್ದೆ ಬದ್ದ ..
ಎಷ್ಟು ದಿನ ಹೀಗಿರಲು ಸದ್ಯ ಹೇಳು ...
ನೀನು ಫೋನ್ ಮಾಡಲೇ ಇಲ್ಲ ...
ಮೇಲೆ ಬಿದ್ದು ಮಾತಾಡಿಸಲು ಸ್ವಂತಿಕೆ ಒಪ್ಪಲಿಲ್ಲ...
ತೆಪ್ಪಗಾದೆ.....
ಪ್ರತಿದಿನ ಹೊಸ ಪರಿಚಯ ಎಲ್ಲಾ ಹಂತದ ಜನರು ..
ಅವರ ಆತ್ಮೀಯತೆ ಪ್ರೀತಿ ... ಒಂದು
ಹಂತಕ್ಕೆರಲು
ಸಹಾಯ ವಾಯಿತು , ದುಡಿದು ಬದುಕುವ ಹೆಬ್ಬಾಗಿಲು ದಾಟಿದ್ದೆ.
ನಿನಗೆ ಪೆವಿಲಿಯನ್ ನಲ್ಲಿ ಕುರಕ್ಕೆ ಆಗಲೇ ಇಲ್ಲ,
ಯಾವುದೊ MNC ಯಲ್ಲಿ ಕೆಲಸ ಮಾಡ್ತಿದ್ದೀಯ
ಅನ್ನೋದು ಮೂರನೆಯವರಿದ ಗೊತ್ತಾಯಿತು ...
ಸಂತೋಷ ಪಟ್ಟೆ ನೆಲೆ ನಿಲ್ಲ ಹೊರಟದ್ದಕ್ಕೆ,
ತಳಕು ಬಳಕು ಗಳಲ್ಲಿ ನೀನು ಕಳೆದು ಹೋಗುವಾಗ
ಹುಟ್ಟಿದ ಗೆರೆ ಕಂದರವಾಯಿತು .
ಆಕಾಶಕ್ಕೆ ಏಣಿ ಎಡ ಹೊರಟವನ ...
ಬಂದಿಸೋ ನಿನ್ನ ಹೇಳಿಕೆಗಳು ..
ಇಷ್ಟವಾಗಲಿಲ್ಲ ..
ಏನೇ ಆಗಲಿ , ಇವತ್ತು ನಿನ್ನ ಹತ್ತಿರ ಎಲ್ಲಾ ಮಾತಾಡ
ಬೇಕು,
ಎಲ್ಲಿಂದ ಅಂದ್ರೆ,
ನೀ ಬದಲಾದಲ್ಲಿಂದ ಅತ್ವ ನಾ ಬದಲಾದಲ್ಲಿಂದ
ಅನ್ನೋದಕ್ಕಿಂತ.....
..ನಮ್ಮಿಬ್ಬರ ದಾರಿ ಬದಲಾದಲ್ಲಿಂದ,
ಎರಡು ವರ್ಷದ ಮೇಲೆ ಅದ ಬೇಟಿ ...
ಅದೂ ನಾನೆ ಫೋನಾಯಿಸಿ ಬರ್ತೀನಿ ... ಅಂದಿದ್ದಕ್ಕೆ
ಮಾತಾಡಲು ವಿಷಯವಿತ್ತು . ಒತ್ತಾಯದ ಮಾತು ಬೇಕಿರಲಿಲ್ಲ
ಯಾಕೋ ಅನ್ನಲಾರೆ ಕಾರಣ ಬೇಕಿಲ್ಲ ..
ಹೋರಟ ಗಿನ ಮುಖ, ಬರುವಾಗ ಇರಲಿಲ್ಲ,
' ನಾವು ಮನುಶತ್ವಕ್ಕೆ ತಲೆ ಬಾಗೋ ಜನ'
ಖಂಡಿತ ತಿರುಗಿ ಬರಲಾರದಸ್ಟು ದೂರ ಸಾಗಿದ್ದಿವಿ,
ನಮ್ಮ ನಮ್ಮ ಹಾದಿಯಲ್ಲಿ ...
ನಮ್ಮ ನಡುವೆ ಮಾತುಗಳಿಲ್ಲದೆ
ವರುಷಗಳೇ ಸರಿದದ್ದು ಗಮನಕ್ಕೆ ಬರಲಿಲ್ಲ,
ಸಮಯ ಇರಲಿಲ್ಲವ ?
ಬೇಡ ವಾದ್ವ ?
ಜೊತೆಗಿದ್ದ ವರ್ಷ ದಿನದಂತೆ ಕಳೆದದ್ದು ...
ಜೊತೆಗಿರದ ದಿನಗಳು ಇಪ್ಪತ್ನಾಲ್ಕು ಘಂಟೆಯವೇ........
ಬೇಟಿ ಅನಿವಾರ್ಯವಲ್ಲ ನಿನ್ನಂತೆ , ವ್ಯತ್ಯಾಸ ಏನಿಲ್ಲ
ನೀನಿಲ್ಲ ಅನ್ನುವದನ್ನ ಬಿಟ್ಟರೆ ....
ಸೂರ್ಯ ಚಂದ್ರ ಡ್ಯುಟಿ ತಪ್ಪಿಸಲ್ಲ .. ಪ್ರತಿನಿತ್ಯ,
ಕೇಲಸಗಳ ಮದ್ಯೆ ಸಮಯವೇ ಉಳಿತಿಲ್ಲ ..
ಇವುಗಳ ಮದ್ಯೆ ಇಣುಕುತ್ತಿದ್ದ ನೆನೆಪು ಕೆಲವು ದಿನ ಕಾದಿದ್ದು
ಸುಳ್ಳಲ್ಲ ....
ಒಂದು ಭಾನುವಾರ ಮನೆಗೆ ಬಂದ್ರೆ
ಮನೆಲೇಲ್ಲ ಖುಷಿಯಿಂದ ಓಡಾಡ್ತಿದಾರೆ.
ಸುಸ್ತಾಗಿ ಬಂದವನಿಂದಲೂ ಅದೇ ನಿರಿಕ್ಷೆ ...
ವಿಷಯ ಹೇಳ್ರೆ ನಾನೂ ಸೇರಿ ಕೊಳ್ತೀನಿ
ಕೇಳಿದ್ದೆ,
''ಅದೇ ಲಾಸ್ಟ್ ವೀಕ್ ಬೇಟಿ
ಯಗಿದ್ದೆಯಲ್ಲ,
ಅವನು ನಿನ್ನ ಮದುವೆಯಾಗಕ್ಕೆ ಒಪ್ಪಿದ್ದಾನಂತೆ"
ನಿನ್ನೆ ಫೋನ್ ಮಾಡಿದ್ರು,
"ನಂಗೂ ದಿನೇ ದಿನೇ ವಯಸ್ಸಾಗ್ತಿದೆ"
ಅಂತೆಲ್ಲ ಯಾವುದ್ಯಾವುದೋ ವಿಚಾರಕ್ಕೆ ಹೇಳಿದ
ತಂಗಿಯ ಮಾತು ಎದುರು ಬಂದು ಸುಮ್ಮನಾಗಿದ್ದೆ,
ನಿನೇನಂತಿಯ.........? ಕೇಳಲಿಲ್ಲ ...
ಆ ಕ್ಷಣಕ್ಕೆ ...
ಅಪ್ಪ ಹಚ್ಹಿಕೊಂಡ ಸಾಮಾಜಿಕ
ರಾಜಕೀಯದ ಕೇಲಸಗಳ ಮದ್ಯೇ
ಬಿಡುವಾಗಿ ಜರಿಸಿರೆ,ಬೆಳ್ಳಿ ಪಾತ್ರೆ, ಛತ್ರ,
ಅಡುಗೆಯವರು ಅಂತೆಲ್ಲ ಓಡಾಡಿದರು
ಆರಿಸಿ ಆರಿಸಿ ತಂದ ಪತ್ರೆಯ ಮೇಲೆಲ್ಲಾ
ಅಕ್ಕನ ಹೆಸರು !
ಗಿಚಿಸಿ ನನ್ನ ಹೆಸರು ಬರೆಸಿದ್ದು ಅಮ್ಮ ....
' ಸಾಮಾಜಿಕ ವ್ಯಕ್ತಿಯ ಸಂಸಾರಿಕ ಸೋಲು ಇದೇನ ?'
"ಬೇಕಾದಷ್ಟು ಸಂಬಳ ಬರುತ್ತೆ,
ನೀನು ಕೆಲಸ ಮಾಡೋದಾದ್ರೆ ನನ್ನದೇನು ಅಡ್ಡಿ ಇಲ್ಲ,
ಫ್ರೆಂಡ್ಸ್ ಜಾಸ್ತಿ, ''
ನೇರ ಮಾತು ಮೊದಲಿನ ಮೂರೂ ನಾಲ್ಕು
ಬೇಟಿಯಲ್ಲಿ ತನ್ನ ಬಿಚ್ಚಿಟ್ಟಿದ್ದ ,
ಕೆಲಸ ಮಾಡ್ತೀನಿ,
ಓದೋ ಆಸೆ,
ಹೀಗೊಬ್ಬ ಇದ್ದ ಕಾಲೇಜ್ ದಿನಗಳಲ್ಲಿ
ಅಂತೆಲ್ಲ ಹೇಳಿದ್ದೆ
ನಕ್ಕಿದ್ದ .....
ಮದ್ವೆಯಾಯಿತು .. ಅಪ್ಪನ ಆಸೆಯಂತೆ
ಜನಸಾಗರದ ಮದ್ಯೆ ...
ವಿಳಾಸ ಬದಲಾಯಿತು,
ನಗು ತುಂಬಿತು,
ಕೇಲಸ ಎಂದಿನಂತೆ ಸಾಗಿತ್ತು,
ಜೊತೆಗೆ ಮಗುವಿನ ಹುಡುಕಾಟ ಕೂಡ,
ಒಂದೇ ವರ್ಷಕ್ಕೆ ಮನೆ ಮನ ತುಂಬಿದವಳು ..
ಮೂರು ತಿಂಗಳ ಪುಟ್ಟಿ ಸಂಸ್ಕ್ರತಿ,
ಕೇಲಸ ಕಡಿಮೆ ಮಾಡಿದೆ,
ಓಡಾಟ ಬಿಟ್ಟೆ ಅಪ್ಪಟ ಅಮ್ಮ ನಾದೆ,
ಗೆಜ್ಜೆ ಶಬ್ದ, ತೊದಲು ಮಾತು,ನಗು ಆಟ ಹಠ
ಇವೆಲ್ಲದರ ಮದ್ಯೆ ದೊಡ್ಡವಲಾದ್ಲು
ನಮಗೆ ಇನ್ನೊಂದು ಮಗುವಾದರೆ
'ಅನುಭವ್' ಅಂತ ಹೆಸರಿಡೋಣ ಅಂತಿದ್ದ .
"ಇವತ್ತು ಬೇಗ ಬರ್ತೀನಿ ... zoo ಹೋಗೋಣ"
ಅಂದೋನು ಬೇಗ ಹೋಗಿದ್ದ ,
ನಮ್ಮಿಬ್ಬರನ್ನ ಅನಾಥ ಮಾಡಿ.
ಮನೆಗೆಲ್ಲಾ ವಿಷಯ ತಿಳಿಸಿದೆ,
" ನಾವು ಹೊರಡೋಕ್ಕಿಂತ
ನೀನೆ ತಗೊಂಡು ಬಂದು ಬಿಡು
ಇಲ್ಲೇ ವ್ಯವಸ್ತೆ ಮಾಡೋಣ "
ಅಕ್ಸಿಡೆಂಟ್ ಆಗಿರೋದರಿಂದ ಇಡೋದು
ಸರಿಯಲ್ಲ ,
ದೂರದೂರಿನ ಕ್ರೆಮೆಟೋರಿಯಂ ನಲ್ಲಿ
ಸ್ರಜನ್ ಚಟ ಚಟನೆ ಉರಿದು ಹೋಗುವಾಗ
ಸಂಸ್ಕ್ರತಿ ಯನ್ನ ಎದೆಗವಚಿ ಬಿಕ್ಕಿದ್ದೆ .
ಮತ್ತದೇ ಕೇಲಸ, ಪುಟ್ಟಿ, ಬುಕ್
ಬಿಡುವಿಲ್ಲದಂತೆ ಹಚ್ಚಿಕೊಂಡೆ ...
ಊರಿಗೊಮ್ಮೆ ಹೋಗಿ ಬಂದೆ,
ನಮ್ಮಿಸ್ಟ ದಂತೆ ಕಟ್ಟಿಸಿದ ಮನೆ
ಅಲ್ಲಿ ಕುಳಿತು ಆಡಿದ ಮಾತುಗಳು,
ಅಳು ನಗು ಪುಟ್ಟಿಯ ಮೊದಲ ಹೆಜ್ಜೆ,
ಎಲ್ಲ ನೆನಪುಗಳು ಎಳೆ ಎಳೆ ಯಾಗಿ ಅಲ್ಲಿದ್ದವು.
ಜೊತೆಯಾಗಿ ಕಟ್ಟಿದ ಕನಸನ್ನ ಒಂಟಿಯಾಗಿ
ಎಳೆಯಲು ಇ ಊರೇ ಸರಿ,
ಜೀವನದ ದಿಕ್ಕು ನಿಧಾನ ಬದಲಾಯಿತು,
ಶಾಶ್ವತ ವಾಗಿ ಮನೆಗೆ ಬರಬಹುದೇನೋ
ಅನ್ನುವ ಭಯದಲ್ಲಿ ಸಂಬಂಧ ಸಡಿಲವಾಯಿತು.
ಸಂಬಂಧಿಗಳ ಪಾಲಿಗೆ ದ್ವಿಪವೇ ಆದ್ವಿ,
ನನಗವಳು ಅವಳಿಗೆ ನಾನು,
ಬದುಕಿಗೆ ಸಾಕಾಗುವಸ್ಟು ನೆನೆಪು .
ಚಿಕ್ಕಮ್ಮನ ಮಗಳು ಶ್ರೀಮಂತರ ಮನೆಯ ಸೊಸೆಯಾಗಿ
ವರ್ಷಕ್ಕೊಂದರಂತೆ ಇಬ್ಬರು ಮಕ್ಕಳು,
ಅನುಮಾನದ ಗಂಡನ ಜೊತೆ ನಾಲ್ಕು ವರುಷಕ್ಕೆಲ್ಲ
ಬಾಳ್ವೆ ಸಾಕಾಗಿ , ಮಕ್ಕಳನ್ನ ಬಿಟ್ಟು ತವರು ಸೇರಿದ್ದು ,
ಎರಡನೇ ಬರಿ ಊರಿಗೆ ಹೋದಾಗ ತಿಳೀತು .
ಬೇಟಿಯಾದೆ ,ಪ್ರಶ್ನೆಗೆಲ್ಲ ಅಳುವೇ ಕೊನೆ,
ಚಿಕ್ಕಮ್ಮನ ಅಸಹಾಯಕತೆ, ಒಂದು ವಾರ ಇರ್ತೀನಿ,
ವಿಚಾರ ಮಾಡು ...ಬರ್ತೀಯ ಅಂದ್ರೆ...
ಹೊರಡು ನಂಗೂ ಜೊತೆಯಾಯಿತು,
ಹೊಸ ಜಾಗ ಭಾಷೆ ನಗು ಕಾಣಲು
ತಿಂಗಳುಗಳೇ ಹಿಡಿತು .
ಖಾಸಗಿ ಶಾಲೆಯಲ್ಲಿ ಕೇಲಸ ಸಿಗಲು
ಕಷ್ಟ ವಾಗಲಿಲ್ಲ.
ಮಕ್ಕಳಿಗಾಗಿ ಕೋರ್ಟ್ ಮೆಟ್ಟಿಲೇರುವ ಧರ್ಯ ಬಂತು .
ಶರಣ್ಯ ಬಂದಳು ....
'ಆಶ್ರಯ' ದಲ್ಲಿ ಸಂಸ್ಕ್ರತಿ-ಶರಣ್ಯ, ನಾನು ಅಕ್ಕ ..
ಅನುಭವ ಮತ್ತೆ ಸ್ರಜನ್ ಕೂಡ ಬೇಕಿತ್ತು ..
ಅಮ್ಮ ಹೋಂ ವರ್ಕ್ ಮುಗಿದಿದೆ,
ನಿನ್ನ ಜೊತೆಗೆ ತಿಂಡಿ ತಿನ್ನೋಣ ಅಂತ ...
ಬಿಡುವಿಲ್ಲದಂತೆ ಮಾತಾಡುವ ಮಕ್ಕಳು ..
ಎಷ್ಟು ಬೇಗ ದೊಡ್ಡವರಾದರು ...
ನಾ ಮುದುಕಿ ಯಾಗುತ್ತಿದ್ದಿನ...?
ಹಾಲು ಬೇರೆಸ ತೊಡಗಿದೆ ...
ಇ ಬುಕ್ ಮತ್ತೆ ಇನ್ವಿಟೇಶನ್ ಬಂದಿದೆ,
ಕೊಟ್ಟಳು ಶರಣ್ಯ .....
ಇಂದ - ಚೇತನ್
ನೋಡುತ್ತಲೇ ಎರಡು ಚಮಚ ಸಕ್ಕರೆ ಜಾಸ್ತಿ ಹಾಕಿದೆ...